ಖಲಿಸ್ತಾನಿ ಭಯೋತ್ಪಾದಕ ಭಿಂದ್ರನವಾಲೆಯನ್ನು ‘ಹುತಾತ್ಮ’ ಎಂದು ಕರೆದಿದ್ದಕ್ಕಾಗಿ ಕ್ರಿಕೆಟಿಗ ಹರಭಜನ್ ಸಿಂಗ್‍ರಿಂದ ಕ್ಷಮೆಯಾಚನೆ

ನವ ದೆಹಲಿ – ಖಲಿಸ್ತಾನಿ ಭಯೋತ್ಪಾದಕ ಜರ್ನಲ್‍ಸಿಂಗ್ ಭಿಂದ್ರನವಾಲೆ ಅವರ ಮೃತ್ಯುದಿನದ ನಿಮಿತ್ತ ಶ್ರದ್ಧಾಂಜಲಿ ನೀಡುವ ಪೋಸ್ಟನ್ನು ಮಾಡಿದ್ದರಿಂದ ಭಾರತದ ಮಾಜಿ ಕ್ರಿಕೆಟಿಗ ಹರಭಜನ್ ಸಿಂಗ್ ಕ್ಷಮೆಯಾಚಿಸಿದ್ದಾರೆ. ಶ್ರದ್ಧಾಂಜಲಿ ಸಲ್ಲಿಸಿದ ನಂತರ ಹರಭಜನ್ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಟೀಕೆಗೆ ಗುರಿಯಾದರು. ಹರಭಜನ್ ಭಿಂದ್ರನವಾಲೆಯನ್ನು ‘ಹುತಾತ್ಮ’ ಎಂದು ಕರೆದಿದ್ದರು.

ಹರಭಜನ್ ಇವರು ಕ್ಷಮೆಯಾಚಿಸುವಾಗ ತಮ್ಮ ಟ್ವೀಟ್‍ನಲ್ಲಿ, ಸಂಬಂಧಪಟ್ಟ ಪೋಸ್ಟ್ ಅನ್ನು ನಾನು ಓದದೇ ಅಥವಾ ಅರ್ಥಮಾಡಿಕೊಳ್ಳದೆ ಇನ್‍ಸ್ಟಾಗ್ರಾಮ್‍ನಲ್ಲಿ ಅಪ್‍ಲೋಡ್ ಮಾಡಿದ್ದೇನೆ; ನಾನು ಈ ಸಿದ್ಧಾಂತದ ಬೆಂಬಲಿಗನಲ್ಲ, ಆ ಬಗೆಗಿನ ಯಾವುದೇ ವ್ಯಕ್ತಿಯನ್ನು ನಾನು ಬೆಂಬಲಿಸುವುದಿಲ್ಲ. ನಾನು ಸಿಖ್ ಆಗಿದ್ದೇನೆ, ದೇಶದ ವಿರುದ್ಧ ಅಲ್ಲ, ದೇಶಕ್ಕಾಗಿ ಹೋರಾಡುತ್ತೇನೆ. ದೇಶದ ಜನರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ನಾನು ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.