ಕೀನ್ಯಾದಲ್ಲಿ ಸ್ಥಳೀಯ ನಾಗರಿಕರಿಂದ ಚೀನಿ ವ್ಯಾಪಾರಿಗಳ ವಿರುದ್ಧ ಆಂದೋಲನ

‘ಚೀನಿ ನಾಗರಿಕರೇ, ಇಲ್ಲಿಂದ ತೊಲಗಿರಿ’ಯ ಘೋಷಣೆ !

ನೈರೋಬಿ (ಕೀನ್ಯಾ) – ಕೀನ್ಯಾ ಜನರು ಚೀನಿ ವ್ಯಾಪಾರಿಗಳ ವಿರುದ್ಧ ಆಂದೋಲನ ಪ್ರಾರಂಭಿಸಿದ್ದಾರೆ. ಸಾವಿರಾರು ನಾಗರಿಕರು ರಸ್ತೆಗಿಳಿದು ‘ಚೈನೀಸ್ ಮಸ್ಟ ಗೋ’ (ಚೀನಿ ನಾಗರಿಕರು ಇಲ್ಲಿಂದ ತೊಗಿರಿ) ಬರೆದಿರುವ ಫಲಕಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಿದ್ದಾರೆ. ಸ್ಥಳೀಯ ವ್ಯಾಪಾರಿಗಳು ಚೀನಿ ವ್ಯಾಪಾರಿಗಳಿಗೆ ದೇಶವನ್ನು ಬಿಡುವಂತೆ ಹೇಳಿದ್ದಾರೆ.

ಚೀನಿ ವ್ಯಾಪಾರಿ ಮತ್ತು ಕಂಪನಿಗಳು ಸ್ಥಳೀಯ ವ್ಯಾಪಾರಿಗಳನ್ನು ಮುಗಿಸಲು ಎಲ್ಲ ರೀತಿಯ ತಂತ್ರೋಪಾಯಗಳನ್ನು ಅವಲಂಬಿಸುತ್ತಿದೆ. ಚೀನಾ ಕೀನ್ಯಾದಲ್ಲಿ ‘ಚೈನೀಸ್ ಸ್ಕ್ವೇರ್’ ಹೆಸರಿನ ಅಂಗಡಿಯನ್ನು ತೆರೆದಿದೆ. ಸ್ಥಳೀಯ ಮಾರುಕಟ್ಟೆಯ ತುಲನೆಯಲ್ಲಿ ಇಲ್ಲಿ ಶೇ. 45 ವರೆಗೆ ಅತೀ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಮಾರಟ ಮಾಡಲಾಗುತ್ತದೆ. ಇದರಿಂದ ಇಲ್ಲಿಗೆ ಸಾಮಾನ್ಯ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಚೀನಿ ವಸ್ತುಗಳು ಅತಿ ಕಡಿಮೆ ಬೆಲೆಗೆ ಸಿಗುತ್ತದೆ; ಆದರೆ ಅವುಗಳ ಗುಣಮಟ್ಟ ಅತ್ಯಂತ ಕೀಳು ಮಟ್ಟದ್ದಾಗಿದೆ. ಹೀಗಿದ್ದರೂ ಕಡಿಮೆ ಬೆಲೆಯ ಜಾಲದಲ್ಲಿ ಜನರು ಸಿಲುಕುತ್ತಿದ್ದಾರೆ. ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಬಹಳ ಹಾನಿಯಾಗುತ್ತಿದೆ. ಸ್ಥಳೀಯ ವ್ಯಾಪಾರಿಗಳಿಗೆ ಮಾರುಕಟ್ಟೆಯಿಂದ ಹೊರಗಟ್ಟುವ ನಿಯೋಜನೆಯ ಭಾಗವಾಗಿ ಚೀನಿ ವ್ಯಾಪಾರಿಗಳು ಈ ರೀತಿ ಮಾಡುತ್ತಿದ್ದಾರೆ ಎಂದು ವ್ಯಾಪಾರಿಗಳು ಮತ್ತು ನಾಗರಿಕರು ಆರೋಪಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಚೀನಾ ಯಾವ ದೇಶದಲ್ಲಿ ಹೋಗುತ್ತದೆಯೋ, ಅಲ್ಲಿಯ ಆರ್ಥಿಕ ವ್ಯವಸ್ಥೆಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಪ್ರಯತ್ನಿಸಿ, ಆ ದೇಶದ ಅರ್ಥವ್ಯವಸ್ಥೆಯನ್ನು ನಷ್ಟಗೊಳಿಸುತ್ತದೆ, ಕೀನ್ಯಾದಲ್ಲಿ ಇದೇ ಆಗಿದೆ. ಭಾರತದಲ್ಲಿ ಹೀಗಾಗುವ ಮೊದಲೇ ಸರಕಾರ ಚೀನಾದ ವಸ್ತುಗಳ ಮಾರಾಟವನ್ನು ನಿರ್ಬಂಧಿಸಬೇಕು !