ಹಿಂಸಾಚಾರ ನಡೆಯುತ್ತಿರುವ ಸುಡಾನ್ ದೇಶದಿಂದ ವಿದೇಶಿ ನಾಗರಿಕರನ್ನು ಹೊರ ತೆಗೆಯುವ ಪ್ರಯತ್ನಗಳಿಗೆ ಗತಿ

ಸುಡಾನ್

ಖಾರ್ಟೂಮ್ (ಸುಡಾನ್) – ಇಂಗ್ಲೆಂಡ್, ಅಮೇರಿಕಾ, ಫ್ರಾನ್ಸ ಮತ್ತು ಚೀನಾ ದೇಶಗಳು ಇಲ್ಲಿನ ತಮ್ಮ ಸರಕಾರಿ ಅಧಿಕಾರಿಗಳು ಮತ್ತು ನಾಗರಿಕರನ್ನು ಹಿಂಸಾಚಾರದಿಂದ ನಲುಗಿರುವ ಸುಡಾನ್ ದೇಶದಿಂದ ವಾಯುಯಾನ ಮಾರ್ಗದಿಂದ ಕರೆತರಲು ಪ್ರಯತ್ನಿಸುತ್ತಿವೆ ಎಂದು ಸುಡಾನ್ ಸೈನ್ಯ ಮಾಹಿತಿ ನೀಡಿದೆ. ಅಲ್ಲಿನ ಸೈನ್ಯ ಮತ್ತು ಅರೆ ಮಿಲಟರಿ ಪಡೆಗಳ ನಡುವೆ ನಡೆಯುತ್ತಿರುವ ಅಧಿಕಾರದ ಸಂಘರ್ಷದ ಹಿಂಸಾಚಾರದಲ್ಲಿ ಇಲ್ಲಿಯ ವರೆಗೆ 400 ಕ್ಕಿಂತ ಅಧಿಕ ಜನರು ಸಾವನ್ನಪ್ಪಿದ್ದಾರೆ. ಸೌದಿ ಅರೇಬಿಯಾ ಮತ್ತು ಜಪಾನ ದೇಶಗಳೂ ತಮ್ಮ ನಾಗರಿಕರನ್ನು ಸುಡಾನ್ ದೇಶದಿಂದ ಕರೆದುಕೊಂಡು ಬರಲು ಪ್ರಾರಂಭಿಸಿದ್ದು, ಭಾರತವೂ ಸುಡಾನ ದೇಶದಿಂದ 3 ಸಾವಿರ ಭಾರತೀಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲು ಸಮರೋಪಾದಿಯಲ್ಲಿ ಪ್ರಯತ್ನಗಳನ್ನು ಪ್ರಾರಂಭಿಸುವುದಾಗಿ ತಿಳಿಸಿದೆ.