ಹಿಂಸಾಚಾರ ಪೀಡಿತ ಸುಡಾನ್‌ ನಿಂದ ಭಾರತೀಯ ನಾಗರಿಕರು ಸೇರಿದಂತೆ 28 ದೇಶಗಳ 388 ಜನರನ್ನು ಫ್ರಾನ್ಸ್ ಸುರಕ್ಷಿತವಾಗಿ ಸ್ಥಳಾಂತರಿಸಿದೆ !

ಖಾರ್ಟೂಮ್ (ಸುಡಾನ್) – ಸುಡಾನ್ ನಲ್ಲಿ ಸೈನ್ಯ ಮತ್ತು ಅರೆ ಮಿಲಟರಿ ಪಡೆಯ ಮಧ್ಯೆ ನಡೆಯುತ್ತಿರುವ ಘರ್ಷಣೆ ಮುಂದುವರೆದಿದ್ದೂ ಇದರಲ್ಲಿ ಸಿಲುಕಿರುವ ಜನರನ್ನು ಅಲ್ಲಿಂದ ಸುರಕ್ಷಿತವಾಗಿ ಕರೆತರಲು ಫ್ರಾನ್ಸ ದೇಶ ಮುಂದಾಳತ್ವ ವಹಿಸಿದೆ. ಫ್ರಾನ್ಸ ಭಾರತೀಯ ನಾಗರಿಕ ಸಹಿತ 28 ದೇಶಗಳ 388 ಜನರನ್ನು ಹಿಂಸಾಚಾರ ಪೀಡಿತ ಸುಡಾನ ದೇಶದಿಂದ ಸುರಕ್ಷಿತವಾಗಿ ಕರೆತಂದಿದ್ದಾರೆ.

1. ಸುಡಾನ್ ಸಧ್ಯಕ್ಕೆ ಹಿಂಸಾಚಾರದಲ್ಲಿ ಸಿಲುಕಿದೆ. ಸುಡಾನ ರಾಜಧಾನಿ ಖಾರ್ಟೂಮ್ ನಲ್ಲಿ ಎಪ್ರಿಲ್ 15 ರಿಂದ ಪ್ರಾರಂಭವಾಗಿರುವ ಹಿಂಸಾಚಾರ ಈಗಲೂ ಮುಂದುವರಿದಿದೆ. ಈ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 200 ಕ್ಕಿಂತ ಅಧಿಕ ನಾಗರಿಕರು ಸಾವನ್ನಪ್ಪಿದ್ದಾರೆ.

2. ಸುಡಾನನಲ್ಲಿರುವ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ, ಆದರೂ ಸುಡಾನ್ ನಿಂದ ತಮ್ಮ ತಮ್ಮ ನಾಗರಿಕರನ್ನು ಸುರಕ್ಷಿತವಾಗಿ ಕರೆತರಲು ಸಂಬಂಧಪಟ್ಟ ದೇಶಗಳು ಪ್ರಯತ್ನಿಸುತ್ತಿವೆ. ಸುಡಾನ್ ನಲ್ಲಿನ ಅಮೇರಿಕಾದ ರಾಯಭಾರ ಕಚೇರಿಯನ್ನು ಇತ್ತೀಚೆಗೆ ತೆರವುಗೊಳಿಸಲಾಗಿದೆ.