|
ಬೆಂಗಳೂರು – ರಾಜ್ಯದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸಚಿವ ಜಮೀರ್ ಅಹಮದ್ ಖಾನ್ ಇವರು ಒಂದು ಖಾಸಗಿ ಚಾರ್ಟಡ್ ವಿಮಾನದಿಂದ ನವದೆಹಲಿಗೆ ಹೋಗಿದ್ದರು. ರಾಜ್ಯದಲ್ಲಿನ ಬರಗಾಲದ ಸಂದರ್ಭದಲ್ಲಿ ಕೇಂದ್ರ ಸರಕಾರದ ಜೊತೆಗೆ ಚರ್ಚಿಸಲು ಆರ್ಥಿಕ ಸಹಾಯ ಕೇಳಲು ಅವರು ದೆಹಲಿಗೆ ಹೋಗಿದ್ದರು. ಈ ಪ್ರವಾಸಕ್ಕಾಗಿ ಸರಕಾರದಿಂದ ೪೦ ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಈ ಖರ್ಚಿನ ಬಗ್ಗೆ ಭಾಜಪ ಸಿದ್ದರಾಮಯ್ಯ ಇವರನ್ನು ಕಠೋರವಾಗಿ ಟೀಕಿಸಲಾಗಿದೆ. ಭಾಜಪದ ರಾಷ್ಟ್ರೀಯ ವಕ್ತಾರರಾದ ಶಹಜಾದಾ ಪುನಾವಾಲ ಇವರು, ಒಂದು ಕಡೆ ರಾಜ್ಯದಲ್ಲಿ ಹಾಲು, ವಿದ್ಯುತ್ ಬೆಲೆ ಏರಿಕೆ ಆಗಿದೆ, ಬರಗಾಲ ಇರುವಾಗ ಇನ್ನೊಂದು ಕಡೆ ಮುಖ್ಯಮಂತ್ರಿ ಹಾಗೂ ಸಚಿವರು ಖಾಸಗಿ ವಿಮಾನದಿಂದ ಪ್ರಯಾಣ ಮಾಡುತ್ತಾರೆ. ಅದರ ಚಿತ್ರೀಕರಣ ಮಾಡುತ್ತಾರೆ. ಇದೆಲ್ಲವೂ ತೆರಿಗೆದಾರರ ಹಣದಿಂದ ಮಾಡಲಾಗುತ್ತಿದೆ. ಇದು ನಾಚಿಕೆಗೇಡು. ಇದರಿಂದ ಕಾಂಗ್ರೆಸ್ ಎಲ್ಲಿಯೇ ಅಧಿಕಾರಕ್ಕೆ ಬಂದರು, ಅದು ಜನರ ಹಣವನ್ನು ಪೋಲು ಮಾಡುತ್ತದೆ ಎಂಬುದು ಗಮನಕ್ಕೆ ಬರುತ್ತದೆ.’ ಎಂದು ಹೇಳಿದರು.
(ಸೌಜನ್ಯ – India today)
ಬಿಜೆಪಿಗೆ ಪ್ರಶ್ನೆ ಕೇಳಿ ! – ಮುಖ್ಯಮಂತ್ರಿ ಸಿದ್ದರಾಮಯ್ಯ
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಪತ್ರಕರ್ತರು ಕೇಳಿರುವ ಪ್ರಶ್ನೆಗೆ, ಈ ಪ್ರಶ್ನೆ ನೀವು ಬಿಜೆಪಿಯವರಿಗೆ ಕೇಳಿ. ಪ್ರಧಾನಮಂತ್ರಿ ಮೋದಿ ಯಾವ ವಿಮಾನವನ್ನು ಉಪಯೋಗಿಸುತ್ತಾರೆ ? ಅವರು ಇಂತಹ ವಿಮಾನದಿಂದ ಒಬ್ಬರೇ ಪ್ರಯಾಣ ಏಕೆ ಮಾಡುತ್ತಾರೆ ? ಈ ಪ್ರಶ್ನೆ ಅವರಿಗೆ ನೇರವಾಗಿ ಕೇಳಿ, ಎಂದು ಉತ್ತರ ನೀಡಿದರು.
ಸಂಪಾದಕೀಯ ನಿಲುವುಕಾಂಗ್ರೆಸ್ ಸರಕಾರ ಜನರ ಹಣದ ದುರುಪಯೋಗ ಮಾಡಿರುವ ಹಣ ಜನರೆ ಅವರಿಂದ ವಸೂಲಿಗೆ ಆಗ್ರಹಿಸಬೇಕು ! |