ಧೈರ್ಯವಿದ್ದರೆ ಹಿಜಾಬ್ ನಿಷೇಧ ಹಿಂಪಡೆಯಿರಿ ! – ಕಲ್ಲಡ್ಕ ಪ್ರಭಾಕರ ಭಟ್

ರಾ. ಸ್ವಯಂ. ಸಂಘದ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಇವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸವಾಲು !

ರಾ. ಸ್ವಯಂ. ಸಂಘದ ನಾಯಕ ಕಲ್ಲಡ್ಕ ಪ್ರಭಾಕರ ಭಟ್

ಮಂಡ್ಯ – ಕಾಂಗ್ರೆಸ್ ಸರಕಾರ ‘ಹಿಜಾಬ್ ನಿಷೇಧ ಹಿಂಪಡೆಯಲಿದೆ’ ಎಂದು ಹೇಳುತ್ತಿದ್ದಾರೆ. ಸರಕಾರ ಶಾಲಾ ಮಕ್ಕಳಲ್ಲಿ ಪುನಃ ಬಿರುಕಿನ ವಿಷಬೀಜ ಬಿತ್ತಲು ಯತ್ನಿಸುತ್ತಿದೆ. ನೀವೇ ಸಮವಸ್ತ್ರವನ್ನು ರಚಿಸಿದ್ದೀರಿ ಮತ್ತು ಈಗ ನೀವೇ ಬಿರಿಕು ಮೂಡಿಸುತ್ತಿದ್ದೀರಿ. ನಿಮಗೆ ಧೈರ್ಯವಿದ್ದರೆ ಮತ್ತೊಮ್ಮೆ ಶಾಲೆಯಲ್ಲಿ ಹಿಜಾಬ್ ಧರಿಸುವಂತೆ ಆದೇಶ ತಂದು ತೋರಿಸಿ ಎಂದು ರಾ.ಸ್ವ.ಸಂಘದ ನಾಯಕ ಕಲ್ಲಡ್ಕ ಪ್ರಭಾಕರ ಭಟ ಇವರು ಇಲ್ಲಿನ ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸವಾಲು ಹಾಕಿದರು. ರಾಜ್ಯದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ತೆಗೆದುಹಾಕುವ ಕುರಿತು ಹೇಳಿಕೆ ನೀಡಿದ್ದರು. ಅದರಿಂದ ಭಟ್ ಮೇಲಿನ ಸವಾಲನ್ನು ನೀಡಿದರು.

ಮುಸ್ಕಾನ್ ಕಾಲೇಜಿಗೆ ಹೋಗುವ ಬದಲು ಮನೆಯಲ್ಲಿ ಅಥವಾ ಮಸೀದಿಯಲ್ಲಿ ಅಲ್ಲಾಹು ಅಕ್ಬರ್ (ಅಲ್ಲಾಹ್ ಮಹಾನ್) ಎಂದು ಹೇಳುತ್ತಾ ಕೂಡಲಿ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಇವರು ಹಿಜಾಬ್ ನಿಷೇಧವನ್ನು ಹಿಂಪಡೆಯುವ ಹೇಳಿಕೆಯನ್ನು ನೀಡಿದನಂತರ ಮುಸ್ಕಾನ್ ಹೆಸರಿನ ಮುಸ್ಲಿಂ ಯುವತಿಯು ‘ನಾನು ಮತತ್ಒಮ್ಮೆ ಕಲಿಯಲು ಕಾಲೇಜಿಗೆ ಹೋಗುವೆ’, ಎಂದು ಹೇಳಿಕೆ ನಿಡಿದ್ದಾರೆ. ಹಿಜಾಬ್ ಅನ್ನು ನಿಷೇಧಿಸಿದನಂತರ ಮುಸ್ಕಾನ್ ಕಾಲೇಜಿನ ಪರಿಸರದಲ್ಲಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ನೀಡಿ ವಿರೋಧ ವ್ಯಕ್ತಪಡಿಸಿರುವ ವಿಡಿಯೋ ದೊಡ್ಡ ಪ್ರಮಾಣದಲ್ಲಿ ವೈರಲ್ ಆಗಿ ಪ್ರಸಿದ್ಧಿ ಪಡೆದಿದ್ದಳು. ಮುಸ್ಕಾನ್ ಇವರ ಹೇಳಿಕೆಯ ಕುರಿತು ಕಲ್ಡ್ಕಾ ಪ್ರಭಾಕರ ಭಟ ಇವರು ಮಾತನಾಡಿ, ನೀನು ಮನೆಯಲ್ಲಿ ಅಥವಾ ಮಸೀದಿಯಲ್ಲಿ ಅಲ್ಲಾಹು ಅಕ್ಬರ್ ಹೇಳುತ್ತಾ ಕುಳಿತುಕೊ. ಈ ದೇಶದಲ್ಲಿ ಈಗ ರಾಮ ಅಂತಾನೇ ಹೇಳಬೇಕಾಗಬಹುದು. ಅಲ್ಲಾಹು ಅಕ್ಬರ್ ಹೇಳುವುದಿದ್ದರೆ, ಮುಸ್ಲಿಂ ದೇಶಕ್ಕೆ ಹೋಗು. ಮುಸ್ಕಾನ್‌ಗೆ ಹಿಗಳಿದವ ಅಲ್ ಕಾಯ್ದಾ ಈ ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿದ್ದ. ಮುಸ್ಕಾನ್ ಕೂಡ ಅಲ್ ಕಾಯ್ದಾ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದಾಳೆ. ಧೈರ್ಯವಿದ್ದರೆ ಮುಸ್ಕಾನ್ ಕಾಲೇಜಿಗೆ ಹೋಗಿ ತೋರಿಸಲಿ, ಎಂದು ಹೇಳಿದರು.

