ಗೂಗಲ್ ಮತ್ತು ಫೇಸ್‍ಬುಕ್‍ನಂತಹ ಬಹುರಾಷ್ಟ್ರೀಯ ಸಂಸ್ಥೆಗಳಿಗೆ `ಜಾಗತಿಕ ತೆರಿಗೆ’ ವಿಧಿಸಲಾಗುವುದು

G 7′ ಸಮೂಹದ ದೇಶಗಳ ಪರಿಷತ್ತಿನಲ್ಲಿ ಒಮ್ಮತ

ಲಂಡನ – ಗೂಗಲ್, ಫೇಸ್‍ಬುಕ್ ಮತ್ತು ಆಪಲ್‍ನಂತಹ ಬಹುರಾಷ್ಟ್ರೀಯ ಸಂಸ್ಥೆಗಳ ಮೇಲೆ ‘ಜಾಗತಿಕ ತೆರಿಗೆ’ ವಿಧಿಸಲು ‘G 7‘ (ಕೆನಡಾ, ಅಮೇರಿಕಾ, ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಜಪಾನ್) ಇತ್ತೀಚಿನ ಸಮೂಹದ ಸಭೆಯಲ್ಲಿ ಒಪ್ಪಿಕೊಂಡಿವೆ. ಜೂನ್ ೧೧ ರಿಂದ ೧೩ ರವರೆಗೆ ಮತ್ತೊಂದು ಸಭೆ ನಡೆಯಲಿದ್ದು, ಇದರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ಜಾಗತಿಕ ತೆರಿಗೆ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬ್ರಿಟನ್‍ನ ಹಣಕಾಸು ಸಚಿವ ಋಷಿ ಸುನಕನೆ ಹೇಳಿದ್ದಾರೆ. ಈ ಬಹುರಾಷ್ಟ್ರೀಯ ಸಂಸ್ಥೆಗಳು ಪರಿಸರಕ್ಕೆ ಹಾನಿಯಾಗುವುದಕ್ಕೂ ಕಾರಣಕರ್ತರಾಗಿದ್ದಾರೆ ಎಂದು ಹೇಳುತ್ತಾ ಅವರು, ಈಗ `ತಮ್ಮದೇ ಆದ ಸಂಸ್ಥೆಯಿಂದ ಪರಿಸರಕ್ಕೆ ಯಾವ ಹಾನಿ ಆಗಿದೆ ?’ ಎಂಬುದು ಸಹ ಹೇಳ ಬೇಕಾಗುತ್ತದೆ.