ಭಾರತವು ಅಫ್ಘಾನ್ ಸೈನ್ಯಕ್ಕೆ ಉಡುಗೊರೆಯಾಗಿ ನೀಡಿದ್ದ ಎಂಐ-24 ಹೆಲಿಕಾಪ್ಟರ್ ತಾಲಿಬಾನಿನ ವಶದಲ್ಲಿ

ಕಾಬುಲ್ (ಅಫ್ಘಾನಿಸ್ತಾನ) – ಭಾರತವು ಅಫ್ಘಾನಿಸ್ತಾನಕ್ಕೆ ಉಡುಗೊರೆಯಾಗಿ ನೀಡಿದ್ದ ‘ಎಂಐ – 24‘ ಈ ಹೆಲಿಕಾಪ್ಟರ್ ತಾಲಿಬಾನವು ವಶಕ್ಕೆ ತೆಗೆದುಕೊಂಡಿದೆ. ಅಫ್ಘಾನಿಸ್ತಾನದಲ್ಲಿನ ಕಾಂಡುಜದಲ್ಲಿಯ ಒಂದು ಛಾಯಾಚಿತ್ರದಲ್ಲಿ ಈ ಹೆಲಿಕಾಪ್ಟರ್ ತಾಲಿಬಾನರ ಯುದ್ಧದ ಹೆಲಿಕಾಪ್ಟರ್ ಪಕ್ಕದಲ್ಲಿ ಕಂಡು ಬರುತ್ತಿದೆ. ಈ ಹೆಲಿಕಾಪ್ಟರಿನ `ರೋಟರ್ ಬ್ಲೇಡ್'(ಹೆಲಿಕಾಪ್ಟರಿನ ಫ್ಯಾನಿನ ಬ್ಲೇಡ್) ನಾಪತ್ತೆಯಾಗಿವೆ. ಈ ಹೆಲಿಕಾಪ್ಟರನ್ನು ತಾಲಿಬಾನ್ ದಾಳಿ ಮಾಡಲು ಬಳಸಬಾರದೆಂದು ಅಫಘಾನಿಸ್ತಾನದ ಸೈನಿಕರು ಮೊದಲೇ ಈ ಬ್ಲೇಡ್‍ಅನ್ನು ತೆಗೆದುಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಭಾರತವು 2019 ರಲ್ಲಿ ಅಫ್ಘಾನ್ ವಾಯುದಳಕ್ಕೆ 3 ‘ಚಿತಾ’ ಹೆಲಿಕಾಪ್ಟರ್ ಸಹಿತ ಎಂಐ – 24 ಈ ಯುದ್ಧ ಹೆಲಿಕಾಪ್ಟರನ್ನೂ ಉಡುಗೊರೆಯಾಗಿ ನೀಡಿತ್ತು.