ಮುಸಲ್ಮಾನರು ಮಹಾವಿದ್ಯಾಲಯದ ಹಿಂದೂ ಪ್ರಾಧ್ಯಾಪಕರ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿದರು !

ಬಾಂಗ್ಲಾದೇಶದಲ್ಲಿ ಹಿಂದೂ ವಿದ್ಯಾರ್ಥಿಯನ್ನು ಮುಸಲ್ಮಾನರ ಕೈಯಿಂದ ಬಿಡಿಸಿದ್ದರ ಪರಿಣಾಮ

ಮಿರ್ಝಾಪುರ (ಬಾಂಗ್ಲಾದೇಶ) – ಇಲ್ಲಿನ ಮಿರ್ಝಾಪುರ ಯುನಾಯಟೆಡ ಕಾಲೇಜಿನ ಹಿಂದೂ ಪ್ರಾಧ್ಯಾಪಕರಾದ ಸ್ವಪ್ನ ಕುಮಾರ ಬಿಸ್ವಾಸರವರಿಗೆ ಚಪ್ಪಲಿ ಹಾರ ಹಾಕಿ ಅಪಮಾನಗೊಳಿಸಿದ ಘಟನೆಯು ಮುಸಲ್ಮಾನರಿಂದ ಜೂನ ೧೭ರಂದು ನಡೆದಿರುವ ಮಾಹಿತಿಯು ಬೆಳಕಿಗೆ ಬಂದಿದೆ. ಈ ಸಮಯದಲ್ಲಿ ಪ್ರಾಧ್ಯಾಪಕರು ಹಾಗೂ ಇತರ ಇಬ್ಬರು ಶಿಕ್ಷಕರ ದ್ವಿಚಕ್ರ ವಾಹನಗಳನ್ನು ಸುಡಲಾಯಿತು. ಈ ಘಟನೆಯ ಸಮಯದಲ್ಲಿ ಪೊಲೀಸರು ಉಪಸ್ಥಿತರಿರುವಾಗಲೂ ಅವರು ಪ್ರಾಧ್ಯಾಪಕರಾದ ಬಿಸ್ವಾಸರವರನ್ನು ರಕ್ಷಿಸಲಿಲ್ಲ. ಈ ಘಟನೆಯ ನಂತರ ಹಿಂದೂಗಳು ರಸ್ತೆಗಿಳಿದು ವಿರೋಧ ವ್ಯಕ್ತಪಡಿಸಿದರು. ಈ ಪ್ರಾಧ್ಯಾಪಕರು ಕೆಲವು ದಿನಗಳ ಹಿಂದೆ ಹಿಂದೂ ವಿದ್ಯಾರ್ಥಿಯನ್ನು ಮುಸಲ್ಮಾನರ ಗುಂಪಿನಿಂದ ಬಿಡಿಸಿದ್ದರು. ಅದೇ ಸಿಟ್ಟನ್ನು ಮನಸ್ಸಿನಲ್ಲಿಟ್ಟು ಪ್ರಾಧ್ಯಾಪಕರಿಗೆ ಚಪ್ಪಲಿಯ ಹಾರವನ್ನು ಹಾಕಲಾಯಿತು. ಈ ವಿದ್ಯಾರ್ಥಿಯು ನೂಪುರ ಶರ್ಮಾರವರ ಛಾಯಾಚಿತ್ರವನ್ನು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರ ಮಾಡಿದ್ದನು.

ಮುಸಲ್ಮಾನರ ಆರೋಪವು ಹೀಗಿದೆ, ನೂಪುರ ಶರ್ಮಾರವರ ಛಾಯಾಚಿತ್ರವನ್ನು ಪ್ರಸಾರ ಮಾಡುವ ಹಿಂದೂ ವಿದ್ಯಾರ್ಥಿಯ ಬಗ್ಗೆ ದೂರು ನೀಡಲು ಪ್ರಾಧ್ಯಾಪಕರಾದ ಬಿಸ್ವಾಸರವರ ಬಳಿ ಹೋದಾಗ ಅವರು ಪೊಲೀಸರನ್ನು ಕರೆಯಿಸಿದರು. ಆದುದರಿಂದ ನಮಗೆ ಸಿಟ್ಟು ಬಂದು ನಾವು ಅವರಿಗೆ ಚಪ್ಪಲಿ ಹಾರ ಹಾಕಿದೆವು.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಮಾತ್ರವಲ್ಲ, ಇತರ ಇಸ್ಲಾಮೀ ದೇಶಗಳಲ್ಲಿಯೂ ಹಿಂದೂಗಳಿಗೆ ಹಿಂಸೆ ನೀಡಲಾಗುತ್ತಿರುವಾಗ ಭಾರತ ಸರಕಾರ ಹಾಗೂ ಇಸ್ಲಾಮೀ ದೇಶಗಳ ಸಂಘಟನೆಗಳು ಮೌನವಾಗಿರುತ್ತವೆ; ಆದರೆ ಭಾರತದಲ್ಲಿ ಮುಸಲ್ಮಾನರ ಸಂದರ್ಭದಲ್ಲಿ ಏನೇ ಆದರೂ ಇಸ್ಲಾಮೀ ದೇಶಗಳು ಸಂಘಟಿತರಾಗಿ ಭಾರತವನ್ನು ವಿರೋಧಿಸುತ್ತವೆ, ಎಂಬುದನ್ನು ಗಮನದಲ್ಲಿಡಿ !