೧. ಶರೀರದ ಪ್ರತಿಯೊಂದು ಘಟಕ ಸುದೃಢವಾಗಿರಲು ವ್ಯಾಯಾಮ ಆವಶ್ಯಕ
‘ವ್ಯಾಯಾಮವು ಆನಂದದಾಯಕವಾಗಿರುತ್ತದೆ. ಶರೀರದ ರಚನೆಯಲ್ಲಿ ನಮ್ಮ ಎಲ್ಲ ಅವಯವಗಳು, ಸ್ನಾಯು, ಮೂಳೆ, ರಕ್ತನಾಳ, ಚರ್ಮ, ಮೆದುಳು, ಬೆನ್ನುಹುರಿ ಮತ್ತು ನರತಂತು ಇವೆಲ್ಲವುಗಳೂ ಇರುತ್ತವೆ. ನಮಗೆ ಯಾವಾಗಲೂ ನಮ್ಮ ಶರೀರ ಸುದೃಢವಾಗಿರಬೇಕು, ನಮ್ಮ ಅವಯವಗಳ ಕಾರ್ಯಕ್ಷಮತೆ ಚೆನ್ನಾಗಿರಬೇಕು ಎಂದು ಅನಿಸುತ್ತದೆ. ಅವಯವಗಳ ಕಾರ್ಯಕ್ಷಮತೆ ಚೆನ್ನಾಗಿರಲು ವ್ಯಾಯಾಮದ ಆವಶ್ಯಕತೆ ಇರುತ್ತದೆ. ನಿಯಮಿತ ವ್ಯಾಯಾಮದ ಅನೇಕ ಲಾಭಗಳಿವೆ.
೨. ಶರೀರ ಸುದೃಢವಾಗಿರಲು ಮನಸ್ಸಿನ ಆರೋಗ್ಯವೂ ಚೆನ್ನಾಗಿರ ಬೇಕಾಗುತ್ತದೆ. ಕೇವಲ ಗುರುಕೃಪೆಯಿಂದಲೇ ಮನಸ್ಸು ನಿರ್ಮಲ ಮತ್ತು ಅನಾಸಕ್ತವಾಗುತ್ತದೆ.
೩. ಸಾಧನೆಯನ್ನು ಮಾಡಲು ಶರೀರ ಸುದೃಢವಾಗಿರುವುದು ಆವಶ್ಯಕ !
೩ ಅ. ರೋಗ ನಿವಾರಣೆಗಾಗಿ ಮತ್ತು ಸಾಧನೆ ವ್ಯವಸ್ಥಿತವಾಗಿ ಆಗಲು ವ್ಯಾಯಾಮ ಆವಶ್ಯಕ : ಕೆಲವು ಜನರು, ‘ನಾವು ಸಾಧನೆಯನ್ನು ಮಾಡುತ್ತೇವೆ, ಸಾಧನೆಯಿಂದ ಎಲ್ಲವೂ ಪ್ರಾಪ್ತವಾಗುತ್ತದೆ. ಹೀಗಿರುವಾಗ ವ್ಯಾಯಾಮ ಏಕೆ ಬೇಕು ?’ ಎಂದು ಕೇಳುತ್ತಾರೆ, ಆದರೆ ಇದಕ್ಕೂ ನಿಯಮಗಳಿವೆ. ‘ಈ ಜನ್ಮದಲ್ಲಿಯೇ ನನಗೆ ಪರಿಪೂರ್ಣ ಸಾಧನೆಯನ್ನು ಮಾಡಿ ಮೋಕ್ಷಕ್ಕೆ ಹೋಗಬೇಕಾಗಿದೆ. ನನ್ನ ರೋಗಗಳು ನನ್ನ ಕೊಡು-ಕೊಳ್ಳುವಿಕೆಯ ಲೆಕ್ಕದಿಂದಾಗಿ, ಅಂದರೆ ಕರ್ಮಗಳ ಸಂಚಿತದಿಂದ ಉಂಟಾಗಿವೆ. ಆದಿಭೌತಿಕ ರೋಗಗಳಿಗೂ ವ್ಯಾಯಾಮ ಉಪಯಕ್ತವಾಗಿದೆ. ಅದಕ್ಕಾಗಿ ಸಾಧನೆಯನ್ನು ಹೆಚ್ಚಿಸುವುದು ಆವಶ್ಯಕವಾಗಿದೆ.’ ಸಾಧನೆ ಹೆಚ್ಚಿಸಲು ಶರೀರ ಸಧೃಢವಾಗಿರುವುದು ಆವಶ್ಯಕವಾಗಿದೆ.
