ಅಮೆರಿಕಾದಿಂದ 9 ಲಕ್ಷ ವಲಸಿಗರ ಪರವಾನಗಿ ರದ್ದುಗೊಳಿಸಿ ತಕ್ಷಣ ದೇಶ ತೊರೆಯಲು ಆದೇಶ

ವಾಷಿಂಗ್ಟನ್ (ಅಮೆರಿಕಾ) – ಅಮೆರಿಕಾದಲ್ಲಿ ಏಕಕಾಲಕ್ಕೆ 9 ಲಕ್ಷ ವಲಸಿಗರ ಕಾನೂನು ಪರವಾನಗಿಗಳನ್ನು ರದ್ದುಗೊಳಿಸಿ, ತಕ್ಷಣ ಅಮೆರಿಕಾವನ್ನು ತೊರೆಯಲು ಆದೇಶಿಸಲಾಗಿದೆ. ‘ಸಿಬಿಪಿ ಒನ್ ಆ್ಯಪ್’ ನೀತಿಯಡಿ ಈ ವಲಸಿಗರು ಅಮೆರಿಕಾಗೆ ಬಂದಿದ್ದರು. ಟ್ರಂಪ್ ಆಡಳಿತವು ಈ ನೀತಿಯನ್ನು ಹಿಂಪಡೆದಿದೆ ಮತ್ತು ಈ ವಲಸಿಗರ ಕಾನೂನು ಪರವಾನಗಿಗಳನ್ನು ರದ್ದುಗೊಳಿಸಿದೆ. ಇದರಲ್ಲಿ ಭಾರತೀಯರ ಸಹಭಾಗದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಜನವರಿ 2023 ರಿಂದ ಡಿಸೆಂಬರ್ 2024 ರವರೆಗೆ, ‘ಸಿಬಿಪಿ ಒನ್ ಆ್ಯಪ್’ ಬಳಸಿ 9 ಲಕ್ಷ 36 ಸಾವಿರ 500 ಜನರು ಮೆಕ್ಸಿಕೋ ಗಡಿಯ ಮೂಲಕ ಅಮೆರಿಕಾವನ್ನು ಪ್ರವೇಶಿಸಿದ್ದಾರೆ. ಅವರಿಗೆ ಪೆರೋಲ್ ಎಂಬ ಅಧ್ಯಕ್ಷೀಯ ಅಧಿಕಾರದ ಅಡಿಯಲ್ಲಿ ಕೆಲಸ ಮಾಡುವ ಹಕ್ಕು ನೀಡಿ 2 ವರ್ಷಗಳ ಕಾಲ ಅಮೆರಿಕಾದಲ್ಲಿ ವಾಸಿಸಲು ಅನುಮತಿ ನೀಡಲಾಗಿತ್ತು. ಅಮೆರಿಕಾದ ಜನರು ಮತ್ತು ದೇಶದ ಗಡಿಯನ್ನು ಸುರಕ್ಷಿತವಾಗಿರಿಸಲು ಈ ಪೆರೋಲ್ ವನ್ನು ಈಗ ರದ್ದುಗೊಳಿಸಲಾಗಿದೆ ಎಂದು ಟ್ರಂಪ್ ಆಡಳಿತದ ಗೃಹ ಭದ್ರತಾ ಇಲಾಖೆ ತಿಳಿಸಿದೆ.

‘ಸಿಬಿಪಿ ಒನ್ ಆ್ಯಪ್’ ಮೂಲಕ ಅಮೆರಿಕಾವನ್ನು ಪ್ರವೇಶಿಸಿದ ಜನರಿಗೆ ಪರವಾನಗಿ ರದ್ದತಿಯ ಬಗ್ಗೆ ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ನುಸುಳುಕೋರರನ್ನೇ ಹೊರಹಾಕುತ್ತಿಲ್ಲ, ಇನ್ನು ವಲಸಿಗರನ್ನು ಯಾರು ಹೊರಗೆ ಕಳುಹಿಸುತ್ತಾರೆ? ಸರಕಾರ ಈಗಲಾದರೂ ಅಮೆರಿಕಾದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆಯೇ?