ತಾಲಿಬಾನಿಯರು ಮೊದಲು ದಾನಿಶ್ ಸಿದ್ದಕಿಯ ಮೇಲೆ ಗುಂಡು ಹಾರಿಸಿದರು ನಂತರ ಆತ ಭಾರತೀಯನಾಗಿದ್ದಾನೆಂಬ ಕೋಪದಿಂದ ಆತನ ತಲೆಯನ್ನು ವಾಹನದಡಿಯಲ್ಲಿ ಹೊಸಕಿ ಹಾಕಿದರು ! – ಅಫ್ಘಾನ್ ಕಮಾಂಡರನು ನೀಡಿದ ಮಾಹಿತಿ

ತಾಲಿಬಾನ್‍ನಿಂದಲೇ ಭಾರತೀಯ ವಾರ್ತಾಛಾಯಾಚಿತ್ರಕಾರನ ಹತ್ಯೆ ಆಗಿರುವುದು ಬಹಿರಂಗ

* ತಾಲಿಬಾನಿಗಳೂ ಮುಸಲ್ಮಾನರು ಹಾಗೂ ವಾರ್ತಾಛಾಯಾಚಿತ್ರಕಾರನೂ ಮುಸಲ್ಮಾನನಾಗಿದ್ದನು; ಹೀಗಿದ್ದರೂ ತಾಲಿಬಾನಿಗಳು ಆತನು ಭಾರತೀಯನಾಗಿದ್ದನೆಂಬ ಕೋಪದಲ್ಲಿ ಆತನನ್ನು ಹತ್ಯೆ ಮಾಡಿದರು, ಇದನ್ನು ಭಾರತೀಯ ಮುಸಲ್ಮಾನರು ಗಮನದಲ್ಲಿಟ್ಟುಕೊಳ್ಳುವರೇ ?

* ತಾಲಿಬಾನಿನ ಕ್ರೂರತನದ ಬಗ್ಗೆ ಭಾರತದ ಮುಸಲ್ಮಾನ ಸಂಘಟನೆಗಳು, ಮುಲ್ಲಾ, ಮೌಲ್ವಿ ಹಾಗೂ ಇಮಾಮ್‍ರು ಏನಾದರು ಹೇಳುವರೇ ?

ಭಾರತೀಯ ವಾರ್ತಾಛಾಯಾಚಿತ್ರಕಾರ ದಾನಿಶ್ ಸಿದ್ಧಿಕಿ

ನವ ದೆಹಲಿ – ಭಾರತದ ವಾರ್ತಾಛಾಯಾಚಿತ್ರಕಾರ ಹಾಗೂ ‘ಪುಲಿತ್ಜರ’ ಪ್ರಶಸ್ತಿ ವಿಜೇತ ದಾನಿಶ್ ಸಿದ್ದಕಿಯವರನ್ನು ಕೆಲವು ದಿನಗಳ ಹಿಂದೆ ಅಫಘಾನಿಸ್ತಾನದಲ್ಲಿ ಹತ್ಯೆ ಮಾಡಲಾಗಿತ್ತು. ಗುಂಡು ತಗಲಿದ್ದರಿಂದ ಆತ ಸಾವನ್ನಪ್ಪಿದನು ಎಂದು ಹೇಳಲಾಗುತ್ತದೆ. ತಾಲಿಬಾನಿಗಳು ಈ ಹತ್ಯೆಯನ್ನು ಮಾಡಿದ್ದಾರೆ ಎಂದು ಹೇಳಲಾಗುತ್ತದೆ; ಆದರೆ ತಾಲಿಬಾನ್ ಈ ಹತ್ಯೆಯ ಆರೋಪವನ್ನು ತಳ್ಳಿಹಾಕುತ್ತಾ; ತಾವು ನಿರಪರಾಧಿ ಎಂದು ಬಿಂಬಿಸುತ್ತಿತ್ತು. ತಾಲಿಬಾನಿನ ಭಯೋತ್ಪಾದಕರು ಆತನಿಗೆ ಗುಂಡು ಹೊಡೆದನಂತರ ಆತನ ತಲೆಯ ಮೇಲೆ ವಾಹನವನ್ನು ಹಾಯಿಸಿ ಹೊಸಕಿಹಾಕಲಾಯಿತು ಎಂಬ ಮಾಹಿತಿಯನ್ನು ಅಫಘಾನಿಸ್ತಾನದ ಸೈನ್ಯದ ಕಮಾಂಡರ ಬಿಲಾಲ್ ಅಹಮದ ಇವರು ‘ಆಜ ತಕ’ ಈ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. ದಾನಿಶ ಸಿದ್ದಕಿ ‘ರಾಯಿಟರ್ಸ್’ ಈ ಅಂತರರಾಷ್ಟ್ರೀಯ ವಾರ್ತಾಸಂಸ್ಥೆಯಿಂದ ಅಫ್ಘಾನಿಸ್ತಾನದಲ್ಲಿ ವಾರ್ತಾಛಾಯಾಚಿತ್ರಕ್ಕಾಗಿ ಹೋಗಿದ್ದರು.

