ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಸಂಘ ಮತ್ತು ಭಾಜಪ ಟೀಕೆ!
ಬೆಂಗಳೂರು – ನಮ್ಮ ಮೇಲೆ ಹಿಂದೂ ವಿರೋಧಿ ಎಂದು ಆರೋಪಿಸುತ್ತಾರೆ; ಆದರೆ ಮಹಾತ್ಮಾ ಗಾಂಧಿಯಂತಹ ಶ್ರೇಷ್ಠ ಹಿಂದೂ ಯಾರೂ ಇಲ್ಲ ಇಂತಹ ಶ್ರೇಷ್ಠ ಹಿಂದೂವನ್ನು ಹತ್ಯೆ ಮಾಡಿದವರು ಹಿಂದೂ ಧರ್ಮದ ವಿಷಯದಲ್ಲಿ ಮಾತನಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯ ದಿನದಂದು ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು,
1. ಮಹಾತ್ಮಾ ಗಾಂಧಿಯವರ ಮತಾಂಧ ಗೋಡ್ಸೆ ಗುಂಡಿಕ್ಕಿ ಹತ್ಯೆ ಮಾಡಿದನು. ಇಂದು ಅದೇ ಗೋಡ್ಸೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರ ಆದರ್ಶವಾಗಿದೆ.
2. ಮಹಾತ್ಮಾ ಗಾಂಧಿಯವರು ಸತ್ಯ ಮತ್ತು ಅಹಿಂಸೆಯನ್ನು ಹೇಳಿದರು. (ಸತ್ಯ ಮತ್ತು ಅಹಿಂಸೆ ವ್ಯಷ್ಟಿ ಸಾಧನೆಯ ಅಡಿಯಲ್ಲಿ ಬರುತ್ತವೆ, ಇದೂ ಗೊತ್ತಿರದ ಶತ್ರುಗಳೆದುರಿಗೆ ದೇಶದ ಮತ್ತು ಹಿಂದೂಗಳ ಆತ್ಮಘಾತ ಮಾಡುವ ಮಹಾತ್ಮಾ ಗಾಂಧಿ- ಸಂಪಾದಕರು) ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಂತೆ ಅವರು ಬಂಗಾಳದಲ್ಲಿ ಹಿಂದೂ-ಮುಸ್ಲಿಂ ನಡುವೆ ಸೌಹಾರ್ದತೆ ಮೂಡಿಸುವ ಕೆಲಸ ಮಾಡುತ್ತಿದ್ದರು. (ಸಾಮರಸ್ಯ ವಿಲ್ಲ, ಆದರೆ ಮತಾಂಧರ ದಾಳಿಗೆ ಪ್ರತ್ಯುತ್ತರ ನೀಡಲು ಪ್ರಾರಂಭಿಸಿದ್ದರಿಂದ ಹಿಂದೂಗಳಿಗೆ ಶಸ್ತ್ರಗಳನ್ನು ಕೆಳಗಿಡುವಂತೆ ಒತ್ತಡ ನಿರ್ಮಾಣ ಮಾಡುವ ಕೆಲಸವನ್ನು ಮಾಡುತ್ತಿದ್ದರು. ಒಂದು ಕೆನ್ನೆಗೆ ಯಾರಾದರೂ ಹೊಡೆದರೆ, ಇನ್ನೊಂದು ಕೆನ್ನೆಯನ್ನು ಮುಂದೆ ಮಾಡುವಂತೆ ಹೇಳುತ್ತಿದ್ದರು- ಸಂಪಾದಕರು) ಗಾಂಧಿ ಅವರು ಮಾನವೀಯತೆ ಮತ್ತು ಭ್ರಾತೃತ್ವದಲ್ಲಿ ದೃಢವಾದ ನಂಬಿಕೆಯನ್ನು ಹೊಂದಿದ್ದರು. (ಹಿಂದೂಗಳನ್ನು ಮೋಸಗೊಳಿಸಿ ಮಾನವೀಯತೆ ಮತ್ತು ಭ್ರಾತೃತ್ವವನ್ನು ಪಾಲಿಸಿ ಜಗತ್ತಿನಲ್ಲಿ ಸ್ವತಃ ಮಹಾನ ಆಗಿರುವ ಮಹಾತ್ಮಾ ಗಾಂಧಿ- ಸಂಪಾದಕರು) ಮಹಾತ್ಮಾ ಗಾಂಧಿಯವರ ಆದರ್ಶ ತತ್ವಗಳ ಪಾಲನೆ ಮಾಡುವುದು, ಅವರಿಗೆ ನೀಡಿರುವ ಗೌರವವಾಗಿದೆ. (ಇದು ಹಿಂದೂಗಳಿಗೆ ಮಾಡಿದ ಮೋಸವಾಗಿದೆ- ಸಂಪಾದಕರು)
3. ಭಾಜಪ ರಾಮನ ಹೆಸರನ್ನು ರಾಜಕಾರಣಕ್ಕಾಗಿ ಉಪಯೋಗಿಸುತ್ತಿದೆ. ಮಹಾತ್ಮಾ ಗಾಂಧಿಯವರ ಕೊನೆಯ ಶಬ್ದ `ಹೇ ರಾಮ’ ಎಂದಾಗಿತ್ತು. ಅಂಥ ವ್ಯಕ್ತಿಯನ್ನು ಕೊಂದವರು ಈಗ ರಾಮನ ಜಪವನ್ನು ಮಾಡುತ್ತಿದ್ದಾರೆ. (ಮಹಾತ್ಮಾ ಗಾಂಧಿಯವರ ಸುಲಭದ ಮತವನ್ನು ಉಪಯೋಗಿಸಿಕೊಳ್ಳುವ ಕಾಂಗ್ರೆಸ್ಸಿಗರು ಇದೇ ಶ್ರೀರಾಮನನ್ನು ಕಾಲ್ಪನಿಕ ಎಂದು ಹೇಳಿದ್ದಾರೆ! – ಸಂಪಾದಕರು)