ಆರೋಪಿ ನಜರುದ್ದೀನ ಬಂಧನ, ಆತನ ಇತರ ಸಹಚರರ ಶೋಧ ಕಾರ್ಯ ಮುಂದುವರೆದಿದೆ!
ಆಗ್ರಾ (ಉತ್ತರ ಪ್ರದೇಶ) – ಇಲ್ಲಿನ ಶಾಹಿ ಜಾಮಾ ಮಸೀದಿಯಲ್ಲಿ ಅಪರಿಚಿತರು ಇಸ್ಲಾಂನಲ್ಲಿ ನಿಷಿದ್ಧವಾದ ಪ್ರಾಣಿಯ ಮಾಂಸವನ್ನು ಎಸೆದಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮುಸಲ್ಮಾನರು ಶುಕ್ರವಾರದ ನಮಾಜಗಾಗಿ ಮಸೀದಿಗೆ ತಲುಪಿದಾಗ, ಅವರಿಗೆ ವಜೂ (ನಮಾಜಗೆ ಮುಂಚೆ ಕೈಕಾಲು ತೊಳೆಯುವ ಸ್ಥಳ) ಬಳಿ ಪಾಲಿಥಿನ ಚೀಲವೊಂದು ಕಂಡುಬಂದಿತು. ಅದರಲ್ಲಿ ಈ ಮಾಂಸ ಇರುವುದು ಬೆಳಕಿಗೆ ಬಂದಿತು. ನಂತರ ಪೊಲೀಸರಿಗೆ ತಿಳಿಸಲಾಯಿತು. ಪೊಲೀಸರು ಮುಸಲ್ಮಾನರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದರು, ಹಾಗೂ ಪೊಲೀಸರು ಕೇವಲ 5 ಗಂಟೆಗಳಲ್ಲಿ ತನಿಖೆ ನಡೆಸಿ ಈ ಪ್ರಕರಣದಲ್ಲಿ ನಜರುದ್ದೀನ ಎಂಬ ಮುಸ್ಲಿಂ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಅಪರಾಧದಲ್ಲಿ ಆತನೊಂದಿಗೆ ಇನ್ನೂ ಎಷ್ಟು ಜನರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಪ್ರಸ್ತುತ ಇಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ. ಮಸೀದಿಯ ಸುತ್ತಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅವುಗಳ ಆಧಾರದ ಮೇಲೆ ಪೊಲೀಸರು ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದಕ್ಕಾಗಿ 5 ತಂಡಗಳನ್ನು ರಚಿಸಲಾಗಿದ್ದು, ಈ ಘಟನೆಯನ್ನು ಇಲ್ಲಿನ ಶಾಂತಿಯನ್ನು ಕದಡಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
🚨 Agra: Nazaruddin caught on CCTV throwing forbidden meat in Shahi Jama Masjid 🕌
Police arrested culprit after frenzied mobs gathered in protest
Is this not yet another case of fanatics themselves becoming the conspirators—deliberately inciting communal tension to target… pic.twitter.com/xngblGUvLA
— Sanatan Prabhat (@SanatanPrabhat) April 11, 2025
ಸಂಪಾದಕೀಯ ನಿಲುವು
|