MLA Ziaur Rahman Barq House Demolition : ಸಂಭಲ (ಉತ್ತರಪ್ರದೇಶ) ಇಲ್ಲಿಯ ಶಾಸಕ ಜಿಯಾಉರ್ ರಹಮಾನ್ ಬರ್ಕ ಇವರ ಮನೆಯ ಮೇಲೆ ಶೀರ್ಘದಲ್ಲೇ ಬುಲ್ಡೋಜರ್ ಕಾರ್ಯಾಚರಣೆ !

ಮನೆ ಅಕ್ರಮವಾಗಿರುವುದರಿಂದ ಕಾರ್ಯಾಚರಣೆ

ಸಂಭಲ (ಉತ್ತರಪ್ರದೇಶ) – ಸಂಭಲದ ಸಮಾಜವಾದಿ ಪಕ್ಷದ ಶಾಸಕ ಜಿಯಉರ್ ರಹಮಾನ್ ಬರ್ಕ್ ಇವರ ಮನೆಯ ಮೇಲೆ ಆಡಳಿತದಿಂದ ಶೀರ್ಘದಲ್ಲೇ ಬುಲ್ಡೋಜರ್ ಕಾರ್ಯಾಚರಣೆ ನಡೆಯುವುದು. ಮನೆಯನ್ನು ಕಟ್ಟುವಾಗ ಪ್ಲಾನ್ ಒಪ್ಪಿಗೆ ಪಡೆಯದೆ ಮನೆ ಕಟ್ಟಿರುವುದು. ಸಂಭಲ ಆಡಳಿತದಿಂದ ಇದರ ಬಗ್ಗೆ ಎರಡು ಬಾರಿ ನೋಟಿಸ್ ಕಳುಹಿಸಲಾಗಿದೆ. ಆಡಳಿತವು ಜಿಯಾಉರ ರಹಮಾನ ಇವರಿಗೆ ಡಿಸೆಂಬರ್ ೨೮, ೨೦೨೪ ರಂದು ಕೊನೆಯ ನೋಟಿಸ್ ಕಳುಹಿಸಿತ್ತು. ಈ ನೋಟಿಸಿಗೆ ಶಾಸಕ ಜಿಯಉರ ರಹಮಾನ್ ಇವರು ಯಾವುದೇ ಉತ್ತರ ನೀಡಲಿಲ್ಲ. ಈ ನೋಟಿಸಿಗೆ ಜನವರಿ ೪ ವರೆಗೆ ಉತ್ತರ ನೀಡಲು ಆಡಳಿತ ಸೂಚಿಸಿತ್ತು. ಆದರೆ ಉತ್ತರ ನೀಡದೆ ಇದ್ದರಿಂದ ಮನೆಯ ಮೇಲೆ ಬುಲ್ಡೋಜರ್ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ಕೂಡ ಮನೆಯ ಪಕ್ಕದಲ್ಲಿರುವ ಅಕ್ರಮ ಮಹಡಿ ಕೆಡವಲಾಗಿತ್ತು.
ಜಿಯಾಉರು ರಹಮಾನ್ ಇವರ ಮೇಲೆ ಸಂಭಲನ ಜಾಮಾ ಮಸೀದಿ ಹಿಂಸಾಚಾರ ಪ್ರಕರಣದಲ್ಲಿ ಪ್ರಚೋದನೆಕಾರಿ ಹೇಳಿಕೆ ನೀಡುವುದು, ವಿದ್ಯುತ್ ಕಳ್ಳತನ ಮಾಡುವುದು ಮತ್ತು ಕಾರ ಅಪಘಾತಕ್ಕೆ ಕಾರಣವಾಗಿರುವ ಮುಂತಾದ ಪ್ರಕರಣದಲ್ಲಿ ದೂರುಗಳು ದಾಖಲಾಗಿವೆ. (ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದಲ್ಲಿನ ಸೌಹಾರ್ದತೆ ಹಾಳ ಮಾಡುವ, ವಿದ್ಯುತ್ ಕಳ್ಳತನ ಮಾಡುವ ಮತ್ತು ಕಾನೂನಿನ ಉಲ್ಲಂಘನೆ ಮಾಡುವ ಜಿಯಾಉರ ರಹಮಾನ್ ಇವರಂತಹ ಶಾಸಕರರು ದೇಶದ ರಾಜಕಾರಣದಲ್ಲಿ ಸಕ್ರಿಯವಾಗಿರುವುದು, ಇದು ಭಾರತೀಯ ಪ್ರಜಾಪ್ರಭುತ್ವಕ್ಕೆ ಆಘಾತವಾಗಿದೆ, ಎಂದು ಹೇಳಿದರೆ ತಪ್ಪಾಗಲಾರದು ! – ಸಂಪಾದಕರು) ವಿದ್ಯುತ್ ಕಳ್ಳತನದ ಪ್ರಕರಣದಲ್ಲಿ ಆಡಳಿತದಿಂದ ಅವರಿಗೆ ಒಂದು ಕೋಟಿ ರೂಪಾಯಿಯ ದಂಡ ವಿಧಿಸಿತ್ತು.

ಸಂಪಾದಕೀಯ ನಿಲುವು

ಅಕ್ರಮ ಕೃತ್ಯಗಳ ಮಾಡುವ ಶಾಸಕರಿಂದ ತುಂಬಿರುವ ಸಮಾಜವಾದಿ ಪಕ್ಷ ಆಡಳಿತ ನಡೆಸಲು ಯೋಗ್ಯತೆ ಇದೆಯೇ ? ಇಂತಹ ಶಾಸಕರ ಮೇಲೆ ಪಕ್ಷ ಏನು ಕ್ರಮ ಕೈಗೊಳ್ಳುವುದು ?