ಟ್ವಿಟರ್ ಭಾರತದೊಂದಿಗೆ ಸಂಪೂರ್ಣವಾಗಿ ಕಟಿಬದ್ಧವಾಗಿದೆ ಮತ್ತು ಇರಲಿದೆ !

ಕೇಂದ್ರ ಸರಕಾರದ ಎಚ್ಚರಿಕೆಯ ನಂತರ ಮಣಿದ ಟ್ವಿಟರ್ !

ಎಚ್ಚರಿಕೆ ನೀಡಿದ ನಂತರವೇ ಟ್ವಿಟರ್ ಮಣಿಯುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಸರಕಾರವು ಇಂತಹವರ ಮೇಲೆ ಹೆಚ್ಚು ಕಠಿಣ ನಿಯಮಗಳನ್ನು ವಿಧಿಸಬೇಕು !

ನವ ದೆಹಲಿ – ಟ್ವಿಟರ್ ಭಾರತದೊಂದಿಗೆ ಸಂಪೂರ್ಣ ಕಟಿಬದ್ಧವಾಗಿದೆ ಮತ್ತು ಇರಲಿದೆ. ಹೊಸ ನಿಯಮಗಳು ಮತ್ತು ಸೂಚನೆಗಳನ್ನು ಅನುಸರಿಸಲು ನಾವು ಸರ್ವತೋಮುಖವಾಗಿ ಪ್ರಯತ್ನಿಸುತ್ತೇವೆ. ಆ ದಿಕ್ಕಿನಲ್ಲಿ ಮಾಡುತ್ತಿರುವ ಕೆಲಸದ ಬಗ್ಗೆ ನಾವು ಕಾನೂನುರೀತ್ಯಾ ವರದಿಯನ್ನು ಸಹ ನೀಡಿದ್ದೇವೆ. ಭಾರತ ಸರಕಾರದೊಂದಿಗೆ ನಮ್ಮ ಸಂವಾದವನ್ನು ಮುಂದುವರಿಸುತ್ತೇವೆ ಎಂದು ಮೃದುಧೋರಣೆಯ ನಿಲುವನ್ನು ಟ್ವಿಟರ್ ಕೇಂದ್ರ ಸರಕಾರವು ನೀಡಿದ್ದ ಎಚ್ಚರಿಕೆಗೆ ಪ್ರತಿಯಾಗಿ ತೆಗೆದುಕೊಂಡಿದೆ.

ಕೇಂದ್ರ ಸರಕಾರವು ಸಾಮಾಜಿಕ ಮಾಧ್ಯಮಗಳಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಫೆಬ್ರವರಿಯಲ್ಲಿ ಜಾರಿಗೆ ಬಂದ ಹೊಸ ಮಾರ್ಗಸೂಚಿಗಳ ಪ್ರಕಾರ, ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಮೇ ೨೬ ರೊಳಗೆ ಭಾರತದಲ್ಲಿ ಸ್ಥಳೀಯ ದೂರು ಪರಿಹಾರ ಅಧಿಕಾರಿಗಳು, ಮುಖ್ಯ ಅನುಸರಣೆ ಅಧಿಕಾರಿಗಳು ಮತ್ತು ವಿಭಾಗೀಯ ಸಂಪರ್ಕ ಅಧಿಕಾರಿಗಳನ್ನು ನೇಮಿಸುವುದು ಅನಿವಾರ್ಯವಾಗಿತ್ತು; ಆದರೆ, ನಿಯಮಗಳನ್ನು ಪಾಲಿಸಲು ಟ್ವಿಟರ್ ನಿರಾಕರಿಸಿತ್ತು. ಅದಕ್ಕಾಗಿ ಕೇಂದ್ರವು ಟ್ವಿಟರ್ ಗೆ ಅಂತಿಮ ನೋಟಿಸ್ ನೀಡಿತ್ತು. ಕೇಂದ್ರದ ನೋಟಿಸ್‍ಗೆ ಟ್ವಿಟರ್ ಈ ಮೇಲಿನಂತೆ ಪ್ರತಿಕ್ರಿಯಿಸಿದೆ.