ಭಾರತವನ್ನು ಇಸ್ಲಾಂ ದೇಶವನ್ನಾಗಿ ಮಾಡಲು ಮುಸಲ್ಮಾನರು ಇಲ್ಲಿಗೆ ಬಂದರು !

ಕಲ್ಲಡ್ಕಾ ಪ್ರಭಾಕರ ಭಟ್ ಇವರು ಮಾತು ಮುಂದುವರೆಸಿ, ಈ ದೇಶವನ್ನು ಇಸ್ಲಾಮೀ ದೇಶವನ್ನಾಗಿ ಮಾಡಲು ಮುಸಲ್ಮಾನರು ಬಂದಿದ್ದಾರೆ. ಗಜನಿಯ ಕಾಲದಿಂದಲೂ ಹತ್ಯೆ, ಅತ್ಯಾಚಾರ, ಲೂಟಿ ಮಾಡಲಾಗುತ್ತಿದೆ. ಕಾಶ್ಮೀರವನ್ನು ಪಾಕಿಸ್ತಾನ ತೆಗೆದುಕೊಂಡನಂತರ ನೆಹರು ಮತ್ತು ಕಾಂಗ್ರೆಸ್ ದೇಶಕ್ಕೆ ವಂಚಿಸಿದರು. ‘ಈ ದೇಶದಲ್ಲಿನ ಆಸ್ತಿಯ ಮೇಲೆ ಮೊದಲ ಹಕ್ಕು ಮುಸಲ್ಮಾನರದ್ದಾಗಿದೆ’, ಎಂದು ಮನಮೋಹನ ಸಿಂಹ ಇವರು ಘೋಷಣೆ ಮಾಡಿದ್ದರು.

ಭಟ್ ಇವರ ವಿರುದ್ಧ ಮತ್ತೊಮ್ಮೆ ದೂರು ದಾಖಲು

ಮಂಡ್ಯದ ಸಾಮಾಜಿಕ ಕಾರ್ಯಕರ್ತೆ ನಜಮಾ ನಝೀರ್ ಇವರು ನೀಡಿದ ದೂರಿನ ಮೇರೆಗೆ ಕಲ್ಲಡ್ಕಾ ಪ್ರಭಾಕರ ಭಟ್ ಇವರ ವಿರುದ್ಧ ದೂರು ದಾಖಲಿಸಲಾಯಿತು. ಅಕ್ಷೆಪಾರ್ಹ ಹೇಳಿಕೆ ನೀಡಿ ಧಾರ್ಮಿಕ ಸಾಮರಸ್ಯ ಹಾಳು ಮಾಡಿದ ಬಗ್ಗೆ ದೂರು ದಾಖಲಿಸಲಾಗಿದೆ. (ಭಟ್ ಹೇಳಿರುವುದರಲ್ಲಿ ಆಕ್ಷೇಪಣೆ ಏನಿದೆ. ಹಿಂದುತ್ವನಿಷ್ಠರ ವಿರುದ್ಧ ಮುಸಲ್ಮಾನರು ದೂರು ದಾಖಲಿಸಿದನಂತರ ಅದನ್ನು ಕೂಡಲೇ ಸಕ್ರೀಯರಾಗುವ ಪೊಲೀಸರು ಇದೇ ತತ್ಪರತೆಯನ್ನು ಗಲಭೆ ಸೃಷ್ಟಿಸುವ ಮತಾಂಧ ಮುಸಲ್ಮಾನರ ಕುರಿತು ತೋರಿಸುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ – ಸಂಪಾದಕರು)