ನೈಜೀರಿಯಾದಲ್ಲಿ ಇಸ್ಲಾಮಿ ಭಯೋತ್ಪಾದಕರಿಂದ ಒಂದೇ ವಾರದಲ್ಲಿ ೧೩೪ ಕ್ರೈಸ್ತರ ಹತ್ಯೆ !

ಅಬುಜಾ (ನೈಜೀರಿಯಾ) – ನೈಜೀರಿಯಾದಲ್ಲಿ ಇಸ್ಲಾಮಿ ಭಯೋತ್ಪಾದಕರಿಂದ ಒಂದು ವಾರದಲ್ಲಿ ೧೩೪ ಕ್ರೈಸ್ತರ ಹತ್ಯೆ ಮಾಡಿದೆ. ನೈಜೇರಿಯದಲ್ಲಿನ ಶಸ್ತ್ರಸಜ್ಜಿತ ಜಿಹಾದಿ ಭಯೋತ್ಪಾದಕರು ಬಹಳ ಸಮಯದಿಂದ ಕೆಲವು ರಾಜ್ಯದಲ್ಲಿನ ಕ್ರೈಸ್ತರ ಮೇಲೆ ದಾಳಿ ನಡೆಸುತ್ತಿದ್ದಾರೆ. ಏಪ್ರಿಲ್ ೫ ರಂದು ಭಯೋತ್ಪಾದಕರಿಂದ ಉಮೋಗಿಡಿ ಗ್ರಾಮದಲ್ಲಿ ದಾಳಿ ನಡೆಸಿ ೫೨ ಕ್ರೈಸ್ತರನ್ನು ಹಾಗೂ ಏಪ್ರಿಲ್ ೭ ರಂದು ಎನಗಬಾನನೆ ಗ್ರಾಮದಲ್ಲಿ ದಾಳಿ ನಡೆಸಿ ೩೮ ಕ್ರೈಸ್ತರ ಹತ್ಯೆ ನಡೆಸಿದ್ದಾರೆ.

ಮನೆಗೆ ನುಗ್ಗಿ ಪಾದ್ರಿಯ ಹತ್ಯೆ !

ಭಯೋತ್ಪಾದಕರು ಇಲ್ಲಿ ಓರ್ವ ಪಾದ್ರಿಯ ಮನೆಗೆ ನುಗ್ಗಿ ಹತ್ಯೆ ಮಾಡಿದ್ದಾರೆ, ಎಂದು ನೈಜೇರಿಯದ ನಾಯಕ ಸಲಾಮತೂ ಬಿಲ್ಲಿ ಇವರು ಮಾಹಿತಿ ನೀಡಿದರು. ಪಾದ್ರಿಯ ಹತ್ಯೆ ಮಾಡಿದ ನಂತರ ಭಯೋತ್ಪಾದಕರು ನಿಝಮತಿಲೋ, ಪುಲಕಾ, ಅಝಿರಿ ಮಾಫಾ ಇತ್ಯಾದಿ ಕ್ರೈಸ್ತ ಬವುಸಂಖ್ಯಾತ ಗ್ರಾಮದಲ್ಲಿ ದಾಳಿ ನಡೆಸಿರುವ ಮಾಹಿತಿ ಕೂಡ ಬಿಲ್ಲಿ ಅವರು ನೀಡಿದರು.

ಸಂಪಾದಕೀಯ ನಿಲುವು

ಭಯೋತ್ಪಾದಕರಿಗೆ ಧರ್ಮ ಇರುವುದಿಲ್ಲ’ ಎಂದು ನಿರಂತರವಾಗಿ ಕೂಗಾಡುವವರು ಇದರ ಬಗ್ಗೆ ಏನು ಹೇಳುವರು ?