ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಶೇ. ೧೦೦ ರಷ್ಟು ಅಂಕ ಪಡೆದ ಮಂಗಳೂರಿನ ಸನಾತನದ ಯುವಸಾಧಕಿ ಕು. ಮಂಜುಷಾ ಪೈ

ಕು. ಮಂಜೂಷಾ ಪೈ

ಮಂಗಳೂರು – ಇಲ್ಲಿನ ಸನಾತನ ಸಂಸ್ಥೆಯ ಯುವ ಸಾಧಕಿ ಕು. ಮಂಜುಷಾ ಪೈ ಇವರು ಈ ವರ್ಷದ ದ್ವಿತೀಯ ಪಿ.ಯು.ಸಿ.ಯ ವಾಣಿಜ್ಯ ಶಾಖೆಯ ಪರೀಕ್ಷೆಯ ಎಲ್ಲ ವಿಷಯಗಳಲ್ಲಿ ಶೇಕಡಾ ೧೦೦ ರಷ್ಟು ಅಂಕಗಳನ್ನು ಗಳಿಸಿದರು. ಕು. ಮಂಜುಷಾ ಇವರು ಇಲ್ಲಿನ ಸಾಧಕಿಯಾದ ಸೌ. ಲಕ್ಷ್ಮೀ ಪೈ ಇವರ ದ್ವಿತೀಯ ಪುತ್ರಿಯಾಗಿದ್ದಾರೆ.

ಕು. ಮಂಜುಷಾ ಇವರು ತಮ್ಮ ವ್ಯಾಸಂಗದ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನ್ನಡ ಸಾಪ್ತಾಹಿಕ ‘ಸನಾತನ ಪ್ರಭಾತದ ಜಾಹೀರಾತಿನ ಸಂರಚನೆ ಸೇವೆಯನ್ನು ಮಾಡುವುದು, ‘ಆನ್‌ಲೈನ್ ಸತ್ಸಂಗಗಳ ಪ್ರಕ್ರಿಯೆಯ ಸೇವೆಯನ್ನು ಮಾಡುವುದು ಹಾಗೂ ಸಾಂದರ್ಭಿಕ ‘ಆನ್‌ಲೈನ್ ಕಾರ್ಯಕ್ರಮಗಳ ಚಿತ್ರೀಕರಣ ಮಾಡುವುದು ಈ ಸೇವೆಗಳನ್ನು ಮಾಡುತ್ತಾರೆ. ಈ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ ಕು. ಮಂಜುಷಾ ಇವರು ‘ತನ್ನ ವ್ಯಾಸಂಗದ ಜೊತೆಗೆ ಗುರುಸೇವೆಯನ್ನು ಕೂಡ ನಿಯಮಿತವಾಗಿ ಮಾಡಿದ್ದರಿಂದಲೇ ತನಗೆ ಶಿಕ್ಷಣದಲ್ಲಿ ಯಶಸ್ಸು ಪ್ರಾಪ್ತವಾಗಿದೆ, ಎಂದು ಹೇಳಿ ಶ್ರೀಗುರುಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

ಪರಿಪೂರ್ಣ ಸೇವೆ ಮಾಡಲು ಪ್ರಯತ್ನಿಸುವ ಕು. ಮಂಜುಷಾ ಪೈ

ಕು. ಮಂಜೂಷಾಳ ಗುಣವೈಶಿಷ್ಟ್ಯಗಳ ಬಗ್ಗೆ ಹೇಳಿದ ಸೌ. ಲಕ್ಷ್ಮಿ ಪೈ ಇವರು, ‘ಕು. ಮಂಜುಷಾ ಇವಳಲ್ಲಿ ಸ್ವೀಕಾರವೃತ್ತಿ ಇರುವುದು ಮತ್ತು ಪರಿಪೂರ್ಣ ಸೇವೆ ಮಾಡಲು ಪ್ರಯತ್ನಿಸುವುದು, ಈ ವಿಶೇಷ ಗುಣಗಳಿವೆ.ಅವಳು ಪರೀಕ್ಷೆಯ ಕಾಲದಲ್ಲಿಯೂ ಪರಿಶ್ರಮಪಟ್ಟು ಗುರುಸೇವೆ ಮಾಡಿದ್ದಳು, ಎಂದರು.