Hindu Temple Found Closed : ಮುಜಫ್ಫರನಗರ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಬಾಹುಳ್ಯವಿರುವ ಪ್ರದೇಶದಲ್ಲಿ ದೇವಸ್ಥಾನ ಪತ್ತೆ !

  • ಶ್ರೀ ಕಾಳಿಮಾತೆ ಮತ್ತು ಶ್ರೀ ದುರ್ಗಾದೇವಿಯ ಮೂರ್ತಿಗಳು, ಹಾಗೆಯೇ ಹೋಮಕುಂಡವೂ ಪತ್ತೆ !

  • ಪೂಜೆ ಆರಂಭಿಸಲು ಹಿಂದೂಗಳಿಂದ ಆಗ್ರಹ!

ಮುಜಫ್ಫರನಗರ (ಉತ್ತರ ಪ್ರದೇಶ) – ಇಲ್ಲಿನ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶದಲ್ಲಿ 2 ವರ್ಷಗಳಿಂದ ಮುಚ್ಚಿದ್ದ ದೇವಸ್ಥಾನವೊಂದು ಪತ್ತೆಯಾಗಿದೆ. ಈ ದೇವಸ್ಥಾನವನ್ನು ಮತ್ತೆ ಹಿಂದೂಗಳಿಗಾಗಿ ತೆರೆಯಬೇಕು ಎಂದು ಸ್ಥಳೀಯ ಹಿಂದೂ ಸಂಘಟನೆಗಳು ಒತ್ತಾಯಿಸುತ್ತಿವೆ. ಈ ದೇವಸ್ಥಾನ ಸುಮಾರು 40 ವರ್ಷಗಳಷ್ಟು ಹಳೆಯದಾಗಿದೆ ಎಂದು ನಂಬಲಾಗಿದೆ ಮತ್ತು ಶ್ರೀ ಕಾಳಿಮಾತಾ ಮತ್ತು ಶ್ರೀ ದುರ್ಗಾದೇವಿಯ ಮೂರ್ತಿ ಗಳಿವೆ. ಸಂಕೀರ್ಣವು ಹೋಮಕುಂಡವನ್ನು ಸಹ ಹೊಂದಿದೆ.

1. ಈ ದೇವಸ್ಥಾನವು ನಗರದ ಖತೌಲಿ ಪ್ರದೇಶದ ಇಸ್ಲಾಂನಗರ ಪ್ರದೇಶದಲ್ಲಿ ಪವರ್ ಹೌಸ್‌ನ ಹಿಂದೆ ಇದೆ.  ಖಾಸಗಿ ಭೂಮಿಯಲ್ಲಿ ನಿರ್ಮಿಸಲಾದ ಈ ದೇವಸ್ಥಾನವನ್ನು ಸುಮಾರು 40 ವರ್ಷಗಳ ಹಿಂದೆ ಮಲಿಕ್ ಕುಟುಂಬದವರು ನಿರ್ಮಿಸಿದ್ದರು.

2. ದೇವಸ್ಥಾನದ ಮಾಹಿತಿ ತಿಳಿದ ಕೂಡಲೇ ಹಿಂದೂ ಸಂಘಟನೆಗಳು ಪ್ರತಿಭಟನೆ ಆರಂಭಿಸಿದರು. ಹೀಗಾಗಿ  ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಅಲ್ಲಿಗೆ ತಲುಪಿದ್ದರು.

3. ಪೊಲೀಸರು ಜಮೀನಿನ ಮಾಲೀಕರನ್ನು ಕರೆಸಿ ದೇವಸ್ಥಾನಕ್ಕೆ ಯಾವುದೇ ರೀತಿಯ ಹಾನಿ ಮಾಡದಂತೆ ಸೂಚನೆ ನೀಡಿದ್ದಾರೆ. 2 ವರ್ಷಗಳ ಹಿಂದೆ ಮೂರ್ತಿ ಭಗ್ನವಾಗಿದೆ ಎಂದು ಜಮೀನಿನ ಮಾಲೀಕರು ತಿಳಿಸಿದ್ದಾರೆ. ಇದಾದ ನಂತರ ಮೂರ್ತಿಯನ್ನು ಬೇರೆ ದೇವಸ್ಥಾನದಲ್ಲಿ ಸ್ಥಾಪಿಸಲಾಯಿತು.

4. ಸದ್ಯ ಘಟನೆ ನಡೆದ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಸಂಪಾದಕೀಯ ನಿಲುವು

ಹಿಂದೂಗಳ ದೇಶದಲ್ಲಿ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಒಂದರ ಹಿಂದೆ ಒಂದರಂತೆ ಮುಚ್ಚಿರುವ ಹಿಂದೂ ದೇವಸ್ಥಾನಗಳ ಮಾಹಿತಿ ಬೆಳಕಿಗೆ ಬರುತ್ತಿದೆ. ಈ ಪರಿಸ್ಥಿತಿ ಹಿಂದೂಗಳಿಗೆ ನಾಚಿಕೆಗೇಡು !