ಹಿಂಸಾಚಾರ ಪೀಡಿತ ಸುಡಾನ್‌ ನಿಂದ ಭಾರತೀಯ ನಾಗರಿಕರು ಸೇರಿದಂತೆ 28 ದೇಶಗಳ 388 ಜನರನ್ನು ಫ್ರಾನ್ಸ್ ಸುರಕ್ಷಿತವಾಗಿ ಸ್ಥಳಾಂತರಿಸಿದೆ !

ಸುಡಾನ್ ನಲ್ಲಿ ಸೈನ್ಯ ಮತ್ತು ಅರೆ ಮಿಲಟರಿ ಪಡೆಯ ಮಧ್ಯೆ ನಡೆಯುತ್ತಿರುವ ಘರ್ಷಣೆ ಮುಂದುವರೆದಿದ್ದೂ ಇದರಲ್ಲಿ ಸಿಲುಕಿರುವ ಜನರನ್ನು ಅಲ್ಲಿಂದ ಸುರಕ್ಷಿತವಾಗಿ ಕರೆತರಲು ಫ್ರಾನ್ಸ ದೇಶ ಮುಂದಾಳತ್ವ ವಹಿಸಿದೆ.

ಯೇಸುವಿನ ಭೇಟಿಗಾಗಿ ಜನರು ಉಪವಾಸವಿದ್ದು ತಮ್ಮನ್ನು ತಾವು ಮಣ್ಣು ಮಾಡಿಕೊಂಡಿದ್ದರಿಂದ ೪೭ ಜನರ ಸಾವು !

ಕೀನ್ಯಾದಲ್ಲಿ ಯೇಸುವನ್ನು ಪ್ರಸನ್ನ ಗೊಳಿಸುವುದಕ್ಕಾಗಿ ‘ಗುಡ್ ನ್ಯೂಸ್ ಇಂಟರ್ನ್ಯಾಷನಲ್ ಚರ್ಚ್’ನ ಪಾಲ್ ಮೆಕೆಂಝಿ ಎಂಬ ಪಾದ್ರಿಯ ಹೇಳಿದ್ದರಿಂದ ಜನರು ಅನೇಕ ದಿನ ಉಪವಾಸವಿದ್ದು ತಮ್ಮನ್ನು ತಾವು ಮಣ್ಣು ಮಾಡಿಕೊಂಡಿದ್ದರಿಂದ ೪೭ ಜನರು ಸಾವನ್ನಪ್ಪಿದ್ದಾರೆ.

ಹಿಂಸಾಚಾರ ನಡೆಯುತ್ತಿರುವ ಸುಡಾನ್ ದೇಶದಿಂದ ವಿದೇಶಿ ನಾಗರಿಕರನ್ನು ಹೊರ ತೆಗೆಯುವ ಪ್ರಯತ್ನಗಳಿಗೆ ಗತಿ

ಇಂಗ್ಲೆಂಡ್, ಅಮೇರಿಕಾ, ಫ್ರಾನ್ಸ ಮತ್ತು ಚೀನಾ ದೇಶಗಳು ಇಲ್ಲಿನ ತಮ್ಮ ಸರಕಾರಿ ಅಧಿಕಾರಿಗಳು ಮತ್ತು ನಾಗರಿಕರನ್ನು ಹಿಂಸಾಚಾರದಿಂದ ನಲುಗಿರುವ ಸುಡಾನ್ ದೇಶದಿಂದ ವಾಯುಯಾನ ಮಾರ್ಗದಿಂದ ಕರೆತರಲು ಪ್ರಯತ್ನಿಸುತ್ತಿವೆ ಎಂದು ಸುಡಾನ್ ಸೈನ್ಯ ಮಾಹಿತಿ ನೀಡಿದೆ.

ಸುಡಾನನ ರಾಜಧಾನಿ ಖಾರ್ಟೂಮದಲ್ಲಿ ೫೦ ಲಕ್ಷ ನಾಗರಿಕರ ಪಲಾಯನ !

ಸುಡಾನದಲ್ಲಿ ಭಾರತೀಯರ ರಕ್ಷಣೆಗಾಗಿ ಭಾರತ ಸರಕಾರದಿಂದ ನಿಯಂತ್ರಣ ಕಕ್ಷೆಯ ಸ್ಥಾಪನೆ !

ಇಂದಿನ ಭಾರತ ಪ್ರತ್ಯುತ್ತರ ನೀಡುವ ದೇಶ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ಯಾವ ಶಕ್ತಿಗಳು ದಶಕಗಳಿಂದ ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದವು, ಅವರಿಗೆ ಈಗಿನ ಭಾರತವು ವಿಭಿನ್ನವಾಗಿದೆ, ಅದು ಪ್ರತ್ಯುತ್ತರ ನೀಡುತ್ತದೆ ಎಂಬುದು ಅರಿವಾಗಿದೆ, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಅಲ್ಲಿ ಭಾರತೀಯ ಮೂಲದ ನಾಗರಿಕರಿಗಾಗಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

