ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವ
ಗುರುಪೂರ್ಣಿಮೆಯಂದು ೧೦೦೦ ಪಟ್ಟು ಹೆಚ್ಚು ಕಾರ್ಯನಿರತ ಗುರುತತ್ತ್ವದಿಂದ ಎಲ್ಲರಿಗೂ ಲಾಭವಾಗಬೇಕೆಂದು ’ಆನ್‌ಲೈನ್’ ಮೂಲಕ ಗುರುಪೂರ್ಣಿಮಾ ಮಹೋತ್ಸವ ಆಯೋಜಿಸುತ್ತಿದ್ದೇವೆ. ತಮಗೆಲ್ಲರಿಗೂ ಹಾರ್ದಿಕ ಆಮಂತ್ರಣ.
ಗುರುಪೂರ್ಣಿಮೆಯಂದು ೧೦೦೦ ಪಟ್ಟು ಹೆಚ್ಚು ಕಾರ್ಯನಿರತ ಗುರುತತ್ತ್ವದಿಂದ ಎಲ್ಲರಿಗೂ ಲಾಭವಾಗಬೇಕೆಂದು ’ಆನ್‌ಲೈನ್’ ಮೂಲಕ ಗುರುಪೂರ್ಣಿಮಾ ಮಹೋತ್ಸವ ಆಯೋಜಿಸುತ್ತಿದ್ದೇವೆ. ತಮಗೆಲ್ಲರಿಗೂ ಹಾರ್ದಿಕ ಆಮಂತ್ರಣ.
ಜ್ಞಾನಯೋಗ, ಧ್ಯಾನಯೋಗ, ಕರ್ಮಯೋಗ ಮತ್ತು ಭಕ್ತಿಯೋಗ ಇವುಗಳ ಸಂಗಮವಾಗಿರುವ ‘ಗುರುಕೃಪಾಯೋಗದ ಮೂಲಕ ಪ.ಪೂ. ಗುರುದೇವರು ಜೀವನದ ಪ್ರತಿಯೊಂದು ಅಂಗದ ಅಧ್ಯಾತ್ಮೀಕರಣ ಮಾಡುವುದನ್ನು ಕಲಿಸಿದರು ! ಆ ಅಮೂಲ್ಯ ಬೋಧನೆಯ ಪ್ರಸಾರ ಮಾಡುವುದೇ ಅವರ ಬಗೆಗಿನ ನಿಜವಾದ ಕೃತಜ್ಞತೆಯಾಗಿದೆ.
ಗುರುಕಾರ್ಯವನ್ನು ಪೂರ್ಣತ್ವಕ್ಕೆ ತೆಗೆದುಕೊಂಡು ಹೋಗಲು ಸಾಧಕರಿಗೆ ಪ್ರಕಾಶರೂಪಿ ಊರ್ಜೆಯು ದೊರೆಯಲೆಂದು ಭೃಗು ಮಹರ್ಷಿಗಳ ಆಜ್ಞೆಯಿಂದ ೧೯.೨.೨೦೧೯ ರಂದು ‘ಸಹಸ್ರದೀಪದರ್ಶನ ಸಮಾರಂಭ’ ನೆರವೇರಿತು. ಈ ಸಮಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಕೈಯಲ್ಲಿನ ದೀಪದಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕೈಗಳಲ್ಲಿನ ದೀಪಗಳನ್ನು ಪ್ರಜ್ವಲಿಸಲಾಯಿತು.
ವಿವಿಧ ಯೋಗ ಸಾಧನೆಗಳಿಂದ ಜೀವದ ಸಾತ್ತ್ವಿಕತೆಯು ಹೆಚ್ಚಾಗಿ ಜೀವದ ಸಪ್ತದೇಹಗಳು ಶುದ್ಧವಾಗುತ್ತವೆ. ಅದರಲ್ಲಿ ಶಕ್ತಿ, ಜ್ಞಾನ, ಆನಂದವು ಹೆಚ್ಚಾಗಿ ಜೀವಕ್ಕೆ ಪರಿಪೂರ್ಣತೆಯು ಬರತೊಡಗುತ್ತದೆ. ಅವನಿಂದಾಗುವ ತಪ್ಪುಗಳು ಕಡಿಮೆಯಾಗುತ್ತದೆ. ಅವನಲ್ಲಿನ ಚೈತನ್ಯದಲ್ಲಿ ಹೆಚ್ಚಳವಾಗುತ್ತದೆ.
ಪ್ರಭು ಶ್ರೀರಾಮಚಂದ್ರನು ಸಮಸ್ತ ಜೀವಗಳ ಕಲ್ಯಾಣ ಮಾಡುವ ರಾಮ ರಾಜ್ಯವನ್ನು ಸ್ಥಾಪಿಸಿದನು. ಭಗವಾನ ಶ್ರೀಕೃಷ್ಣನು ದುಷ್ಟ ಕೌರವರನ್ನು ಪರಾಭವಗೊಳಿಸಿ ಧರ್ಮ ರಾಜ್ಯವನ್ನು ಸ್ಥಾಪಿಸಿದನು. ಕಲಿಯುಗದಲ್ಲಿಯೂ ಧರ್ಮಸಂಸ್ಥಾಪನೆಯ ಮಹಾನ್ ಕಾರ್ಯವನ್ನು ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾಕ್ಟರರು ಪ್ರಾರಂಭಿಸಿದ್ದಾರೆ.
