ಬಂಟ್ವಾಳದ ಚಿ. ಶ್ರೇಯಸ್ ಶೆಣೈ ಇವರು ಸಿಬಿಎಸ್‌ಸಿಯ ೧೦ ನೆಯ ತರಗತಿಯ ಪರೀಕ್ಷೆಯಲ್ಲಿ ಶೇ. ೯೫.೨ ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

ಚಿ. ಶ್ರೇಯಸ್ ಶೆಣೈ

ಬಂಟ್ವಾಳ – ಇಲ್ಲಿನ ವಿದ್ಯಾಗಿರಿಯ ‘ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ ಸಿಬಿಎಸ್‌ಸಿಯ ೨೦೨೦-೨೧ ನೆಯ ಸಾಲಿನ ೧೦ ನೆಯ ತರಗತಿಯ ಪರೀಕ್ಷೆಯಲ್ಲಿ ಚಿ. ಶ್ರೇಯಸ್ ಶೆಣೈ ಇವರು ಶೇ. ೯೫.೨  ರಷ್ಟು ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಹಾಗೂ ಶಾಲೆಗೆ ದ್ವಿತೀಯ ಸ್ಥಾನಗಳಿಸಿದ್ದಾರೆ. ಇವರು ಸನಾತನ ಸಾಧಕಿ ಸೌ. ಕವಿತಾ ಶೆಣೈ ಹಾಗೂ ಬಂಟ್ವಾಳ ತಿರುಮಲ ವೆಂಕಟರಮಣ ದೇವಸ್ಥಾನದ ಮೋಕ್ತೆಸರ ಶ್ರೀ. ಪುರುಷೋತ್ತಮ ಶೆಣೈ ಇವರ ದ್ವಿತೀಯ ಪುತ್ರನಾಗಿದ್ದಾನೆ.

ಅವರ ತಾಯಿ ಸೌ. ಕವಿತಾ ಶೆಣೈಯವರು ಚಿ. ಶ್ರೇಯಸ್ ಶೆಣೈ ಇವರ ಬಗ್ಗೆ ಹೇಳುತ್ತಾ, ‘ಪ್ರತಿದಿನ ಬೆಳಗ್ಗೆ ನಿಯಮಿತವಾಗಿ ಅರ್ಧಗಂಟೆ ಜಪ ಮಾಡುವುದು, ಪ್ರಾರ್ಥನೆ ಕೃತಜ್ಞತೆಯೊಂದಿಗೆ ವಿದ್ಯಾಭ್ಯಾಸ ಮಾಡುವುದು, ತಪ್ಪನ್ನು ಸ್ವೀಕರಿಸುವುದು ಪರಿಸ್ಥಿತಿ ಸ್ವೀಕಾರ ಮಾಡುವುದು, ತನಗೆಂದು ಕೊಟ್ಟ ಹಣದಲ್ಲಿ ಉಳಿತಾಯ ಮಾಡಿ ಪ್ರತಿವರ್ಷ ಗುರುಪೂರ್ಣಿಮೆಗೆ ತಾನಾಗಿ ಅರ್ಪಣೆ ಮಾಡುವುದು, ಮನೆಯಲ್ಲಿ ಕಿರಿಯನಾಗಿದ್ದರೂ ತಪ್ಪು ಕಂಡಲ್ಲಿ ತತ್ತ್ವನಿಷ್ಠೆಯಿಂದ ಹೇಳುವುದು ಆತನ ಗುಣವೈಶಿಷ್ಟ್ಯವಾಗಿದೆ, ಎಂದು ಹೇಳಿದ್ದಾರೆ.