Muslim Man Attack Neighbor Boys : ಸಲ್ಮಾನ್ ಎಂಬ ಯುವಕನಿಂದಾದ ಮಾರಣಾಂತಿಕ ಹಲ್ಲೆ ; ನೆರೆಮನೆಯ ಪ್ರಿಯಾಂಶು ಗಂಭೀರವಾಗಿ ಗಾಯ

ಲಕ್ಷ್ಮಣಪುರಿ (ಉತ್ತರಪ್ರದೇಶ) ಘಟನೆ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿನ ಮಲಿಹಾಬಾದದಲ್ಲಿ ಏಪ್ರಿಲ್ 8 ರ ರಾತ್ರಿ 10 ಗಂಟೆ ಸುಮಾರಿಗೆ ಸಲ್ಮಾನ್ ಎಂಬ ಯುವಕ ಪ್ರಿಯಾಂಶು ಗೌತಮ್‌ನ ಶಿರಚ್ಛೇದನ ಮಾಡಲು ಯತ್ನಿಸಿದ್ದಾನೆ. ಇದರಿಂದ ಪ್ರಿಯಾಂಶುವಿನ ಕುತ್ತಿಗೆಯ ನರ ತುಂಡಾಯಿತು. ಆ ಸಮಯದಲ್ಲಿ ಪ್ರಿಯಾಂಶುವನ್ನು ರಕ್ಷಿಸಲು ಬಂದ ಆನಂದ್ ಎಂಬ ಯುವಕನ ಮೇಲೂ ಸಲ್ಮಾನ್ ಹಲ್ಲೆ ಮಾಡಿದ್ದಾನೆ. ಇದರಿಂದ ಆತನೂ ಗಾಯಗೊಂಡಿದ್ದಾನೆ. ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆರೋಪಿ ಸಲ್ಮಾನ್‌ನನ್ನು ಬಂಧಿಸಿದ್ದಾರೆ. ಈ ಘಟನೆಯಿಂದ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಇಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಏನು ಈ ಪ್ರಕರಣ ?

ಪ್ರಿಯಾಂಶು ರಾತ್ರಿ ಮನೆಯ ಹೊರಗೆ ಕುಳಿತು ತನ್ನ ಸ್ನೇಹಿತ ಆನಂದ್‌ನೊಂದಿಗೆ ಮಾತನಾಡುತ್ತಿದ್ದಾಗ, ನೆರೆಮನೆಯಲ್ಲಿ ವಾಸಿಸುವ ಸಲ್ಮಾನ್ ಅಲ್ಲಿಗೆ ಬಂದು ಮಸಾಲೆ ತರಲು ಆನಂದ್‌ಗೆ ಹೇಳಿದ್ದಾನೆ. ಆನಂದ್ ಮಸಾಲೆ ತರಲು ನಿರಾಕರಿಸಿದ್ದರಿಂದ ಸಲ್ಮಾನ್ ಇಬ್ಬರನ್ನೂ ನಿಂದಿಸಲು ಪ್ರಾರಂಭಿಸಿದನು. ಪ್ರಿಯಾಂಶು ವಿರೋಧಿಸಿದಾಗ, ಸಲ್ಮಾನ್ ಆತನನ್ನು ತಳ್ಳಿದನು ಮತ್ತು ಅವನು ಕೆಳಗೆ ಬಿದ್ದನು. ನಂತರ ಆತನ ಎದೆಯ ಮೇಲೆ ಕುಳಿತು ಚಾಕುವಿನಿಂದ ಆತನ ಕುತ್ತಿಗೆಯ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದನು. ಆತ ಪ್ರಿಯಾಂಶುವಿನ ತಲೆಯನ್ನೂ ಒಡೆದಿದ್ದಾನೆ. ಆನಂದ್ ಆತನನ್ನು ರಕ್ಷಿಸಲು ಪ್ರಯತ್ನಿಸಿದಾಗ, ಆತನ ಮೇಲೂ ಹಲ್ಲೆ ಮಾಡಲಾಗಿದೆ. ಕೂಗಾಟ ಕೇಳಿ ಸುತ್ತಮುತ್ತಲಿನ ಜನರು ಮನೆಗಳಿಂದ ಹೊರಬಂದಾಗ ಸಲ್ಮಾನ್ ಅಲ್ಲಿಂದ ಓಡಿಹೋದನು. ಸಲ್ಮಾನ್ ಪ್ರತಿದಿನ ಯಾರೊಂದಿಗಾದರೂ ಬೈಯ್ಯುತ್ತಾ ಜಗಳವಾಡುತ್ತಾನೆ ಎಂದು ಜನರು ಹೇಳುತ್ತಾರೆ. ಅವನು ಇಲ್ಲಿನ ಹುಡುಗರನ್ನು ಹಲವು ಬಾರಿ ಹೊಡೆದಿದ್ದಾನೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದೂಗಳೇ ಅಸುರಕ್ಷಿತರು! ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೊಂದೇ ಪರಿಹಾರ !