೩ ಆ. ಪ್ರಾರಬ್ಧಭೋಗವನ್ನು ಭೋಗಿಸಲು ಶರೀರ ಮತ್ತು ಮನಸ್ಸಿನ ದೌರ್ಬಲ್ಯವನ್ನು ದೂರ ಮಾಡುವುದು ಆವಶ್ಯಕ, ಆದುದರಿಂದ ಸಾಧನೆಯ ಜೊತೆಗೆ ನಿಯಮಿತ ವ್ಯಾಯಾಮ ಆವಶ್ಯಕ ! : ಶರೀರದ ಭೋಗಗಳು ಪ್ರಾರಬ್ಧಕ್ಕನುಸಾರ ಇರುತ್ತವೆ. ಸಾಧನೆಯಿಂದ ಪ್ರಾರಬ್ಧವೂ ಕಡಿಮೆಯಾಗುತ್ತಾ ಹೋಗುತ್ತದೆ. ಒಂದು ವೇಳೆ ನಾವು ಅಧ್ಯಾತ್ಮಿಕ ಜೀವನವನ್ನು ನಡೆಸುತ್ತಿದ್ದರೆ, ಶರೀರ ರಚನೆಯಲ್ಲಿನ ಯಾವುದಾದರೊಂದು ಹಾಳಾದ ಕ್ರಿಯೆಯನ್ನು ನಾವು ಗುರುಕೃಪೆಯಿಂದ ಮೊದಲಿನಂತೆ ಮಾಡಬಹುದು ಮತ್ತು ಪ್ರಾರಬ್ಧವನ್ನು ಜಯಿಸಬಹುದು. ಅದಕ್ಕಾಗಿ ಯೋಗ್ಯ ಕ್ರಿಯಮಾಣವನ್ನು ಉಪಯೋಗಿಸುವುದು ಆವಶ್ಯಕವಾಗಿರುತ್ತದೆ. ಅದಕ್ಕಾಗಿ ಆಲಸ್ಯವನ್ನು ತ್ಯಜಿಸಿ ಸಾಧನೆಯ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದೂ ಅಷ್ಟೇ ಆವಶ್ಯಕವಾಗಿದೆ.
