ಸೆನೆಗಲನಲ್ಲಿ ಗೂಂಡಾಗಳಂತೆ ವರ್ತಿಸಿದ ಸಂಸದರಿಗೆ ತಕ್ಷಣ ಶಿಕ್ಷೆ ನೀಡಲಾಯಿತು. ಭಾರತದಲ್ಲಿ ಎಂದಾದರೂ ಹೀಗೆ ಆಗಲು ಸಾಧ್ಯವೇ ?
ಡಕಾರ – ಇಲ್ಲಿನ ಸಂಸತ್ತಿನಲ್ಲಿ ಆರ್ಥಿಕ ಸಂಕಲ್ಪದ ಮೇಲೆ ಚರ್ಚೆ ನಡೆದಿತ್ತು. ಚರ್ಚೆಯ ಸಮಯದಲ್ಲಿ ಸಂಸದರ ನಡುವೆ ವಾದ-ವಿವಾದ ನಡೆಯಿತು. ವಾದವು ವಿಕೋಪಕ್ಕೆ ಹೋದಾಗ ಮಾಮಾಡೊ ನಿಯಾಂಗ ಮತ್ತು ಮಸಾತಾ ಸಾಂಬ ಎಂಬ ಇಬ್ಬರು ಸಂಸದರು ಗರ್ಭಿಣಿಯಾಗಿದ್ದ ಎಮಿ ನಾದಿಯೆ ಎಂಬ ಓರ್ವ ಮಹಿಳಾ ಸಂಸದೆಯ ಹೊಟ್ಟೆಗೆ ಒದೆದರು. ಇದರಿಂದ ಅವರು ಪ್ರಜ್ಞೆ ತಪ್ಪಿ ಬಿದ್ದರು.
Watch: Senegalese MPs attack and kick a pregnant legislator in parliament over her remarks on an influential Muslim leader, jailed https://t.co/ayvHPClLVS
— OpIndia.com (@OpIndia_com) January 4, 2023
ಈ ಪ್ರಕರಣದಲ್ಲಿ ಮಾಮಾಡೊ ನಿಯಾಂಗ ಮತ್ತು ಮಸಾತಾ ಸಾಂಬರಿಗೆ ಶಿಕ್ಷೆ ಘೋಷಿಸಲಾಗಿದ್ದು ಅವರಿಗೆ ಜೈಲಿಗೆ ಅಟ್ಟಲಾಯಿತು. ಈ ಇಬ್ಬರು ಸಂಸದರಿಗೆ ೬ ತಿಂಗಳ ಜೈಲುಶಿಕ್ಷೆಯನ್ನು ವಿಧಿಸಲಾಗಿದೆ. ನಿಯಾಂಗ ಮತ್ತು ಸಾಂಬರಿಗೆ ನಾದಿಯೆರವರಿಗೆ ೮ ಸಾವಿರದ ೧೦೦ ಡಾಲರ (೬ ಲಕ್ಷದ ೪೮ ಸಾವಿರ ರೂಪಾಯಿಗಳು) ಕೊಡಬೇಕೆಂದು ಆದೇಶಿಸಲಾಗಿದೆ.