New Orleans (USA) New Year Killings : ‘ಅಲ್ಲಾನ ಶತ್ರುಗಳನ್ನು ಕೊಲ್ಲುವಾಗ ಸಾಯಿರಿ’, ಕುರಾನ್‌ನಲ್ಲಿನ ವಾಕ್ಯವಿರುವ ಪುಟ ಪತ್ತೆ !

  • ನ್ಯೂ ಓರ್ಲಿಯನ್ಸ್ (ಅಮೇರಿಕಾ)ನಲ್ಲಿ ಪೊಲೀಸರಿಂದ ದಾಳಿಕೋರ ಶಂಸುದ್ದೀನ್ ಜಬ್ಬಾರ್ ಮನೆಯಲ್ಲಿ ತನಿಖೆ

  • ನ್ಯೂ ಓರ್ಲಿಯನ್ಸ್‌ನ ಘಟನೆ ಭಯೋತ್ಪಾದಕ ದಾಳಿ ಎಂದು ಅಮೇರಿಕನ್ ಪೊಲೀಸರು ಒಪ್ಪಿಕೊಂಡರು!

ನ್ಯೂ ಓರ್ಲಿಯನ್ಸ (ಅಮೇರಿಕಾ) – ಕ್ರೈಸ್ತರ ಹೊಸ ವರ್ಷದ ರಾತ್ರಿ ಶಂಸುದ್ದೀನ್ ಜಬ್ಬಾರ್ ಎಂಬ ಮುಸಲ್ಮಾನನು ಟ್ರಕ್ ವೇಗವಾಗಿ ಚಲಾಯಿಸಿ 15 ಜನರ ಹತ್ಯೆ ಮಾಡಿದ್ದನು. ತದನಂತರ ಪೊಲೀಸರು ಆತನನ್ನು ಗುಂಡಿಕ್ಕಿ ಕೊಂದರು. ಪೊಲೀಸರು ಆತನ ಮನೆಯನ್ನು ಪರಿಶೀಲಿಸಿದಾಗ ಮನೆಯಲ್ಲಿ ಆಘಾತಕಾರಿ ದೃಶ್ಯ ಕಂಡುಬಂದಿತು. ಟೆಕ್ಸಾಸ್‌ ರಾಜ್ಯದ ಉತ್ತರ ಹೂಸ್ಟನ್‌ನಲ್ಲಿರುವ ಅವನ ಮನೆಯಲ್ಲಿ ಬಾಂಬ್ ತಯಾರಿಕೆ ಸಾಮಗ್ರಿಗಳು ಮತ್ತು ಕುರಾನ್ ಪತ್ತೆಯಾಗಿದೆ. ವಿಶೇಷವೆಂದರೆ, ಕುರಾನ್‌ನ ಹಿಂಸಾಚಾರವನ್ನು ಬೆಂಬಲಿಸುವ  ಪುಟ ತೆರೆದಿರುವುದು ಕಂಡುಬಂದಿದೆ. ಅದರಲ್ಲಿ ಇಳಿಕೆಯ ಸಂಖ್ಯೆ 9:111 ದ ಉಲ್ಲೇಖವಿದೆ. ಅದರಲ್ಲಿ ಅಲ್ಲಾಹನ ಶತ್ರುಗಳೊಂದಿಗೆ ಹೋರಾಡಿ ಮತ್ತು ಕೊಲ್ಲುವಾಗ ಸಾಯಿರಿ’, ಎಂದು ಬರೆದಿದೆ. ಇದೀಗ ಈ ದಾಳಿಯನ್ನು ‘ಭಯೋತ್ಪಾದಕ ದಾಳಿ’ ಎಂದು ಪೊಲೀಸರು ಒಪ್ಪಿಕೊಂಡಿದ್ದಾರೆ.

1. ಜಬ್ಬಾರ್ ಮನೆಯಲ್ಲಿ, “ಅಲ್ಲಾಹನ ಶತ್ರುಗಳನ್ನು ಕೊಲ್ಲಿರಿ ಹಾಗೆ ಮಾಡುವಾಗ ನೀವು ಸತ್ತರೆ, ಅನಂತ ಕಾಲದ ವರೆಗೂ ಸ್ವರ್ಗದಲ್ಲಿ ಸುಖವನ್ನು ಅನುಭವಿಸುವಿರಿ” ಎಂದು ಕುರಾನ್‌ನಲ್ಲಿ ಬರೆಯಲಾಗಿದೆ.

2. ಅವನ ಮನೆಯಲ್ಲಿ ಇಸ್ಲಾಂ ಧರ್ಮದ ಹಲವಾರು ಪುಸ್ತಕಗಳು ಮತ್ತು ಸುತ್ತಿಟ್ಟಿದ್ದ ಪ್ರಾರ್ಥನೆಯ ಒಂದು ಗಂಟು ಕೂಡ ಕಂಡುಬಂದಿವೆ.

ಸಂಪಾದಕೀಯ ನಿಲುವು

‘ಭಯೋತ್ಪಾದಕರಿಗೆ ಧರ್ಮವಿಲ್ಲ’, ಎನ್ನುವವರು ಈಗ ಯಾಕೆ ಸುಮ್ಮನಿದ್ದಾರೆ ?  ‘ಹಿಂದೂ ಭಯೋತ್ಪಾದಕರು’ ಎನ್ನುವ ಕಾಂಗ್ರೆಸ್ ನಾಯಕರಿಗೆ ಹಿಂದೂಗಳು ಪ್ರಶ್ನಿಸಬೇಕು !