ಸುಡಾನನ ರಾಜಧಾನಿ ಖಾರ್ಟೂಮದಲ್ಲಿ ೫೦ ಲಕ್ಷ ನಾಗರಿಕರ ಪಲಾಯನ !

  • ಸುಡಾನದಲ್ಲಿ ಹಿಂಸಾಚಾರ ಮುಂದುವರಿಕೆ !

  • ಸುಡಾನದಲ್ಲಿ ಭಾರತೀಯರ ರಕ್ಷಣೆಗಾಗಿ ಭಾರತ ಸರಕಾರದಿಂದ ನಿಯಂತ್ರಣ ಕಕ್ಷೆಯ ಸ್ಥಾಪನೆ !

ಖಾರ್ಟೂಮ (ಸುಡಾನ) – ಸೈನ್ಯ ದಳ ಮತ್ತು ಅರೆ ಸೈನ್ಯ ದಳದಲ್ಲಿ ಮುಂದುವರೆದಿರುವ ಘರ್ಷನೆಯಲ್ಲಿ ಇಲ್ಲಿಯವರೆಗೆ ೧೮೦ ಜನರ ಸಾವು ಸಂಭವಿಸಿದೆ ಹಾಗೂ ೧ ಸಾವಿರ ೮೦೦ ಜನರು ಗಾಯಗೊಂಡಿದ್ದಾರೆ ಎಂದು ವಿಶ್ವ ಸಂಸ್ಥೆಯ ಸುಡಾನದಲ್ಲಿನ ವಿದೇಶಾಂಗ ಸಚಿವ ವೊಲ್ಕರ್ ಪೀಥರ್ಸ್ ಇವರು ಮಾಹಿತಿ ನೀಡಿದರು. ಈ ಘರ್ಷಣೆಯಿಂದ ರಾಜಧಾನಿ ಖಾರ್ಟೂಮದಲ್ಲಿನ ೫೦ ಲಕ್ಷ ಜನರು ಪಲಾಯನ ಮಾಡಿದ್ದಾರೆ. ಅನೇಕ ವಿದೇಶಿ ನಾಗರಿಕರು ವಿದ್ಯುತ್ ಮತ್ತು ನೀರು ಇಲ್ಲದೆ ಮನೆಯಲ್ಲಿ ಸಿಲುಕಿದ್ದಾರೆ. ಏಪ್ರಿಲ್ ೧೬ ರಂದು ನಡೆದಿರುವ ಗುಂಡಿನ ದಾಳಿಯಲ್ಲಿ ಅಲ್ಬರ್ಟ್ ಎಂಬ ಭಾರತೀಯ ನಾಗರೀಕನು ಸಾವನ್ನಪ್ಪಿದ್ದನು.

ಸುಡಾನದಲ್ಲಿನ ಘರ್ಷಣೆ ಕಡಿಮೆಯಾಗದೇ ಇರುವುದರಿಂದ ಅಲ್ಲಿಯ ಭಾರತೀಯರಿಗೆ ಜಾಗರೂಕರಾಗಿರಲು ಭಾರತೀಯ ರಾಯಭಾರಿ ಕಛೇರಿಯಿಂದ ಕರೆ ನೀಡಿದೆ. ಸುಡಾನದಲ್ಲಿ ಸಿಲುಕಿರುವ ಭಾರತೀಯರಿಗಾಗಿ ಕೇಂದ್ರ ಸರಕಾರ ನಿಯಂತ್ರಣ ಕಕ್ಷೆಯನ್ನು ಸ್ಥಾಪನೆ ಮಾಡಿದೆ. ದೇಶದಲ್ಲಿ ಒಟ್ಟು ೪ ಸಾವಿರ ಭಾರತೀಯರಿದ್ದಾರೆ. ಅದರಲ್ಲಿ ೧ ಸಾವಿರ ೨೦೦ ಜನರು ಅನೇಕ ವರ್ಷಗಳಿಂದ ಅಲ್ಲೇ ವಾಸವಾಗಿದ್ದಾರೆ.

ಸುಡಾನದಲ್ಲಿನ ಭಾರತಿಯರಿಗಾಗಿ ನಿಯಂತ್ರಣ ಕಕ್ಷೆಯ ಸಂಪರ್ಕ !

ಟೋಲ್ ಫ್ರೀ ಸಂಖ್ಯೆ : 1800-11-8797
ದೂರವಾಣಿ ಸಂಖ್ಯೆ : +91-11-23012113, +91-11-23014104, +91-11-23017905
ಮೊಬೈಲ್ ಸಂಖ್ಯೆ : +91-9968291988
ಇ-ಮೇಲ್ ವಿಳಾಸ : [email protected]