೪. ವೃದ್ಧರಿಗೂ ವ್ಯಾಯಾಮ ಉಪಯುಕ್ತ
೪ ಅ. ವೃದ್ಧಾವಸ್ಥೆಯಲ್ಲಿನ ಶಾರೀರಿಕ ತೊಂದರೆಗಳಿಗೆ ವ್ಯಾಯಾಮ ಉಪಯುಕ್ತ ! : ವಯಸ್ಸಾದವರು, ‘ನಮಗೆ ವ್ಯಾಯಾಮದ ಆವಶ್ಯಕತೆ ಇಲ್ಲ’, ಎಂದು ಹೇಳುತ್ತಾರೆ. ಆದರೆ ಅವರಿಗೆ ವ್ಯಾಯಾಮ ಅತೀ ಆವಶ್ಯಕವಾಗಿರುತ್ತದೆ. ವ್ಯಾಯಾಮದಿಂದ ಸ್ನಾಯುಗಳು ಸಡಿಲವಾಗುತ್ತವೆ ಮತ್ತು ಶರೀರವನ್ನು ಸಕ್ಷಮವಾಗಿಡಬಹುದು. ಹಾಗೆಯೇ ಜೀರ್ಣಾಂಗ ವ್ಯೂಹ ಚೆನ್ನಾಗಿಡಲು ಬರುತ್ತದೆ. ವೃದ್ಧಾಪ್ಯದಲ್ಲಿ ಶೇ. ೭೫ ರಷ್ಟು ತೊಂದರೆಗಳು ಪಚನಕ್ಕೆ ಸಂಬಂಧಿಸಿರುತ್ತವೆ. ನಾವು ಅವುಗಳನ್ನು ವ್ಯಾಯಾಮದಿಂದ ಸರಿಪಡಿಸಬಹುದು ಆದುದರಿಂದ ವಯಸ್ಸಾದವರೂ ವೈದ್ಯರ ಸಲಹೆಗನುಸಾರ ಸಾಧ್ಯವಿರುವಷ್ಟು ವ್ಯಾಯಾಮಗಳನ್ನು ಮಾಡಬೇಕು.
೪ ಆ. ೬೨ ನೆಯ ವಯಸ್ಸಿನಲ್ಲಿ ‘ಸಾಯಟಿಕಾ’ದ ತೊಂದರೆ ಇದ್ದರೂ ವ್ಯಾಯಾಮದಿಂದ ತಂದೆಯವರ ಕಾಯಿಲೆ ಪೂರ್ತಿ ಗುಣವಾಗುವುದು : ನನ್ನ ತಂದೆ ೬೨ ವರ್ಷದವರಿರುವಾಗ ಅವರಿಗೆ ‘ಸಾಯಟಿಕಾ’ದ ತೊಂದರೆಯು ಪ್ರಾರಂಭವಾಯಿತು. ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ, ಆದರೂ ಅವರು ಸಾಧ್ಯವಾದಷ್ಟು ಯೋಗಾಸನಗಳನ್ನು ಮಾಡುತ್ತಿದ್ದರು. ನನಗೆ ‘ಈ ಯೋಗಾಸನಗಳಿಂದ ಏನಾಗುತ್ತದೆ ?’ ಎಂದು ಅನಿಸುತ್ತಿತ್ತು. ಆದರೆ ಆಶ್ಚರ್ಯವೆಂದರೆ, ನಿಧಾನವಾಗಿ ಅವರ ಆರೋಗ್ಯದಲ್ಲಿ ಸುಧಾರಣೆಯಾಗತೊಡಗಿತು. ಅವರ ವ್ಯಾಯಾಮ ಮಾಡುವ ಜಿಗುಟುತನ ಮತ್ತು ಸಾತತ್ಯ ಇವುಗಳಿಂದ ಅವರು ಸಂಪೂರ್ಣ ಗುಣಮುಖರಾದರು.
