೧. ‘ಕಾಲವನ್ನು ಸಂಪೂರ್ಣ ಶ್ರದ್ಧೆಯಿಂದ ಎದುರಿಸುವುದು ಸಾಧಕರ ಸಾಧನೆಯಾಗಿದೆ !
‘ಹೆಚ್ಚಿನ ಸಾಧಕರಿಗೆ ಈ ಆಪತ್ಕಾಲದಲ್ಲಿ ಸಾಧನೆಯನ್ನು ಮಾಡುವಾಗ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳನ್ನು ಎದುರಿಸಬೇಕಾಗುತ್ತಿದೆ. ಹಿಂದೆ ಋಷಿಮುನಿಗಳು ಮತ್ತು ಸಂತರು ಈಶ್ವರಪ್ರಾಪ್ತಿಗಾಗಿ ಅಪಾರ ಕಷ್ಟವನ್ನು ಸಹಿಸಿದ್ದಾರೆ. ಸನಾತನದ ಪ್ರತಿಯೊಬ್ಬ ಸಾಧಕನ ದೇಹವು ಯಜ್ಞಕುಂಡದಂತಾಗಿದೆ. ತೀವ್ರ ತೊಂದರೆಗಳಲ್ಲಿ ಅಸ್ಥಿರಗೊಳ್ಳದೆ ಸಾಧಕನು ತನ್ನ ಪ್ರತಿಯೊಂದು ಪ್ರಯತ್ನದ ಆಹುತಿಯನ್ನು ಈ ಧರ್ಮಯಜ್ಞದಲ್ಲಿ ಆನಂದದಿಂದ ನೀಡುತ್ತಿದ್ದಾನೆ. ಜೀವನದಲ್ಲಿ ಪ್ರತಿಯೊಂದು ವಿಷಯಕ್ಕೆ ತನ್ನದೇ ಒಂದು ಕಾಲವಿರುತ್ತದೆ. ‘ಅದನ್ನು ಸಂಪೂರ್ಣ ಶ್ರದ್ಧೆಯಿಂದ ಎದುರಿಸುವುದು ಇದು ಸಾಧಕರ ಸಾಧನೆಯಾಗಿದೆ. ಈ ಕಾಲವೂ ಹೊರಟು ಹೋಗುವುದು ಮತ್ತು ಗುರುಕೃಪೆಯಿಂದ ಒಳ್ಳೆಯ ಕಾಲವು ಬರುವುದು. ಅಲ್ಲಿಯವರೆಗೆ ಸಾಧಕರು ಅವರಿಗೆ ಹೇಳಿದ ವೈದ್ಯಕೀಯ ಚಿಕಿತ್ಸೆ ಮತ್ತು ಸಂತರು ಹೇಳಿದ ನಾಮಜಪಾದಿ ಉಪಾಯವನ್ನು ನಿಯಮಿತವಾಗಿ ಮಾಡಬೇಕು.
೨. ದೇಹವಿದ್ದರೆ, ಮಾತ್ರ ನಾವು ಸಾಧನೆಯನ್ನು ಮಾಡಬಹುದು. ಆದುದರಿಂದ ನಮ್ಮ ಆರೋಗ್ಯವು ಉತ್ತಮವಾಗಿರಲು ಆವಶ್ಯಕವಾಗಿರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಈ ಎಲ್ಲ ಪ್ರಯತ್ನಗಳನ್ನು ಸಾಧನೆಯೆಂದು ಮಾಡಿದರೆ, ಆ ಬಗ್ಗೆ ಬೇಸರ ಬರುವುದಿಲ್ಲ.
೩. ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುವ ಸಾಧಕರು ರಾಮರಾಜ್ಯಕ್ಕಾಗಿ ಭೋಗಿಸಿದ ಪ್ರತಿಯೊಂದು ತೊಂದರೆದಾಯಕ ಕ್ಷಣವನ್ನು ಸ್ವತಃ ಶ್ರೀವಿಷ್ಣುವು ತನ್ನ ವಿಷ್ಣುಮಂಡಲದಲ್ಲಿ ನೋಂದಣಿ ಮಾಡಿಟ್ಟಿದ್ದಾನೆ !
೪. ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಇವುಗಳಿಗಾಗಿ ಸಾಧಕರು ಮಾಡಿದ ತ್ಯಾಗದಿಂದ ಮುಂಬರುವ ಪೀಳಿಗೆಗಳಿಗೆ ಒಂದು ಸುಂದರ ಈಶ್ವರಾಧಿಷ್ಠಿತ, ಆನಂದಿ ಮತ್ತು ಆಧ್ಯಾತ್ಮಿಕ ಸಾಮ್ರಾಜ್ಯವು ದೊರಕಲಿದೆ !
ಇಂದು ಸಾಧಕರು ಸಮಷ್ಟಿ ಹಿತಕ್ಕಾಗಿ ತೊಂದರೆಯನ್ನು ಭೋಗಿಸುತ್ತಿದ್ದಾರೆ. ಆದುದರಿಂದ ಮುಂದಿನ ಪೀಳಿಗೆಗಳಿಗೆ ಒಂದು ಸುಂದರ ಈಶ್ವರಾಧಿಷ್ಠಿತ, ಆನಂದಿ ಮತ್ತು ಆಧ್ಯಾತ್ಮಿಕ ಸಾಮ್ರಾಜ್ಯವು ಪ್ರಾಪ್ತವಾಗಲಿದೆ. ಈ ಬಗ್ಗೆ ಪ್ರತಿಯೊಬ್ಬ ಸಾಧಕನು ಗಮನದಲ್ಲಿಡಬೇಕು. ಭಗೀರಥನು ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿ ಅಪಾರ ಕಷ್ಟಪಟ್ಟಿದ್ದರಿಂದ ಗಂಗೆಯು ಪೃಥ್ವಿಯಲ್ಲಿ ಅವತರಿಸಿದಳು. ಇಂದು ಆ ಗಂಗೆಯ ಕೃಪೆಯಿಂದ ಅನೇಕರ ಜೀವನವು ಪಾವನ ಮತ್ತು ಸಮೃದ್ಧವಾಗಿದೆ, ಹಾಗೆಯೇ ಸಾಧಕರು ತೆಗೆದುಕೊಂಡ ಅಪಾರ ಕಷ್ಟದಿಂದ ಮತ್ತು ಶ್ರೀ ಗುರುಗಳ ಸಂಕಲ್ಟದಿಂದ ಪೃಥ್ವಿಯಲ್ಲಿ ರಾಮರಾಜ್ಯವು ಬರುವುದು. ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಇವುಗಳಿಗಾಗಿ ಸಾಧಕರು ಮಾಡಿದ ಸರ್ವಸ್ವದ ತ್ಯಾಗವನ್ನು ಭಗವಂತನು ವ್ಯರ್ಥವಾಗಲು ಬಿಡುವುದಿಲ್ಲ. ಈ ತ್ಯಾಗವು ಮುಂದೆ ಎಷ್ಟೋ ಪೀಳಿಗೆಗಳ ಗಮನದಲ್ಲಿರುತ್ತದೆ. ಭಗವಂತನಿಗೂ ಇದರ ನೆನಪು ಉಳಿಯುವುದು.
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (೨೮.೪.೨೦೨೦)