ಟ್ವಿಟರ್ ಗೆ ಕೇಂದ್ರ ಸರಕಾರದಿಂದ ಕೊನೆಯ ಎಚ್ಚರಿಕೆ ! 

ನಿಯಮಾವಳಿಯನ್ನು ಕಾರ್ಯಾಚರಣಗೆ ತರದಿದ್ದರೆ ಮುಂದಿನ ಪರಿಣಾಮಕ್ಕೆ ಸಿದ್ಧರಾಗಿ !

ಕೇಂದ್ರ ಸರಕಾರವು ‘ಟ್ವಿಟರ್’, ‘ಫೇಸ್‍ಬುಕ್’ ಮತ್ತು ಇತರ ವಿದೇಶಿ ಸಾಮಾಜಿಕ ಮಾಧ್ಯಮಗಳ ಮನಬಂದಂತೆ ವರ್ತಿಸುವ ಮತ್ತು ಮೊಂಡುತನದ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಅವರನ್ನು ನೂಲಿನಂತೆ ನೇರಗೊಳಿಸಬೇಕು ಎಂದು ಹಿಂದೂಗಳಿಗೆ ಮತ್ತು ಅವರ ಸಂಘಟನೆಗಳಿಗೆ ಅನಿಸುತ್ತದೆ !

ನವ ದೆಹಲಿ – ಕೇಂದ್ರ ಸರಕಾರವು ಮೂರು ತಿಂಗಳ ಹಿಂದೆ ಸಾಮಾಜಿಕ ಮಾಧ್ಯಮಗಳ ಸಂಸ್ಥೆಗಳಿಗೆ ನಿಯಮಾವಳಿಗಳನ್ನು ರೂಪಿಸಿತ್ತು. ಅದಕ್ಕೆ ಬದ್ಧರಾಗಿರಲು ಸರಕಾರ ಮಾಧ್ಯಮಗಳಿಗೆ ತಿಳಿಸಿತ್ತು; ಆದರೆ ಟ್ವಿಟರ್ ಇನ್ನೂ ಪಾಲಿಸಿಲ್ಲ. ಆದ್ದರಿಂದ ಕೇಂದ್ರ ಸರಕಾರವು ಟ್ವಿಟರ್‍ಗೆ ಅಂತಿಮ ಎಚ್ಚರಿಕೆ ನೀಡಿದೆ. ‘ನಿಯಮಾವಳಿಗಳ ಪಾಲನೆ ಆಗದಿದ್ದರೆ, ಪರಿಣಾಮಕ್ಕಾಗಿ ಸಿದ್ಧರಾಗಿ’ ಎಂದು ಕೇಂದ್ರ ಸರಕಾರವು ಟ್ವಿಟರ್ ಗೆ ನೋಟಿಸ್ ಕಳುಹಿಸಿದೆ. ಪದೇ ಪದೇ ಹೇಳಿದನಂತರವೂ ಸೂಕ್ತ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಟ್ವಿಟರ್ ಗೆ ತಿಳುವಳಿಕೆಯನ್ನೂ ನೀಡಲಾಗಿದೆ.

ನೋಟಿಸ್‍ನಲ್ಲಿ ಸರಕಾರವು, ನಿಯಮಗಳ ಪ್ರಕಾರ, ನೀವು ಇನ್ನೂ ಭಾರತದಲ್ಲಿ ‘ಚೀಫ್ ಕಂಪ್ಲಾಯೆನ್ಸ್ ಆಫಿಸರ್’ಅನ್ನು ನೇಮಿಸಿಲ್ಲ ನೀವು ನೇಮಿಸಿದ ಸ್ಥಳೀಯ ಕುಂದುಕೊರತೆ ಪರಿಹಾರ ಅಧಿಕಾರಿ ಮತ್ತು ‘ನೋಡಲ್ ಕಾಂಟೆಕ್ಟ್ ಪರ್ಸನ’ ಟ್ವಿಟರ್ ನ ಅಧಿಕೃತ ಉದ್ಯೋಗಿಗಳಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಸರಕಾರವು ಹೇಳಿದೆ.

ಸಿಕ್ಕಿದ ಮಾಹಿತಿಯ ಪ್ರಕಾರ, ಟ್ವಿಟರ್ ನೀಡಿದ ಕಚೇರಿ ವಿಳಾಸವೂ ಕಾನೂನು ಸಂಸ್ಥೆಯದ್ದಾಗಿದೆ. ಒಂದು ವಾರದ ಹಿಂದೆ ಹೊಸ ನಿಯಮಾವಳಿಗಳನ್ನು ಜಾರಿಗೆ ಬಂದಿದ್ದರೂ, ಟ್ವಿಟರ್ ಅದರ ಅನ್ವಯಿಸುವ ಬಗ್ಗೆ ವಿರೋಧವನ್ನು ಮಾಡಿದೆ. ಆದ್ದರಿಂದ `ಐಟಿ’ ಕಾಯ್ದೆಯ ಸೆಕ್ಷನ್ ೭೯ ರ ಅಡಿಯಲ್ಲಿ ಟ್ವಿಟರ್‍ಗೆ ನೀಡಿರುವ ರಕ್ಷಣೆಯನ್ನು ತೆಗೆದುಹಾಕಬಹುದು. ನಿಯಮಾವಳಿಗಳನ್ನು ಪಾಲಿಸಲು ವಿಫಲವಾದರೆ ಭಾರತೀಯರಿಗೆ ಸುರಕ್ಷಿತ ಅನುಭವವನ್ನು ನೀಡಲು ಟ್ವಿಟರ್ ಬದ್ಧವಾಗಿಲ್ಲ ಎಂದು ಕಂಡು ಬರುತ್ತದೆ. ಸುಮಾರು ಒಂದು ದಶಕದಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಭಾರತೀಯರು ತಮ್ಮ ಕುಂದುಕೊರತೆಗಳನ್ನು ಸರಿಯಾಗಿ ಪರಿಹರಿಸಲು ಅನುವು ಮಾಡಿಕೊಡುವ ವ್ಯವಸ್ಥೆಯನ್ನು ಟ್ವಿಟರ್ ವಿರೋಧಿಸುವುದು ನಂಬಲಸಾಧ್ಯವಾಗಿದೆ. ಕಾನೂನಿನ ಪ್ರಕಾರ ಕಡ್ಡಾಯವಿದ್ದರೂ ಕೂಡ ಟ್ವಿಟರ್ ಅದನ್ನು ಮಾಡುತ್ತಿಲ್ಲ ಎಂದು ಹೇಳಿದೆ.