೫. ಆಪತ್ಕಾಲವನ್ನು ಎದುರಿಸಲು ಶರೀರ ಸಕ್ಷಮ ಮತ್ತು ಸುದೃಢವಾಗಿದ್ದರೆ ಸಾಧಕರನ್ನು ರಕ್ಷಿಸುವ ಈಶ್ವರನ ಅಮೂಲ್ಯ ಸಮಯ ಉಳಿಯುವುದು
ನಮಗೆ ತನು, ಮನ ಮತ್ತು ಧನದ ತ್ಯಾಗವನ್ನು ಮಾಡಿ ಗುರುಸೇವೆಯನ್ನು ದೀರ್ಘ ಕಾಲ ಮಾಡಬೇಕಾಗಿದೆ. ಒಂದು ವೇಳೆ ನಾವು ನಮ್ಮ ಆರೋಗ್ಯದ ಕಾಳಜಿಯನ್ನು ತೆಗೆದುಕೊಳ್ಳದಿದ್ದರೆ, ದೇವರಿಗೆ ಅವನ ಅಮೂಲ್ಯ ಸಮಯವನ್ನು ನೀಡಿ ನಮ್ಮ (ಸಾಧಕರ) ಕಾಳಜಿಯನ್ನು ವಹಿಸಬೇಕಾಗುವುದು. ಆದುದರಿಂದ ನಾವು ನಮ್ಮ ಕ್ರಿಯಮಾಣವನ್ನು ಉಪಯೋಗಿಸುವುದು, ಅಂದರೆ ವ್ಯಾಯಾಮದಿಂದ ಸಾಧನೆಗಾಗಿ ಶರೀರವನ್ನು ಸಕ್ಷಮವಾಗಿಡುವುದು ಆವಶ್ಯಕವಾಗಿದೆ. ಈಗ ಆಪತ್ಕಾಲವು ಆರಂಭವಾಗಿದೆ. ಅದನ್ನು ಎದುರಿಸಲು ನಮ್ಮಲ್ಲಿ ಬಲವಿರುವುದು ಆವಶ್ಯಕವಾಗಿದೆ. ಅದಕ್ಕಾಗಿಯೂ ಶರೀರ ಸಕ್ಷಮವಾಗಿರಬೇಕಾಗುತ್ತದೆ.
೬. ವ್ಯಾಯಾಮ ಮತ್ತು ಯೋಗಾಸನಗಳಿಂದ ಶರೀರದ ಎಲ್ಲ ಕ್ರಿಯೆಗಳು ಉತ್ತಮವಾಗಿ ಆಗಿ ಶರೀರ ಸಡಿಲಾಗುವುದು
ನಾವು ಹೆಚ್ಚಿನ ಸಾಧಕರು ಗಣಕಯಂತ್ರದ ಸೇವೆಯನ್ನು ಮಾಡುತ್ತೇವೆ. ನಾವು ಯಾವಾಗಲೂ ಒಂದೇ ಸ್ಥಿತಿಯಲ್ಲಿ ಕುಳಿತಿರುತ್ತೇವೆ. ಆಗ ಬಹಳವೆಂದರೆ ನಮ್ಮ ಬೆರಳುಗಳ ಚಲನವಲನ ವಾಗುತ್ತಿರುತ್ತದೆ; ಆದರೆ ಅದೂ ಸಹ ನೈಸರ್ಗಿಕವಾಗಿಲ್ಲ. ಸಾಧಕರು ಇತರ ಸೇವೆಗಳನ್ನೂ ಮಾಡುತ್ತಾರೆ; ಆದರೆ ಅವುಗಳಿಂದಲೂ ಎಲ್ಲ ಅವಯವಗಳ ಸಂಪೂರ್ಣ ಚಲನವಲನ ಆಗುವುದಿಲ್ಲ. ಆರೋಗ್ಯ ಚೆನ್ನಾಗಿರಲು ನಿದ್ದೆ, ಆಹಾರ, ಯೋಗ್ಯ ಪ್ರಮಾಣದಲ್ಲಿ ನೀರು ಕುಡಿಯುವುದು ಮತ್ತು ಸಾಧನೆಯನ್ನು ಮಾಡುವುದು ಆವಶ್ಯಕ ವಾಗಿದೆ. ಹೃದಯದ ಸ್ನಾಯುಗಳ ಕ್ಷಮತೆಯನ್ನು ಹೆಚ್ಚಿಸುವ ವ್ಯಾಯಾಮಗಳನ್ನು ೨೦ ರಿಂದ ೩೦ ನಿಮಿಷಗಳ ಕಾಲ ಮಾಡಬೇಕು. ಅದರಿಂದ ಹೃದಯ ಮತ್ತು ಫುಪ್ಫುಸಗಳ (ಶ್ವಾಸಕೋಶಗಳ) ಕ್ಷಮತೆ ಹೆಚ್ಚಾಗುವುದರೊಂದಿಗೆ ಚರ್ಮಕ್ಕೆ ಹೊಳಪು ಬರುತ್ತದೆ.
