ದೇಶವನ್ನು ‘ಹಿಂದೂ ರಾಷ್ಟ್ರ’ ಎಂದು ಕರೆಯುವುದು ತಪ್ಪಾಗಿದ್ದರೆ, ರಾಜ್ಯವನ್ನು ‘ಕರ್ನಾಟಕ’ ಎಂದು ಕರೆಯುವುದು ತಪ್ಪು ! – ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಸ್ಪಷ್ಟೋಕ್ತಿ!

ಬೆಂಗಳೂರು – ಶ್ರೀರಾಮ ಮಂದಿರ ಸ್ಥಿರವಾಗಿರಬೇಕಾಗಿದ್ದರೆ, ಭಾರತ ‘ಹಿಂದೂ ರಾಷ್ಟ್ರ’ ಆಗಬೇಕು. ಕನ್ನಡಿಗರು ಬಹುಸಂಖ್ಯಾತರಾಗಿರುವ ರಾಜ್ಯವನ್ನು `ಕರ್ನಾಟಕ’ ಎಂದು ಕರೆಯುತ್ತಾರೆ, ಹೀಗಿರುವಾಗ ಹಿಂದೂ ಬಹುಸಂಖ್ಯಾತರಾಗಿರುವ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಏಕೆ ಕರೆಯಬಾರದು ? ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಪ್ರಶ್ನಿಸಿದರು. ಅಯೋಧ್ಯೆಯ ಶ್ರೀರಾಮ ಮಂದಿರದ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಸಮಾರಂಭ ಹತ್ತಿರವಾಗುತ್ತಿರುವಾಗ ಹಿಂದೂ ರಾಷ್ಟ್ರದ ವಿಷಯದಲ್ಲಿ ಚರ್ಚೆಯಾಗುತ್ತಿರುವ ಬಗ್ಗೆ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳು ಒಂದು ಸುದ್ಧಿವಾಹಿನಿಯಲ್ಲಿ ಮಾತನಾಡುತ್ತಿದ್ದರು. ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟನ ಸದಸ್ಯರೂ ಆಗಿದ್ದಾರೆ.
ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ತಮ್ಮ ಮಾತನ್ನು ಮುಂದುವರಿಸಿ,

1. ಕರ್ನಾಟಕವು ಕನ್ನಡ ಮಾತನಾಡುವ ಬಹುಸಂಖ್ಯಾತ ರಾಜ್ಯವಾಗಿದೆ. ಕನ್ನಡ ಭಾಷೆಯು ಹುಟ್ಟಿ ಅದು ವೃದ್ಧಿಸಿದ ಸ್ಥಾನವಾಗಿದೆ. ಹಿಂದೂ ಬಹುಸಂಖ್ಯಾತರಾಗಿರುವ ದೇಶವನ್ನು ‘ಹಿಂದೂ ರಾಷ್ಟ್ರ’ ಎಂದು ಕರೆಯುವುದರಲ್ಲಿ ತಪ್ಪೇನು ? ಇದು ತಪ್ಪಾಗಿದ್ದರೆ ಕರ್ನಾಟಕ ಎಂದು ಹೇಳುವುದು ಕೂಡ ತಪ್ಪಾಗುತ್ತದೆ.

2. ಹಿಂದೂಗಳು ಪ್ರತಿನಿತ್ಯ ಪಠಣ ಮಾಡುತ್ತಿರುವ ತೀರ್ಥಕ್ಷೇತ್ರಗಳ ಅಭಿವೃದ್ಧಿಯಾಗಬೇಕು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಹಿಂದೂಗಳ ಧಾರ್ಮಿಕ ಕ್ಷೇತ್ರಗಳನ್ನೂ ಮುಕ್ತಗೊಳಿಸಬೇಕಿತ್ತು; ಆದರೆ ನಮ್ಮ ಧಾರ್ಮಿಕ ಕ್ಷೇತ್ರಗಳು ಹಾಗೆಯೇ ಉಳಿದವು. ನಮಗೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಇನ್ನೂ ಮುಕ್ತಿ ಸಿಕ್ಕಿಲ್ಲ. ನಮ್ಮ ಶ್ರದ್ಧಾಸ್ಥಾನಗಳು ನಮಗೆ ಮರಳಿ ಸಿಗಬೇಕು.