ಅಹಮದ್ ಇವರು ಮಾತನ್ನು ಮುಂದುವರೆಸುತ್ತಾ, ತಾಲಿಬಾನಿಯ ಭಯೋತ್ಪಾದಕರು ಮೊದಲು ದಾನಿಶ್ ಸಿದ್ದಕಿಗೆ ಗುಂಡು ಹೊಡೆದರು, ಆಗ ಆತನ ಮೃತಪಟ್ಟನು. ನಂತರ ದಾನಿಶ್ ಸಿದ್ದಕಿಯು ಭಾರತೀಯನಾಗಿದ್ದಾನೆ ಎಂದು ಅವರಿಗೆ ತಿಳಿಯಿತು. ತಾಲಿಬಾನ್‍ಗೆ ಭಾರತದ ಮೇಲೆ ಕೋಪ ಇದ್ದುದರಿಂದ ಅವರು ದಾನಿಶ್ ಸಿದ್ದಕಿಯ ಶವದ ವಿಡಂಬನೆ ಮಾಡಿದರು. ಆತ ತೀರಿಕೊಂಡ ನಂತರವೂ ಭಯೋತ್ಪಾದಕರು ದಾನಿಶ್ ಸಿದ್ದಕಿಯ ತಲೆಯ ಮೇಲೆ ವಾಹನವನ್ನು ಹಾಯಿಸಿ ಅದನ್ನು ಹೊಸಕಿಹಾಕಿದರು, ಎಂದರು

‘ದಾನಿಶನು ನಮ್ಮಲ್ಲಿ ವಿಚಾರಿಸಿಕೊಂಡು ಅಫ್ಘಾನಿಸ್ತಾನಕ್ಕೆ ಬರಬೇಕಿತ್ತು !(ಅಂತೆ) – ತಾಲಿಬಾನ್‍

‘ಆಜ ತಕ’ನ ವರದಿಗಾರನು ತಾಲಿಬಾನಿನ ವಕ್ತಾರ ಹಾಗೂ ಕಮಾಂಡರ ಮೌಲಾನಾ ಯುಸುಫ ಅಹಮದಿಯೊಂದಿಗೆ ಕಂದಹಾರನಲ್ಲಿ ಮಾಡಿದ ಚರ್ಚೆಯ ನಂತರ, ದಾನಿಶನನ್ನು ನಾವು ಕೊಲ್ಲಲಿಲ್ಲ. (ತಾಲಿಬಾನಿಗಳ ಬೂಟಾಟಿಕೆ ! ಒಂದುವೇಳೆ ದಾನಿಶ್‍ಗೆ ತಾಲಿಬಾನ್ ಕೊಲ್ಲದಿದ್ದರೆ, ಬೇರೆ ಯಾರು ಹಾಗೂ ಏಕೆ ಸಾಯಿಸಿದರು, ಇದು ತಾಲಿಬಾನ್ ಹೇಳಬಹುದೆ ? – ಸಂಪಾದಕರು) ಆತ ಶತ್ರು ಸೈನ್ಯದೊಂದಿಗೆ ಇದ್ದ. ಯಾವುದೇ ವರದಿಗಾರರಿಗೆ ಅಫ್ಘಾನಿಸ್ತಾನಕ್ಕೆ ಬರಲಿಕ್ಕಿದ್ದರೆ ಅವರು ಮೊದಲು ನಮ್ಮನ್ನು ಸಂಪರ್ಕಿಸಬೇಕು ಎಂದು ಹೇಳಿದನು.