ಬಾಂಗ್ಲಾದೇಶದ ನರೇಲ ಜಿಲ್ಲೆಯಲ್ಲಿ ಮುಸಲ್ಮಾನರಿಂದ ಹಿಂದೂಗಳ ನರಸಂಹಾರ ನಡೆಸುವ ಬೆದರಿಕೆ

ನರೇಲ (ಬಾಂಗ್ಲಾದೇಶ) : ಇಸ್ಲಾಂ ಬಗ್ಗೆ ತಥಾಕಥಿತ ಅವಮಾನ ಮಾಡಿರುವ ಪ್ರಕರಣದಲ್ಲಿ ಲೋಹಾಗರಾ ಉಪ ಜಿಲ್ಲೆಯ ದಿಘಲಿಯ ಬಾಜಾರ್ ದಲ್ಲಿ ಜಮಾಯಿಸಿರುವ ಸಾವಿರಾರು ಮುಸಲ್ಮಾನರು ಹಿಂದೂಗಳ ಸಂಹಾರ ನಡೆಸುವ ಬೆದರಿಕೆ ಒಡ್ಡಿದರು. ಇದರ ನಂತರ ಮುಸಲ್ಮಾನರಿಂದ ಹಿಂದೂಗಳ ಮನೆಯ ಮೇಲೆ ದಾಳಿ ನಡೆಸಿ ಲೋಹಾಗರಾದಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಪ್ರಸ್ತುತ ಅಲ್ಲಿಯ ಪರಿಸ್ಥಿತಿ ಹದೆಗೆಟ್ಟಿದೆ. ದೊಡ್ಡ ಪ್ರಮಾಣದಲ್ಲಿ ಹಿಂದೂಗಳಿಗೆ ಹಾನಿ ಮಾಡಲಾಗುತ್ತಿದೆ. ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ ಎಂಬ ಟ್ವಿಟರ್ ಖಾತೆಯಿಂದ ಮಾಹಿತಿ ನೀಡಲಾಗಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಹಿಂದೂಗಳು ಅಸುರಕ್ಷಿತ ! ಬಾಂಗ್ಲಾದೇಶದಲ್ಲಿ ಹಿಂದೂಗಳ ನರಸಂಹಾರ ತಡೆಯುವುದಕ್ಕಾಗಿ ಭಾರತ ಸರಕಾರ ಬಾಂಗ್ಲಾದೇಶದ ಸರಕಾರದ ಮೇಲೆ ಒತ್ತಡ ಹೇರುವುದೇ ?