3. ಅಯೋಧ್ಯೆಯ ಸಂದರ್ಭದಲ್ಲಿ ನೀಡಿರುವ ನಿರ್ಣಯದಂತೆ ಕಾಶಿ ಮತ್ತು ಮಥುರಾ ವಿಚಾರದಲ್ಲೂ ನ್ಯಾಯಾಲಯ ಅನುಕೂಲತೆಯನ್ನು ತೋರಿಸಿದೆ. ನ್ಯಾಯಾಲಯದ ಈ ನಿರ್ಣಯವನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಗುರಿ ಸಾಧಿಸುವವರೆಗೆ ಕಾರ್ಯ ನಿಲ್ಲುವುದಿಲ್ಲ. ನಾವು ಬಲವಂತದಿಂದ ಯಾವುದೇ ಪ್ರದೇಶವನ್ನು ತೆಗೆದುಕೊಳ್ಳುವುದಿಲ್ಲ. ಪ್ರಜಾಪ್ರಭುತ್ವವಿರುವ ರಾಷ್ಟ್ರದಲ್ಲಿ ಸಂವಿಧಾನದ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ಇದನ್ನು ಬೆಂಬಲಿಸಬೇಕು. ಇದನ್ನು ವಿರೋಧಿಸಬಾರದು ? ಎಂದು ಹೇಳಿದರು.

  • ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಸ್ವಾಮೀಜಿಗೆ ವಿರೋಧ !

  • ‘ಈ ದೇಶವು ಅನೇಕರದ್ದಾಗಿದೆ, ಕೇವಲ ಹಿಂದೂಗಳದ್ದು ಅಲ್ವಂತೆ !’

ಹಿಂದೂ ರಾಷ್ಟ್ರದ ವಿಷಯದ ಕುರಿತು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರ ಹೇಳಿಕೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಈ ದೇಶ ‘ಹಿಂದೂ ರಾಷ್ಟ್ರ’ ಆಗಬೇಕೆಂದು ಭಾಜಪದ ಸಿದ್ಧಾಂತವಾಗಿದೆ. ನಮ್ಮ ದೇಶ ಹಿಂದೂ ರಾಷ್ಟ್ರವಲ್ಲ. ಇದು ಅನೇಕರ ದೇಶವಾಗಿದೆ. ಕೇವಲ ಹಿಂದೂ ರಾಷ್ಟ್ರವನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಹೇಳಿಕೆಯ ಬಗ್ಗೆ ಸಿದ್ಧರಾಮಯ್ಯನವರು ವಿರೋಧಿಸುವುದು ಸೂಕ್ತವಲ್ಲ ! – ಮಾಜಿ ಸಚಿವ ಪ್ರಮೋದ ಮಧ್ವರಾಜ

ರಾಜ್ಯದ ಮಾಜಿ ಸಚಿವ ಪ್ರಮೋದ ಮಾಧ್ವರಾಜ ಮಾತನಾಡಿ, ಈ ದೇಶದಲ್ಲಿ ಬಹುಸಂಖ್ಯಾತರು ಹಿಂದೂಗಳಾಗಿದ್ದಾರೆ. ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳು ಹಿಂದೂ ಸಮಾಜದ ಮಾರ್ಗದರ್ಶಕರಾಗಿದ್ದಾರೆ. ಸಂವಿಧಾನವು ಎಲ್ಲರಿಗೂ ವಾಕ್ ಸ್ವಾತಂತ್ರ್ಯ ನೀಡಿದೆ. ಇದರಿಂದ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿರೋಧಿಸುವುದು ಸೂಕ್ತವಲ್ಲ. ಪೇಜಾವರ ಶ್ರೀಗಳು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.