ತಡವಾಗುವ ಮುಂಚೆ ನಮ್ಮನ್ನು ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಹೊರತೆಗೆಯಿರಿ !

ಅಫ್ಘಾನಿಸ್ತಾನದ ಹಿಂದೂಗಳು ಮತ್ತು ಸಿಕ್ಖರಿಂದ ತಾಲಿಬಾನ್ ಭಯದಿಂದ ಮನವಿ !

ಈ ಹಿಂದೂ ಮತ್ತು ಸಿಕ್ಖ್ ರನ್ನು ಭಾರತಕ್ಕೆ ಕರೆತರಲು ಮತ್ತು ಅವರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಭಾರತ ಸರಕಾರವು ತಕ್ಷಣ ಪ್ರಯತ್ನ ಮಾಡಬೇಕು !

ನವ ದೆಹಲಿ : ಅಫ್ಘಾನಿಸ್ತಾನದ ತಾಲಿಬಾನ್‍ಗಳಿಂದ ಭಯಭೀತರಾಗಿರುವ ಹಿಂದೂಗಳು ಮತ್ತು ಸಿಖ್ಖರು ‘ತಡವಾಗುವ ಮುಂಚೆ ನಮ್ಮನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ಯಿರಿ’ ಎಂದು ಕಳಕಳಿಯ ಮನವಿಯನ್ನು ಜಗತ್ತಿಗೆ ಮಾಡಿದ್ದಾರೆ.

ಕಾಬೂಲ್‍ನ ಗುರುದ್ವಾರದ ‘ಕರ್ತಾ ಪರವಾನ’ದ ಅಧ್ಯಕ್ಷ ಗುರನಾಮ್ ಸಿಂಗ್ ಅವರು, ‘ನಾವು ಸುಮಾರು ೧೫೦ ಹಿಂದೂಗಳು ಮತ್ತು ಸಿಕ್ಖರು ಕಾಬೂಲ್‍ನಲ್ಲಿ ವಾಸಿಸುತ್ತಿದ್ದೇವೆ. ಈಗ ನಾವು ಸುರಕ್ಷಿತವಾಗಿದ್ದೇವೆ; ಆದರೆ ನಾವು ಎಷ್ಟು ದಿನ ಸುರಕ್ಷಿತವಾಗಿರುತ್ತೇವೆ ಎಂದು ಯಾರಿಗೂ ತಿಳಿದಿಲ್ಲ;’ ಎಂದು ಹೇಳಿದ್ದಾರೆ. ಆರ್ಥಿಕ ಸುರಕ್ಷೆಯಿಲ್ಲದ ಕಾರಣ, ಈ ಪೀಡಿತ ಹಿಂದೂಗಳು ಮತ್ತು ಸಿಕ್ಖ್ ರಿಗೆ ಭಾರತಕ್ಕೆ ಹೋಗಲು ಇಚ್ಛೆ ಇಲ್ಲ.