ಅಬಯೇಯಿ (ಸುಡಾನ) – ವಿಶ್ವಸಂಸ್ಥೆಯ ಶಾಂತಿ ಮಿಶನ ಅಡಿಯಲ್ಲಿ ಸುಡಾನ ಅಬಯೇಯಿ ಪ್ರದೇಶದಲ್ಲಿ ನಿಯೋಜನೆಗೊಳ್ಳಲು ಕೇವಲ ಮಹಿಳೆಯರೇ ಇರುವ ಭಾರತದ ಒಂದು ಸೈನ್ಯದ ರೆಜಿಮೆಂಟ್ ಹೋಗಿದೆ. ಇದರಲ್ಲಿ 2 ಸೈನ್ಯಾಧಿಕಾರಿ ಮತ್ತು 25 ಸೈನಿಕರ ಸಮಾವೇಶವಿದೆ. ಅಬಯೇಯಿ ಪ್ರದೇಶ ಜಗತ್ತಿನ ಅತ್ಯಧಿಕ ಅಶಾಂತಿ ತುಂಬಿರುವ ಕ್ಷೇತ್ರವೆಂದು ತಿಳಿಯಲಾಗುತ್ತದೆ. ಇಲ್ಲಿ ಜನವರಿ 4 ರಂದು 200 ಜನರ ಗುಂಪು ಒಂದು ಗ್ರಾಮದ ಮೇಲೆ ದಾಳಿ ಮಾಡಿ 13 ಜನರ ಹತ್ಯೆ ಮಾಡಿದೆ. ಈ ಹಿಂದೆಯೂ ಆಫ್ರಿಕಾ ಖಂಡದ ಲೈಬೇರಿಯಾ ದೇಶದಲ್ಲಿ 2007 ರಲ್ಲಿ ಭಾರತೀಯ ಮಹಿಳಾ ಸೈನಿಕರ ಒಂದು ರೆಜಿಮೆಂಟ್ ಅನ್ನು ಇದೇ ರೀತಿ ನಿಯೋಜಿಸಲಾಗಿತ್ತು. ಅದು ಒಳ್ಳೆಯ ಪರಿಣಾಮ ಬೀರಿತ್ತು. ಇದರಿಂದ ಅಲ್ಲಿಯ ಮಹಿಳೆಯರ ಉತ್ಸಾಹ ಹೆಚ್ಚಾಗಿತ್ತು.
India’s all-women peacekeeping unit for UN Peacekeeping reached Abyei, marking the single largest deployment of women peacekeepers in recent years. pic.twitter.com/QHeTNRBhcD
— Rishikesh Kumar (@rishhikesh) January 15, 2023