ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಖಾತೆಯಿಂದ ತೆಗೆದುಹಾಕಲಾಗಿದ್ದ ‘ಬ್ಲೂ ಟಿಕ್’ ಅನ್ನು ಮತ್ತೆ ಸೇರಿಸಿದ ಟ್ವಿಟರ್ !

ಸರಸಂಘಚಾಲಕರ ಸಹಿತ ಇತರ ಸಂಘ ನಾಯಕರ ಖಾತೆಗಳಲ್ಲಿ ಬ್ಲೂ ಟಿಕ್ ಮಾಯ !

ಟ್ವಿಟರ್ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಭಾರತ ಸರಕಾರದ ಸಿದ್ಧತೆ !

ಹೇಗೆ ವಿರೋಧದ ನಂತರ ಟ್ವಿಟರ್ ನಿಂದ ‘ಬ್ಲೂ ಟಿಕ್’ ಅನ್ನು ಮರು ಹಾಕಲಾಗುತ್ತದೆಯೋ, ಅದೇರೀತಿ ಹಿಂದೂ ಸಂಘಟನೆಗಳ ಫೇಸ್‍ಬುಕ್ ಪುಟಗಳನ್ನು ನಿರ್ಬಂಧ ಹೇರಿದ ಫೇಸ್‍ಬುಕ್‍ನ ವಿರುದ್ಧವೂ ಹಿಂದೂಗಳು ಧ್ವನಿ ಎತ್ತಬೇಕು ಮತ್ತು ಅದರ ಮೇಲೆ ಒತ್ತಡ ಹೇರುವ ಮೂಲಕ, ಆ ಪುಟಗಳನ್ನು ಮರುಪ್ರಾರಂಭಿಸಲು ಫೇಸ್‍ಬುಕ್ ಅನ್ನು ಒತ್ತಾಯಿಸಬೇಕು ! ಅಲ್ಲದೆ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಫೇಸ್‍ಬುಕ್‍ಗೆ ಪಾಠಕಲಿಸಬೇಕು !

ನವ ದೆಹಲಿ – ವಿದೇಶಿ ಸಾಮಾಜಿಕ ಮಾಧ್ಯಮ ಟ್ವಿಟರ್ ನಿಂದ ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟ್ಟರ್ ಖಾತೆಯ ಮೇಲಿನ ‘ಬ್ಲೂ ಟಿಕ್’ ಅನ್ನು ತೆಗೆದುಹಾಕಲಾಗಿತ್ತು. ಅದನ್ನು ವಿರೋಧಿಸಿದ ನಂತರ ಕಾಣಿಸಿಕೊಂಡಿದೆ. ಇದಕ್ಕೆ ಸ್ಪಷ್ಟೀಕರಣ ನೀಡುತ್ತಾ ಟ್ವಿಟರ್ ಇಂಡಿಯಾ, ಖಾತೆಯನ್ನು ದೀರ್ಘಕಾಲದವರೆಗೆ ಲಾಗ್ ಇನ್ ಮಾಡಿರಲಿಲ್ಲ ಆದ್ದರಿಂದ ಅದರ ಮೇಲಿನ ‘ಬ್ಲೂ ಟಿಕ್’ ಮಾಯವಾಗಿತ್ತು’ ಎಂದು ಹೇಳಿದೆ. ವೆಂಕಯ್ಯ ನಾಯ್ಡು ಅವರ ಟ್ವಿಟ್ಟರ್ ಖಾತೆ ಜುಲೈ ೨೦೨೦ ರಿಂದ ಕಾರ್ಯನಿರ್ವಹಿಸುತ್ತಿಲ್ಲ. ಯಾವುದೇ ಸೂಚನೆ ನೀಡದೆ ಉಪರಾಷ್ಟ್ರಪತಿಯ ಖಾತೆಯಿಂದ ಬ್ಲೂ ಟಿಕ್ ಅನ್ನು ಹೇಗೆ ತೆಗೆದುಹಾಕಲಾಯಿತು ? ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಟ್ವಿಟರ್ ಗೆ ನೋಟಿಸ್ ಮೂಲಕ ಪ್ರಶ್ನಿಸಲಿದೆ ಎಂದು ಹೇಳಲಾಗುತ್ತಿದೆ. ಇದು ಭಾರತದ ಒಂದು ಸಾಂವಿಧಾನಿಕ ಪದವಿಗೆ ಮಾಡಿದ ಅವಮಾನ ಎಂದು ಭಾರತ ಸರಕಾರದ ಹೇಳುತ್ತಿದೆ ಎಂದೂ ಹೇಳಲಾಗುತ್ತಿದೆ.

ಸರಸಂಘಚಾಲಕ ಸಹಿತ ಕೆಲವು ಸಂಘದ ನಾಯಕರ ಖಾತೆಯಲ್ಲಿನ ಬ್ಲೂ ಟಿಕ್ ತೆಗೆದು ಹಾಕಲಾಗಿದೆ !

ಟ್ವಿಟರ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಲವಾರು ಹಿರಿಯ ನಾಯಕರ ವೈಯಕ್ತಿಕ ಖಾತೆಗಳಿಂದ ‘ಬ್ಲೂ ಟಿಕ್’ ಅನ್ನು ತೆಗೆದುಹಾಕಿದೆ. ಇದರಲ್ಲಿ ಸರಸಂಘಚಾಲಕ ಡಾ. ಮೋಹನ ಭಾಗವತ, ಅರುಣ ಕುಮಾರ, ಭೈಯಾಜಿ ಜೋಶಿ ಮತ್ತು ಸುರೇಶ ಸೋನಿ ಮುಂತಾದ ನಾಯಕರ ಸಮಾವೇಶವಿದೆ.

‘ಬ್ಲೂ ಟಿಕ್’ ಎಂದರೇನು?

‘ಬ್ಲೂ ಟಿಕ್’ ಯಾವುದೇ ಟ್ವಿಟರ್ ಖಾತೆಯ ಸತ್ಯಾಸತ್ಯತೆಯನ್ನು ಸೂಚಿಸುತ್ತದೆ. ಅಂದರೆ, ಟಿಕ್ ಇದು ಪ್ರಮುಖ ವ್ಯಕ್ತಿಯ ಅಧಿಕೃತ ಖಾತೆ ಎಂದು ಸೂಚಿಸುತ್ತದೆ.