‘ಕ್ರೈಸ್ತರ ಅಭಿವೃದ್ಧಿಗೆ ಬಜೆಟ್‌ನಲ್ಲಿ 500 ಕೋಟಿ ರೂಪಾಯಿಗಳನ್ನು ಅನುಮತಿಸಬೇಕಂತೆ !’ – ವಿಧಾನ ಪರಿಷತ್ತಿನ ಮಾಜಿ ಶಾಸಕ ಐವನ್ ಡಿಸೋಜಾ

ಮುಖ್ಯಮಂತ್ರಿಗಳಿಗೆ ವಿಧಾನ ಪರಿಷತ್ತಿನ ಮಾಜಿ ಶಾಸಕ ಐವನ್ ಡಿಸೋಜಾ ಅವರ ಆಗ್ರಹ

ಮಂಗಳೂರು – ಮುಂದಿನ ಬಜೆಟ್‌ನಲ್ಲಿ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಕನಿಷ್ಠ 500 ಕೋಟಿ ರೂಪಾಯಿಗಳನ್ನು ಮೀಸಲಿಡಬೇಕು ಎಂದು ರಾಜ್ಯದ ವಿಧಾನ ಪರಿಷತ್ತಿನ ಮಾಜಿ ಶಾಸಕ ಐವನ್ ಡಿಸೋಜಾ ಅವರು ರಾಜ್ಯದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಒತ್ತಾಯಿಸಿದರು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಹೆಚ್ಚು ಸಹಾಯಧನ ನೀಡುವ ಮೂಲಕ ನಿಮ್ಮ ಬೇಡಿಕೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ’ ಎಂದು ಭರವಸೆ ನೀಡಿದರು. ಈ ಸಮಯದಲ್ಲಿ ಡಿಸೋಜಾರೊಂದಿಗೆ ಕಾರ್ಕಳ ಅತ್ತೂರು ಬೆಸಿಲಿಕಾ ಚರ್ಚ್‌ನ ಅಲ್ಬನ್ ಡಿಸೋಜಾ ಮತ್ತು ಸಂತೋಷ್ ಡಿಸಿಲ್ವ ಉಪಸ್ಥಿತರಿದ್ದರು.

‘ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿದಕ್ಕಾಗಿ ಇವ್ಹಾನ್ ಡೊಸೂಜಾ ಇವರು ಮುಖ್ಯಮಂತ್ರಿಗಳಿಗೆ ಆಭಾರ ಸಲ್ಲಿಸಿದರು.

ಸಂಪಾದಕೀಯ ನಿಲುವು

ಹಿಂದೂಗಳು ಎಂದಾದರೂ ಕಾಂಗ್ರೆಸ್ ಅಥವಾ ಇತರ ಪಕ್ಷದ ಸರಕಾರದ ಬಳಿ ‘ಹಿಂದೂಗಳ ಅಭಿವೃದ್ಧಿಗಾಗಿ ಇಷ್ಟು ಮೊತ್ತವನ್ನು ನೀಡಿ’, ಎಂದು ಒತ್ತಾಯಿಸುತ್ತಾರೆಯೇ ? ಜಾತ್ಯತೀತ ರಾಷ್ಟ್ರದಲ್ಲಿ ಬಹುಸಂಖ್ಯಾತರಾಗಿರುವ ಹಿಂದೂಗಳೇ ಒತ್ತಾಯಿಸದಿರುವಾಗ ಅಲ್ಪಸಂಖ್ಯಾತರು ಇದನ್ನು ಏಕೆ ಒತ್ತಾಯಿಸುತ್ತಾರೆ ? ಧರ್ಮದ ಹೆಸರಿನಲ್ಲಿ ಸುಖಸೌಲಭ್ಯಗಳನ್ನು ಹೇಗೆ ಕೇಳುತ್ತಾರೆ ?’, ಹಿಂದೂಗಳು ಈ ಪ್ರಶ್ನೆಯನ್ನು ಕೇಳಲೇಬೇಕು !