೭. ವ್ಯಾಯಾಮದ ಲಾಭಗಳು
ಅ. ವ್ಯಾಯಾಮದಿಂದ ಶಕ್ತಿ ಹೆಚ್ಚಾಗುತ್ತದೆ. ಅದರಿಂದ ವ್ಯಕ್ತಿಯ ಕಾರ್ಯಕ್ಷಮತೆ ಹೆಚ್ಚಾಗುತ್ತದೆ.
ಆ ಸ್ನಾಯುಗಳಿಗೆ ಬಲ ಸಿಗುತ್ತದೆ.
ಇ. ವ್ಯಕ್ತಿಗೆ ಬೇಗನೆ ಮತ್ತು ಗಾಢ ನಿದ್ದೆ ಬರುತ್ತದೆ.
ಈ ವ್ಯಾಯಾಮದಿಂದ ಮನಸ್ಸು ಮತ್ತು ಶರೀರ ನಿಧಾನವಾಗಿ ಒತ್ತಡಮುಕ್ತವಾಗುತ್ತವೆ.
ಉ. ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಬಹುದು.
ಊ. ಆರೋಗ್ಯ ಚೆನ್ನಾಗಿರುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ಎ. ಶರೀರ ಮತ್ತು ಮೆದುಳು ಶಾಂತವಾಗಿರುತ್ತವೆ.
ಸಾಧನೆಯನ್ನು ಮಾಡಲು ಮತ್ತು ಆಪತ್ಕಾಲದ ದೃಷ್ಟಿಯಿಂದ ಶರೀರ ಸದೃಢವಾಗಿರಲು ಸಾಧಕರು ನಿಯಮಿತವಾಗಿ ವ್ಯಾಯಾಮ, ಪ್ರಾಣಾಯಾಮ, ಬಿಂದುಒತ್ತಡ, ಯೋಗಾಸನ ಇತ್ಯಾದಿಗಳನ್ನು ಮಾಡುವುದು ಅನಿವಾರ್ಯವಾಗಿದೆ. ಕೊರೊನಾ ಮಹಾಮಾರಿಯ ಈ ಕಾಲದಲ್ಲಿ ನಮಗೆ ನಮ್ಮ ಪ್ರತಿಕಾರಕ್ಷಮತೆಯನ್ನು ಹೆಚ್ಚಿಸಲು ನಿಯಮಿತವಾಗಿ ವ್ಯಾಯಾಮ ಮಾಡುವುದು ಆವಶ್ಯಕವೇ ಆಗಿದೆ. ನಮ್ಮ ಸಾಧನೆಯ ಪ್ರವಾಸದಲ್ಲಿ ವ್ಯಾಯಾಮಗಳ ನಿರಂತರ ಆವಶ್ಯಕತೆ ಇದೆ. ಶಾರೀರಿಕ ತೊಂದರೆಗಳೊಂದಿಗೆ ಆಧ್ಯಾತ್ಮಿಕ ತೊಂದರೆಗಳಿಂದ ಬೇಗನೇ ಹೊರಗೆ ಬರಲು ಗುರುದೇವರ ಕೃಪೆಯಿಂದ ಬಿಂದುಒತ್ತಡದ ಪ್ರಕ್ರಿಯೆಯನ್ನು ಸಾಧಕರಿಗೆ ಕಲಿಸಲಾಗುತ್ತಿದೆ. ಈ ಎಲ್ಲವುಗಳ ಲಾಭವನ್ನು ನಮಗೆ ಮಾಡಿಕೊಳ್ಳಲು ಸಾಧ್ಯವಾಗಲಿ ಇದೇ ಗುರುಚರಣಗಳಲ್ಲಿ ಪ್ರಾರ್ಥನೆ.’
– ಆಧುನಿಕ ಪಶು ವೈದ್ಯ ಅಜಯ ಜೋಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೯.೯.೨೦೨೦)