ಕೀನ್ಯಾದಲ್ಲಿ ಸ್ಥಳೀಯ ನಾಗರಿಕರಿಂದ ಚೀನಿ ವ್ಯಾಪಾರಿಗಳ ವಿರುದ್ಧ ಆಂದೋಲನ

ಕೀನ್ಯಾ ಜನರು ಚೀನಿ ವ್ಯಾಪಾರಿಗಳ ವಿರುದ್ಧ ಆಂದೋಲನ ಪ್ರಾರಂಭಿಸಿದ್ದಾರೆ. ಸಾವಿರಾರು ನಾಗರಿಕರು ರಸ್ತೆಗಿಳಿದು ‘ಚೈನೀಸ್ ಮಸ್ಟ ಗೋ’ (ಚೀನಿ ನಾಗರಿಕರು ಇಲ್ಲಿಂದ ತೊಗಿರಿ) ಬರೆದಿರುವ ಫಲಕಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಿದ್ದಾರೆ. ಸ್ಥಳೀಯ ವ್ಯಾಪಾರಿಗಳು ಚೀನಿ ವ್ಯಾಪಾರಿಗಳಿಗೆ ದೇಶವನ್ನು ಬಿಡುವಂತೆ ಹೇಳಿದ್ದಾರೆ.

ಸುಡಾನನಲ್ಲಿ ವಿಶ್ವ ಸಂಸ್ಥೆಯ ಶಾಂತಿ ಮಿಶನ ಅಡಿಯಲ್ಲಿ ಭಾರತೀಯ ಮಹಿಳಾ ಸೈನಿಕರ ರೆಜಿಮೆಂಟ್ ನ ನೇಮಕ

ಇದರಲ್ಲಿ 2 ಸೈನ್ಯಾಧಿಕಾರಿ ಮತ್ತು 25 ಸೈನಿಕರ ಸಮಾವೇಶವಿದೆ. ಅಬಯೇಯಿ ಪ್ರದೇಶ ಜಗತ್ತಿನ ಅತ್ಯಧಿಕ ಅಶಾಂತಿ ತುಂಬಿರುವ ಕ್ಷೇತ್ರವೆಂದು ತಿಳಿಯಲಾಗುತ್ತದೆ. ಇಲ್ಲಿ ಜನವರಿ 4 ರಂದು 200 ಜನರ ಗುಂಪು ಒಂದು ಗ್ರಾಮದ ಮೇಲೆ ದಾಳಿ ಮಾಡಿ 13 ಜನರ ಹತ್ಯೆ ಮಾಡಿದೆ.

ಪಶ್ಚಿಮ ಆಫ್ರಿಕಾದಲ್ಲಿನ ಸೆನೆಗಲ ದೇಶದಲ್ಲಿ ಗರ್ಭಿಣಿ ಸಂಸದೆಯ ಹೊಟ್ಟೆಗೆ ಒದೆದಿರುವ ೨ ಸಂಸದರಿಗೆ ಜೈಲುವಾಸ !

ಸೆನೆಗಲನಲ್ಲಿ ಗೂಂಡಾಗಳಂತೆ ವರ್ತಿಸಿದ ಸಂಸದರಿಗೆ ತಕ್ಷಣ ಶಿಕ್ಷೆ ನೀಡಲಾಯಿತು. ಭಾರತದಲ್ಲಿ ಎಂದಾದರೂ ಹೀಗೆ ಆಗಲು ಸಾಧ್ಯವೇ ?

ಈಜುಕೊಳದಲ್ಲಿ ಈಜುತ್ತಿರುವ ಕಪ್ಪು ಹುಡುಗರಿಗೆ ಬಿಳಿಯರಿಂದ ಥಳಿತ

ಇಂತಹ ಘಟನೆಯ ಬಗ್ಗೆ ಅಮೇರಿಕಾ ಹಾಗೂ ಯುರೋಪಿನ ದೇಶಗಳು, ಅವರ ಮಾನವ ಹಕ್ಕುಗಳ ಸಂಘಟನೆಗಳು ಎಂದೂ ಬಾಯಿ ಬಿಡುವುದಿಲ್ಲ; ಆದರೆ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯದೇ ಇರುವ ಅತ್ಯಾಚಾರದ ಬಗ್ಗೆ ಹಿಂದೂಗಳನ್ನು ಗುರಿ ಮಾಡುವಲ್ಲಿ ಮಂಚೂಣಿಯಲ್ಲಿರುತ್ತಾರೆ !

ಈಜಿಪ್ಟಿನಲ್ಲಿ ೪ ಸಾವಿರ ಐದು ನೂರು ವರುಷಗಳ ಪುರಾತನ ಸೂರ್ಯ ಮಂದಿರ ಪತ್ತೆ !

ಈಜಿಪ್ತಿನ ಪುರಾತತ್ವ ಇಲಾಖೆ ಇಲ್ಲಿಯ ಅಬುಸಿರ ಭಾಗದಲ್ಲಿ ಒಂದು ಪ್ರಾಚೀನ ಸೂರ್ಯ ಮಂದಿರ ಕಂಡು ಹಿಡಿದಿದೆ. ಈ ಮಂದಿರ ಸುಮಾರು ೪,೫೦೦ ವರ್ಷಗಳ ಹಳೆಯದ್ದಾಗಿದೆ ಎಂದು ಹೇಳಲಾಗುತ್ತಿದೆ.