ಅಮೇರಿಕಾವು ಅಫ್ಘಾನಿಸ್ತಾನದ ದೂತವಾಸದಲ್ಲಿರುವ ಸಿಬ್ಬಂದಿಗಳನ್ನು ವಾಪಸ್ಸು ಕರೆದುಕೊಂಡು ಬರಲು 3 ಸಾವಿರ ಸೈನಿಕರನ್ನು ಕಳುಹಿಸಲಿದೆ !

ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಅತ್ಯಧಿಕ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳುತ್ತಿರುವ ಭಯದಿಂದ ಅಮೇರಿಕಾವು ಅಫ್ಘಾನಿಸ್ತಾನದಲ್ಲಿರುವ ತನ್ನ ನಾಗರಿಕರನ್ನು ಕರೆತರುವ ತಯಾರಿ ಮಾಡಿದೆ.

ಭಾರತವು ಅಫ್ಘಾನ್ ಸೈನ್ಯಕ್ಕೆ ಉಡುಗೊರೆಯಾಗಿ ನೀಡಿದ್ದ ಎಂಐ-24 ಹೆಲಿಕಾಪ್ಟರ್ ತಾಲಿಬಾನಿನ ವಶದಲ್ಲಿ

ಅಫ್ಘಾನಿಸ್ತಾನದಲ್ಲಿನ ಕಾಂಡುಜದಲ್ಲಿಯ ಒಂದು ಛಾಯಾಚಿತ್ರದಲ್ಲಿ ಈ ಹೆಲಿಕಾಪ್ಟರ್ ತಾಲಿಬಾನರ ಯುದ್ಧದ ಹೆಲಿಕಾಪ್ಟರ್ ಪಕ್ಕದಲ್ಲಿ ಕಂಡು ಬರುತ್ತಿದೆ.

ಅಫಘಾನ ಸೈನ್ಯದ ಕಾರ್ಯಾಚರಣೆಯಲ್ಲಿ ೩೮೫ ತಾಲಿಬಾನಿಗಳ ಮಾರಣಹೋಮ !

ಅಗಸ್ಟ ೬ ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಅಫಘಾನ ಸೈನ್ಯ ಪಡೆಗಳು ೩೮೫ ತಾಲಿಬಾನಿ ಭಯೋತ್ಪಾದಕರನ್ನು ಹೊಡೆದುರುಳಿಸಿ, ೨೧೦ ಇತರರನ್ನು ಗಾಯಗೊಳಿಸಿವೆ. ಸತ್ತ ಭಯೋತ್ಪಾದಕರಲ್ಲಿ ೩೦ ಪಾಕಿಸ್ತಾನಿಯರೂ ಸೇರಿದ್ದಾರೆ.

ತಾಲಿಬಾನವು ಗುರುದ್ವಾರದಲ್ಲಿನ ತೆಗೆದು ಹಾಕಿದ್ದ ಧ್ವಜವನ್ನು ಮತ್ತೆ ಹಾಕಿದರು !

ಅಫ್ಘನಿಸ್ತಾನದ ಪಕತಿಯಾ ಪ್ರದೇಶದ ಥಾಲ್ ಸಾಹಿಬ್ ಗುರುದ್ವಾರದಲ್ಲಿ ಹಾಕಲಾಗಿದ್ದ ಪವಿತ್ರ ಧ್ವಜವನ್ನು ತಾಲಿಬಾನಿಗಳು ತೆಗೆದಿದ್ದರು; ಆದರೆ ಅಂತರರಾಷ್ಟ್ರೀಯ ಒತ್ತಡದಿಂದಾಗಿ ತಾಲಿಬಾನವು ಅದನ್ನು ಮತ್ತೆ ಹಾಕಿದೆ. ಭಾರತವೂ ಕೂಡಾ ಧ್ವಜವನ್ನು ತೆಗೆದಿರುವ ಬಗ್ಗೆ ತೀರ್ವವಾಗಿ ಖಂಡಿಸಿತ್ತು.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಒಬ್ಬ ವಿಶ್ವಾಸದ್ರೋಹಿ ಮತ್ತು ಆತನ ಮೇಲೆ ನಿಷೇಧ ಹೇರಿ ! – ಕೆನಡಾದ ಮಾಜಿ ಮಂತ್ರಿ ಕ್ರಿಸ್ ಅಲೆಕ್ಸಾಂಡರ್ ಅವರ ಬೇಡಿಕೆ

ಕಳೆದ ಕೆಲವು ದಶಕಗಳಿಂದ ತಾಲಿಬಾನ್‍ಗೆ ಸಹಾಯ ಮಾಡುತ್ತಿರುವ ಕೆಲವೇ ಮೂರ್ಖರಲ್ಲಿ ಇಮ್ರಾನ್ ಖಾನ್ ಒಬ್ಬರಾಗಿದ್ದಾರೆ ಎಂದು ಕಠೋರ ಶಬ್ದಗಳಲ್ಲಿ ಕೆನಡಾದ ಮಾಜಿ ಮಂತ್ರಿ ಮತ್ತು ಅಫ್ಘಾನಿಸ್ತಾನ್ ದ ಕೆನಡಾದ ಮಾಜಿ ರಾಯಭಾರಿ ಕ್ರಿಸ್ ಅಲೆಕ್ಸಾಂಡರ್ ಹೇಳಿದರು.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್‍ಗೆ ಸಹಾಯ ಮಾಡಲು ಹೋದ ಪಾಕಿಸ್ತಾನದ ಮದರಸಾಗಳ ಯುವಕರನ್ನು ಕೊಲ್ಲಲ್ಪಡುತ್ತಿದ್ದಾರೆ !

