ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಒಬ್ಬ ವಿಶ್ವಾಸದ್ರೋಹಿ ಮತ್ತು ಆತನ ಮೇಲೆ ನಿಷೇಧ ಹೇರಿ ! – ಕೆನಡಾದ ಮಾಜಿ ಮಂತ್ರಿ ಕ್ರಿಸ್ ಅಲೆಕ್ಸಾಂಡರ್ ಅವರ ಬೇಡಿಕೆ

ಅಫ್ಘಾನಿಸ್ತಾನ್ ದಲ್ಲಿ ತಾಲಿಬಾನ್‍ಗೆ ಪಾಕಿಸ್ತಾನವು ಸಹಾಯ ಮಾಡುತ್ತಿರುವ ಪ್ರಕರಣ

ಕ್ರಿಸ್ ಅಲೆಕ್ಸಾಂಡರ್

ಕಾಬೂಲ್ (ಅಫ್ಘಾನಿಸ್ತಾನ) – ಇಮ್ರಾನ್ ಖಾನನು ಒಬ್ಬ ವಿಶ್ವಾಸದ್ರೋಹಿ ಮತ್ತು ಸುಳ್ಳುಗಾರನಾಗಿದ್ದಾನೆ. ಈ ವ್ಯಕ್ತಿಯಲ್ಲಿ ಯಾವುದೇ ಸಾಮಥ್ರ್ಯವಿಲ್ಲ. ಈ ವ್ಯಕ್ತಿಯು ಕಪಟಿಯಾಗಿದ್ದಾನೆ. ಕಳೆದ ಕೆಲವು ದಶಕಗಳಿಂದ ತಾಲಿಬಾನ್‍ಗೆ ಸಹಾಯ ಮಾಡುತ್ತಿರುವ ಕೆಲವೇ ಮೂರ್ಖರಲ್ಲಿ ಇಮ್ರಾನ್ ಖಾನ್ ಒಬ್ಬರಾಗಿದ್ದಾರೆ ಎಂದು ಕಠೋರ ಶಬ್ದಗಳಲ್ಲಿ ಕೆನಡಾದ ಮಾಜಿ ಮಂತ್ರಿ ಮತ್ತು ಅಫ್ಘಾನಿಸ್ತಾನ್ ದ ಕೆನಡಾದ ಮಾಜಿ ರಾಯಭಾರಿ ಕ್ರಿಸ್ ಅಲೆಕ್ಸಾಂಡರ್ ಹೇಳಿದರು. ‘ತಾಲಿಬಾನ್ ಅನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಇಮ್ರಾನ್ ಖಾನ್ ಅವರನ್ನು ನಿಷೇಧಿಸಬೇಕೆಂದು’ ಕ್ರಿಸ್ ಒತ್ತಾಯಿಸಿದ್ದಾರೆ.

ಕ್ರಿಸ್ ಅಲೆಕ್ಸಾಂಡರ್ ರ ಹೇಳಿಕೆಯನ್ನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಟೀಕಿಸಿದೆ. ಕ್ರಿಸ್ ಅವರ ಆರೋಪಗಳು ಆಧಾರರಹಿತವಾಗಿವೆ ಮತ್ತು ಪಾಕಿಸ್ತಾನವು ಅಫಫಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದೆ. (ಪಾಕ್ ಮತ್ತು ಶಾಂತಿ, ಹೀಗೆ ಎಂದಾದರೂ ಆಗಬಹುದೇ? ಪಾಕಿಸ್ತಾನವು ತಾಲಿಬಾನಿಗಳಿಗೆ ಸಹಾಯ ಮಾಡುತ್ತಿದೆ, ಅದು ಜಗತ್ತಿಗೆ ತಿಳಿದಿದೆ. ಹಾಗಾಗಿ ಅವರು ಎಷ್ಟು ಸುಳ್ಳು ಹೇಳಲು ಪ್ರಯತ್ನಿಸಿದರೂ ಅದು ವ್ಯರ್ಥವೇ ಆಗಿದೆ ! – ಸಂಪಾದಕ)