-
ಕೀನ್ಯಾದಲ್ಲಿ ಪಾದ್ರಿ ಹೇಳಿದ್ದರಿಂದ ನಡೆದ ಘಟನೆ
-
ಪಾದ್ರಿಯ ಬಂಧನ !
ನೈರೋಬಿ (ಕೀನ್ಯಾ) – ಕೀನ್ಯಾದಲ್ಲಿ ಯೇಸುವನ್ನು ಪ್ರಸನ್ನ ಗೊಳಿಸುವುದಕ್ಕಾಗಿ ‘ಗುಡ್ ನ್ಯೂಸ್ ಇಂಟರ್ನ್ಯಾಷನಲ್ ಚರ್ಚ್’ನ ಪಾಲ್ ಮೆಕೆಂಝಿ ಎಂಬ ಪಾದ್ರಿಯ ಹೇಳಿದ್ದರಿಂದ ಜನರು ಅನೇಕ ದಿನ ಉಪವಾಸವಿದ್ದು ತಮ್ಮನ್ನು ತಾವು ಮಣ್ಣು ಮಾಡಿಕೊಂಡಿದ್ದರಿಂದ ೪೭ ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಬಾಲಕರ ಸಮಾವೇಶ ಕೂಡ ಇದೆ. ಪೊಲೀಸರು ಮಾಲಿಂದಿ ನಗರದ ಕಾಡಿನಿಂದ ಇಲ್ಲಿಯವರೆಗೆ ೪೭ ಶವಗಳನ್ನು ಹುಡುಕಿ ತೆಗೆದಿದ್ದಾರೆ. ಇದರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ಪೊಲೀಸರು ಪಾದ್ರಿಯನ್ನು ಬಂಧಿಸಿದ್ದಾರೆ. ಪಾಲ್ ಇವನು ಈ ಜನರಿಗೆ ‘ಸ್ವಂತಃ ಮಣ್ಣು ಮಾಡಿಕೊಂಡರೆ ಯೇಸುವಿನ ಭೇಟಿ ಆಗುವುದು ಮತ್ತು ಅವರಿಗೆ ಸ್ವರ್ಗದಲ್ಲಿ ಸ್ಥಾನ ಸಿಗುವುದು, ಎಂದು ಕೂಡ ಹೇಳಿದ್ದನು. ಪಾದ್ರಿ ಪಾಲ್ ಇವನ ಪ್ರಕಾರ, ನಾನು ಯಾರಿಗೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿರಲಿಲ್ಲ. ನಾನು ೨೦೧೯ ರಿಂದ ಚರ್ಚ್ ಮುಚ್ಚಿದ್ದೇನೆ ಎಂದು ಹೇಳಿದರು.
47 people die fasting at Good News International Churchhttps://t.co/87Kd2FCb9s
— Peoples Gazette (@GazetteNGR) April 24, 2023
ಸಂಪಾದಕರ ನಿಲುವುಭಾರತದಲ್ಲಿ ಇಂತಹ ಘಟನೆ ನಡೆಯುವ ಮೊದಲು ಸರಕಾರ ಮತ್ತು ಆಡಳಿತ ವ್ಯವಸ್ಥೆಯಿಂದ ಕ್ರೈಸ್ತ ಮಿಷನರಿ ಮತ್ತು ಚರ್ಚಗಳ ಮೇಲೆ ನಿಗಾ ವಹಿಸುವುದು ಅವಶ್ಯಕವಾಗಿದೆ ! |