ಬಾಂಗ್ಲಾದೇಶದ ಜಿಹಾದಿ ಸಂಘಟನೆಯ ಪದಾಧಿಕಾರಿಗಳ ಬಂಧನ

ಢಾಕಾ (ಬಾಂಗ್ಲಾದೇಶ) – ಕೆಲವು ದಿನಗಳ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದಾಗ, ಹಾಗೂ ಅಲ್ಲಿಂದ ಹಿಂದಿರುಗಿದ ನಂತರ ಬಾಂಗ್ಲಾದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಹಿಂಸಾಚಾರ ಮಾಡಲಾಗಿತ್ತು. ಇದರ ಹಿಂದೆ ಜಿಹಾದಿ ಸಂಘಟನೆಯಾದ ಹಿಫಜತ್-ಎ-ಇಸ್ಲಾಂನ ಕೈವಾಡವಿತ್ತು.

ಪ್ರಧಾನಿ ನರೇಂದ್ರ ಮೋದಿಯವರ ಬಾಂಗ್ಲಾದೇಶದ ಭೇಟಿಯ ನಂತರ ಮತ್ತೊಂದು ದೇವಾಲಯದ ಮೇಲೆ ದಾಳಿ !

ಬಾಂಗ್ಲಾದೇಶದ ಬೊಗುಲಾ ಜಿಲ್ಲೆಯ ಧುನೋತ ಉಪಜಿಲ್ಲೆಯ ದೇವಾಲಯವೊಂದರಲ್ಲಿ ಸರಸ್ವತಿ ದೇವಿಯ ವಿಗ್ರಹವನ್ನು ಮತಾಂಧರು ಧ್ವಂಸಗೊಳಿಸಿದರು.

ಬಾಂಗ್ಲಾದೇಶದ ಹಿಂಸಾಚಾರದ ಹಿಂದೆ ನಿಷೇಧಿತ ಜಿಹಾದಿ ಸಂಘಟನೆ, ಜಮಾತೆ ಎ ಇಸ್ಲಾಮಿ ಕೈವಾಡ !

ಸಂಘಟನೆಯನ್ನು ನಿಷೇಧಿಸಲಾಯಿತೆಂದರೆ ಅದರ ಚಟುವಟಿಕೆಗಳು ಮುಗಿಯುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಇಂತಹ ನಿಷೇಧಿತ ಸಂಘಟನೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಅವಶ್ಯಕ !

ಬಾಂಗ್ಲಾದೇಶದಲ್ಲಿ ರಾಧಾಗೋಬಿಂದ ಆಶ್ರಮಕ್ಕೆ ಬೆಂಕಿ ಹಚ್ಚಿದ ಮತಾಂಧರು !

ಬಾಂಗ್ಲಾದೇಶದ ಮಹಮ್ಮದಪುರ ಉಪ ಜಿಲ್ಲೆಯ ೪೦೦ ವರ್ಷಗಳ ಹಳೆಯ ಪರುರ್ಕುಲ ಅಷ್ಟಗ್ರಾಮ ಮಹಾ ಸ್ಮಶಾನವನ್ನು ಮತ್ತು ರಾಧಾ ಗೋಬಿಂದ ಆಶ್ರಮವನ್ನು ಅಪರಿಚಿತ ವ್ಯಕ್ತಿಗಳು ಸುಟ್ಟುಹಾಕಿದ್ದಾರೆ.