ಪಾಕಿಸ್ತಾನದ ಮದರಸಾಗಳಿಂದ ಅನೇಕ ಜಿಹಾದಿ ಯುವಕರು ತಾಲಿಬಾನ್ ಗೆ ಸಹಾಯ ಮಾಡಲು ಅಫ್ಘಾನಿಸ್ತಾನಕ್ಕೆ ಹೋಗಿದ್ದು, ಅವರಲ್ಲಿ ಅನೇಕರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಅವರ ಶವಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿದೆ.

ಅಫ್ಘಾನಿಸ್ತಾನದ ಕಂದಹಾರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್ ನಿಂದ ರಾಕೆಟ್ ದಾಳಿ

ತಾಲಿಬಾನನಿಂದ ಕಂದಹಾರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಕೆಟನಿಂದ ಆಕ್ರಮಣ ಮಾಡಲಾಗಿದೆ. ಒಟ್ಟು 3 ರಾಕೆಟ್‍ಗಳನ್ನು ಬಿಟ್ಟಿದ್ದು ಅದರಲ್ಲಿ ಒಂದು ವಿಮಾನ ನಿಲ್ದಾಣದಲ್ಲಿ ಹಾಗೂ 2 ರನ್ ವೇ ಮೇಲೆ ಬಿದ್ದಿವೆ.

ಅಫ್ಘಾನಿಸ್ತಾನದ ತಾಲಿಬಾನ್ ನಿಯಂತ್ರಿತ ಪ್ರದೇಶಕ್ಕೆ ಸ್ಥಳಾಂತರವಾಗುತ್ತಿರುವ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು!

ಪಾಕಿಸ್ತಾನದಲ್ಲಿನ ಜಿಹಾದಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತಿಯಬಾ ಹಾಗೂ ಜೈಶ್-ಎ-ಮೊಹಮ್ಮದ್ ಇವು ತಮ್ಮ ನೆಲೆಯನ್ನು ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಸ್ಥಳಾಂತರಿಸಿವೆ, ಎಂದು ಅಫ್ಘಾನಿಸ್ತಾನ ಸರಕಾರವು ಭಾರತಕ್ಕೆ ಮಾಹಿತಿ ನೀಡಿ ಎಚ್ಚರಿಕೆಯಿಂದ ಇರಲು ತಿಳಿಸಿದೆ.

ತಡವಾಗುವ ಮುಂಚೆ ನಮ್ಮನ್ನು ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಹೊರತೆಗೆಯಿರಿ !

ಅಫಘಾನಿಸ್ತಾನದ ತಾಲಿಬಾನ್‍ಗಳಿಂದ ಭಯಭೀತರಾಗಿರುವ ಹಿಂದೂಗಳು ಮತ್ತು ಸಿಖ್ಖರು `ತಡವಾಗುವ ಮುಂಚೆ ನಮ್ಮನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ಯಿರಿ’ ಎಂದು ಕಳಕಳಿಯ ಮನವಿಯನ್ನು ಜಗತ್ತಿಗೆ ಮಾಡಿದ್ದಾರೆ.

ತಾಲಿಬಾನಿಯರು ಮೊದಲು ದಾನಿಶ್ ಸಿದ್ದಕಿಯ ಮೇಲೆ ಗುಂಡು ಹಾರಿಸಿದರು ನಂತರ ಆತ ಭಾರತೀಯನಾಗಿದ್ದಾನೆಂಬ ಕೋಪದಿಂದ ಆತನ ತಲೆಯನ್ನು ವಾಹನದಡಿಯಲ್ಲಿ ಹೊಸಕಿ ಹಾಕಿದರು ! – ಅಫ್ಘಾನ್ ಕಮಾಂಡರನು ನೀಡಿದ ಮಾಹಿತಿ

ಭಾರತದ ವಾರ್ತಾಛಾಯಾಚಿತ್ರಕಾರ ಹಾಗೂ ‘ಪುಲಿತ್ಜರ’ ಪ್ರಶಸ್ತಿ ವಿಜೇತ ದಾನಿಶ್ ಸಿದ್ದಕಿಯವರನ್ನು ಕೆಲವು ದಿನಗಳ ಹಿಂದೆ ಅಫಘಾನಿಸ್ತಾನದಲ್ಲಿ ಹತ್ಯೆ ಮಾಡಲಾಗಿತ್ತು. ಗುಂಡು ತಗಲಿದ್ದರಿಂದ ಆತ ಸಾವನ್ನಪ್ಪಿದನು ಎಂದು ಹೇಳಲಾಗುತ್ತದೆ.