ಸ್ವಲ್ಪದರಲ್ಲಿ ಹೇಳುವುದಾದರೆ ಸಂತರು, ಗುರುಗಳು ಗದರಿಸುತ್ತಿದ್ದರೆ, ಅವರ ಗದರಿಸುವುದರ ವಿಶ್ಲೇಷಣೆಯನ್ನು ಮಾಡದೇ ನಾಮಸ್ಮರಣೆ ಮತ್ತು ಸೇವೆಯನ್ನು ಮಾಡುತ್ತಲೇ ಇರಬೇಕು, ಏಕೆಂದರೆ ನಿಜವಾದ ಕಾರಣವನ್ನು ತಿಳಿದುಕೊಳ್ಳುವುದು ನಮ್ಮ ಕ್ಷಮತೆಗೆ ಮೀರಿದ ಸಂಗತಿಯಾಗಿದೆ !
‘ನಮ್ಮ ವೈಯಕ್ತಿಕ ಸಾಧನೆ ಉತ್ತಮ ರೀತಿಯಲ್ಲಾದರೆ, ಸಮಷ್ಟಿಯಲ್ಲಿ ಅದರಿಂದ ಹೇಗೆ ಪರಿಣಾಮವಾಗುತ್ತದೆ ? ಸಮಷ್ಟಿಯಲ್ಲಿ ಹೋಗುವಾಗ ನಾವು ಹೇಗೆ ಆದರ್ಶರಾಗಿ ಹೋಗಬೇಕು ? ನಾವು ಸನಾತನ ಸಂಸ್ಥೆ ಅಥವಾ ಹಿಂದೂ ಜನಜಾಗೃತಿ ಸಮಿತಿಯ ಪ್ರತಿನಿಧಿಗಳು ಎಂಬ ಅರಿವನ್ನು ಸತತವಾಗಿ ಇಟ್ಟುಕೊಳ್ಳುವುದು ಹೇಗೆ ?, ಇದರ ಬಗ್ಗೆ ಎಲ್ಲರಿಗೂ ಹೇಳಲಾಯಿತು.
ಗುರು ಮತ್ತು ಶಿಷ್ಯ ಇವರಿಬ್ಬರು ದೀಪದಂತೆ ಇರುತ್ತಾರೆ. ಎಣ್ಣೆಬತ್ತಿ ಇರದಿರುವ ದೀಪವನ್ನು ಒಂದು ವೇಳೆ ೧೦೦ ಬಾರಿ ಪ್ರಕಾಶಮಾನವಾಗಿರುವ ದೀಪದ ಹತ್ತಿರ ಕೊಂಡೊಯ್ದರೂ, ಅದು ಬೆಳಕು ಕೊಡುವುದಿಲ್ಲ. ಶಿಷ್ಯನ ದೀಪದಲ್ಲಿನ ಎಣ್ಣೆ ಬತ್ತಿಯೆಂದರೆ ಅವನ ನಿಷ್ಠೆ, ಶ್ರದ್ಧೆ ಮತ್ತು ಭಕ್ತಿ !
ವ್ಯಷ್ಟಿ ಅಥವಾ ಸಮಷ್ಟಿಯಾಗಿರಲಿ ಯಾವುದೇ ಮಾರ್ಗದಿಂದ ಹೋದರೂ ಶ್ರೀಗುರುಗಳ ಮಾರ್ಗದರ್ಶನ ಮತ್ತು ಅನುಗ್ರಹವು ಪಡೆಯವುದು ಅತ್ಯಂತ ಅವಶ್ಯಕವಿದೆ. ಗುರುಭಕ್ತಿಯೇ ವ್ಯಷ್ಟಿ ಮತ್ತು ಸಮಷ್ಟಿ ಕಾರ್ಯದ ಗುರುಕೀಲಿಕೈಯಾಗಿದೆ.
ಸಂತರು ಅಥವಾ ಗುರುಗಳು ಸಾಧಕರಿಗೆ ಅಥವಾ ಶಿಷ್ಯರಿಗೆ ವಿವಿಧ ರೀತಿಯಲ್ಲಿ ಕಲಿಸುತ್ತಿರುತ್ತಾರೆ. ಕೆಲವೊಮ್ಮೆ ಅವರ ಕಲಿಸುವಿಕೆಯು ಪ್ರತ್ಯಕ್ಷವಾಗಿದ್ದರೆ, ಇನ್ನೂ ಕೆಲವೊಮ್ಮೆ ಅದು ಪರೋಕ್ಷ (ವರ್ತನೆಯಿಂದ) ವಾಗಿರುತ್ತದೆ. ಕೆಲವೊಮ್ಮೆ ಅವರು ವಿನೋದದಿಂದ ಕಲಿಸಿದರೆ, ಇನ್ನೂ ಕೆಲವೊಮ್ಮೆ ಅವರು ಅನುಭೂತಿಗಳನ್ನು ಕೊಟ್ಟು ಕಲಿಸುತ್ತಾರೆ.