28 Muslims Life Imprisoned : ಚಂದನ ಗುಪ್ತಾ ಕೊಲೆ ಪ್ರಕರಣ : 28 ತಪ್ಪಿತಸ್ಥ ಮುಸ್ಲಿಮರಿಗೆ ಜೀವಾವಧಿ ಶಿಕ್ಷೆ!

ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯದ ತೀರ್ಪು

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಜನವರಿ 26, 2018 ರಂದು, ರಾಜ್ಯದ ಕಾಸಗಂಜ್‌ನಲ್ಲಿ ತ್ರಿವರ್ಣ ಯಾತ್ರೆಯ ಸಮಯದಲ್ಲಿ ಹಿಂದೂ ಯುವಕ ಚಂದನ ಗುಪ್ತಾನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯವು 28 ಮುಸ್ಲಿಂ ಹಂತಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.  ಇದರೊಂದಿಗೆ ತಲಾ 50 ಸಾವಿರ ದಂಡವನ್ನೂ ವಿಧಿಸಿದೆ. ನ್ಯಾಯಾಲಯದ ವಿಶೇಷ ನ್ಯಾಯಾಧೀಶ ನ್ಯಾಯಮೂರ್ತಿ ವಿವೇಕಾನಂದ ಶರಣ ತ್ರಿಪಾಠಿ ಅವರು ಶಿಕ್ಷೆಯನ್ನು ಪ್ರಕಟಿಸಿದರು.

ಏನಿದು ಪ್ರಕರಣ ?

ಜನವರಿ 26, 2018 ರಂದು, ಗಣರಾಜ್ಯೋತ್ಸವದಂದು, ಚಂದನ ಗುಪ್ತಾ ಇತರ ಯುವಕರೊಂದಿಗೆ ಕಾಸಗಂಜ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಬೈಕ್ ರ್ಯಾಲಿ ಹೋಗುತ್ತಿದ್ದರು. ಈ ಬೈಕ್ ರ್ಯಾಲಿಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ನಡೆಸಲಾಗಿತ್ತು. ಈ ಬೈಕ್ ರ್ಯಾಲಿ ಬಾಲಕಿಯರ ಸರಕಾರಿ ಇಂಟರ್ ಕಾಲೇಜು ಬಳಿ ಬಂದಾಗ ಮುಸ್ಲಿಂ ಯುವಕರು ಬೈಕ್ ರ್ಯಾಲಿ ಮೇಲೆ ದಾಳಿ ನಡೆಸಿದ್ದಾರೆ. ಅವರು ಗುಂಡು ಹಾರಿಸಿ, ಕಲ್ಲು ತೂರಾಟ ನಡೆಸಿದರು. ಚಂದನ ಗುಪ್ತಾ ಅವನನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಲಾಗಿತ್ತು.  ಇದರಲ್ಲಿ ಅವನು ಸಾವನ್ನಪ್ಪಿದನು. ಇದಾದ ನಂತರ ಕಾಸಗಂಜ್ ನಲ್ಲಿ ಭಾರೀ ಹಿಂಸಾಚಾರ ನಡೆದಿತ್ತು.