ಬಾಂಗ್ಲಾದೇಶದಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ

ಬಾಂಗ್ಲಾದೇಶದಲ್ಲಿ ಹಿಂದೂ ಅಸುರಕ್ಷಿತ !

ಡಾಕಾ – ಬಾಂಗ್ಲಾದೇಶದ ನೇತ್ರಕೋನಾ ಜಿಲ್ಲೆಯ ಕಲಾಮಾಕಾಂಡಾ ಉಪಜಿಲ್ಲೆಯ ಮಹಮ್ಮದ್ ಜೆವೆಲ ಮಿಯಾ ಎಂಬ ಮುಸಲ್ಮಾನ ವ್ಯಕ್ತಿಯು ೧೬ ವಯಸ್ಸಿನ ಹಿಂದೂ ಹುಡುಗಿಯನ್ನು ಅಪಹರಿಸಿದ್ದಾನೆ. ಈ ಪ್ರಕರಣದಲ್ಲಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಬಾಂಗ್ಲಾದೇಶದಲ್ಲಿ ಹಿಂದೂ ನರ್ಸ್ ಮೇಲೆ ಬಲಾತ್ಕಾರ ವೆಸಗಿ ಹತ್ಯೆ

ಢಾಕಾದ ಕಿಶೋರಗಂಜ ಜಿಲ್ಲೆಯ ಯುನೈಟೆಡ್ ಹಾಸ್ಪಿಟಲ್ ನ ಡಾಕ್ಟರ್ ಹನಿಫುರ್ ರೆಹಮಾನ್ ಎಂಬವನು ಓರ್ವ ಹಿಂದೂ ನರ್ಸ್ ಮೇಲೆ ಬಲಾತ್ಕಾರ ವೆಸಗಿ ಆಕೆಯ ಹತ್ಯೆ ಮಾಡಿದ್ದಾನೆ. ಶವ ಪರೀಕ್ಷೆಯ ಸಮಯದಲ್ಲಿ ಆಕೆಯ ಗುಪ್ತಾಂಗದ ಮೇಲೆ ರಕ್ತದ ಕಲೆಗಳು ಕಂಡು ಬಂದಿವೆ ಎಂದು ‘ಸಂಗಬಾದ’ ಎಂಬ ಬಂಗಾಲಿ ದೈನಿಕದಲ್ಲಿ ವಾರ್ತೆ ಪ್ರಸಿದ್ಧವಾಗಿದೆ.