೩೬೦ ಮಂದಿ ಭಾರತಕ್ಕೆ ವಾಪಸ್ !
ಖಾರ್ಟುಮ್ (ಸುಡಾನ್) – ಇಲ್ಲಿ ನಡೆಯುತ್ತಿರುವ ಗೃಹರ್ಯುದ್ಧದ ಹಿನ್ನೆಲೆಯಲ್ಲಿ, ಅಲ್ಲಿನ ಭಾರತೀಯರನ್ನು ಭಾರತಕ್ಕೆ ಕರೆತರಲು ಭಾರತ ಸರಕರವು ‘ಆಪರೇಷನ್ ಕಾವೇರಿ’ಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ೩೬೦ ನಾಗರಿಕರ ಒಂದು ಗುಂಪು ಭಾರತಕ್ಕೆ ಮರಳಿದೆ. ಅವರನ್ನು ಸುಡಾನ್‌ನಿಂದ ಹಡಗಿನ ಮೂಲಕ ಸೌದಿ ಅರೇಬಿಯಾದ ಜೆದ್ದಾಕ್ಕೆ ಕರೆತರಲಾಯಿತು ಮತ್ತು ನಂತರ ವಿಮಾನದಿಂದ ನವ ದೆಹಲಿಗೆ ಕರೆತರಲಾಯಿತು. ಓರ್ವ ಹುಡುಗಿಯು, ನಾವು ಸುಡಾನ್‌ನಲ್ಲಿ ನಾವು ಯಾವುದೇ ಕ್ಷಣದಲ್ಲಿ ಕೊಲ್ಲಲ್ಪಡುತ್ತೇವೆ ಎಂದು ಬಾಲಕಿಯೊಬ್ಬಳು ಹೇಳಿದಳು.
ಸುಡಾನ್‌ನಿಂದ ಇಲ್ಲಿಯವರೆಗೆ ೧ ಸಾವಿರದ ೧೦೦ ಭಾರತೀಯರನ್ನು ಸೌದಿ ಅರೇಬಿಯಾಕ್ಕೆ ಕರೆತರಲಾಗಿದೆ. ಅದರಲ್ಲಿ ೩೬೦ ಮಂದಿಯನ್ನು ಭಾರತಕ್ಕೆ ಕರೆತರಲಾಗಿದ್ದು, ಉಳಿದವರನ್ನು ಕರೆತರುವ ಪ್ರಕ್ರಿಯೆ ನಡೆಯುತ್ತಿದೆ. ಸುಡಾನ್‌ನಲ್ಲಿ ೪ ಸಾವಿರಕ್ಕೂ ಹೆಚ್ಚು ಭಾರತೀಯರಿದ್ದಾರೆ.
Over 1,100 Indians evacuated from conflict-ridden Sudan under GoI’s #OperationKaveri.
Another batch of 128 people is currently on its way to India.@RishabhMPratap shares more details on the same with @anchoramitaw – Watch. pic.twitter.com/JUn5amFpaE
— TIMES NOW (@TimesNow) April 27, 2023