ಪಾಕಿಸ್ತಾನದಲ್ಲಿ ಅಪರಿಚಿತರಿಂದ ಮತ್ತೊಬ್ಬ ಭಯೋತ್ಪಾದಕನ ಹತ್ಯೆ!

ಪೇಶಾವರ್ (ಪಾಕಿಸ್ತಾನ) – ಭಯೋತ್ಪಾದಕ ಸಂಘಟನೆಯ ಜೈಶ್-ಎ-ಮೊಹಮ್ಮದ್ ನ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಅವನ ಸಂಬಂಧಿ ಭಯೋತ್ಪಾದಕ ಕಾರಿ ಎಜಾಜ್ ಅಬಿದ್ ಅವನನ್ನು ಪೇಶಾವರ್‌ನ ಪಿಸ್ ಖರ ಪ್ರದೇಶದಲ್ಲಿ ಮಸೀದಿಯಿಂದ ಹೊರಬರುತ್ತಿದ್ದಾಗ ಅಪರಿಚಿತ ದಾಳಿಕೋರರು ಗುಂಡಿಕ್ಕಿ ಕೊಂದಿದ್ದಾರೆ. ಗುಂಡಿನ ದಾಳಿಯಲ್ಲಿ ಕಾರಿ ಎಜಾಜ್ ಅವನ ಆಪ್ತ ಸಹಚರ ಕಾರಿ ಶಾಹಿದ್ ಗಂಭೀರವಾಗಿ ಗಾಯಗೊಂಡಿದ್ದಾನೆ.

1. ಕಾರಿ ಎಜಾಜ್ ಅವನು ‘ಅಹ್ಲೆ ಸುನ್ನತ್ ವಲ್ ಜಮಾತ್’ ಹೆಸರಿನ ಸಂಘಟನೆಯ ಸದಸ್ಯನಾಗಿದ್ದನು. ಅವನು ‘ಖತ್ಮ್-ಎ-ನಬುವತ್’ ಹೆಸರಿನ ಅಂತರರಾಷ್ಟ್ರೀಯ ಸಂಘಟನೆಯ ಪ್ರಾಂತೀಯ ನಾಯಕನೂ ಆಗಿದ್ದನು. ಅವನು ತನ್ನ ಸಂಘಟನೆಯ ಮೂಲಕ ಜೈಶ್-ಎ-ಮೊಹಮ್ಮದ್‌ಗೆ ಭಯೋತ್ಪಾದಕರನ್ನು ನೇಮಿಸಿಕೊಳ್ಳುತ್ತಿದ್ದನು.

2. ಭಯೋತ್ಪಾದಕ ಮಸೂದ್ ಅಜರ್‌ನ ಯೋಜನೆಯಂತೆ, ಕಾರಿ ಎಜಾಜ್ ಮೊದಲು ಯುವಕರನ್ನು ತನ್ನ ಸಂಘಟನೆಯ ಸಭೆಗಳಿಗೆ ಆಹ್ವಾನಿಸುತ್ತಿದ್ದನು. ನಂತರ, ಕ್ರಮೇಣ, ಅವನು ಅವರ ಬ್ರೈನ್ ವಾಶ್ ಮಾಡಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದನು. ಅವನು ಯುವಕರಿಗೆ ಶಸ್ತ್ರಾಸ್ತ್ರಗಳ ಮತ್ತು ಸ್ಫೋಟಕಗಳ ತರಬೇತಿ ನೀಡುವುದಕ್ಕಾಗಿ ಜೈಶ್ ಎ ಮೊಹಮ್ಮದ್ ಶಿಬಿರಗಳಿಗೆ ಕಳುಹಿಸುತ್ತಿದ್ದನು.