ಮಹಾರಾಷ್ಟ್ರದ ಠಾಣೆಯ ಭಾರತೀಯ ಸಂಸ್ಕೃತಿಯ ಗಾಢ ಅಧ್ಯಯನಕಾರರು ಮತ್ತು ಹಿರಿಯ ಸಂಶೋಧಕರಾದ ಪೂ. ಡಾ. ಶಿವಕುಮಾರ ಓಝಾ ಇವರು ಬರೆದ ಗ್ರಂಥಮಾಲಿಕೆ ಆರಂಭ !

ಏರೋಸ್ಪೇಸ್ ಇಂಜಿನೀಯರಿಂಗ್‌ನಲ್ಲಿ ಪಿಎಚ್.ಡಿ. ಪ್ರಾಪ್ತಮಾಡಿಕೊಂಡ ಪೂ. ಡಾ. ಶಿವಕುಮಾರ ಓಝಾ (ವಯಸ್ಸು ೮೭ ವರ್ಷಗಳು) ಇವರು ‘ಐಐಟಿ, ಮುಂಬಯಿ’ಯಲ್ಲಿ ಪ್ರಾಧ್ಯಾಪಕರೆಂದು ಕಾರ್ಯನಿರತರಾಗಿದ್ದರು. ಆ ಸಮಯದಲ್ಲಿ ಅವರು ವಿವಿಧ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಿದರು, ಹಾಗೆಯೇ ವಿದೇಶಗಳಲ್ಲಿಯೂ ಅಧ್ಯಾಪನದ (ಬೋಧನೆಯನ್ನು ನೀಡುವ) ಕಾರ್ಯವನ್ನು ಮಾಡಿದರು. ಸೇವಾ ನಿವೃತ್ತಿಯ ನಂತರ ‘ಭಾರತೀಯ ಸಂಸ್ಕೃತಿ’ಯನ್ನು ಅರಿತುಕೊಳ್ಳುವುದರ ಬಗೆಗಿನ ಅವರ ವಿಶೇಷ ಒಲವು ಹೆಚ್ಚಾಯಿತು. ಅನಂತರ ಭಾರತೀಯ ಸಂಸ್ಕೃತಿಯೇ ಅವರ ಅಧ್ಯಯನ ಮತ್ತು ಅಧ್ಯಾಪನದ ಕ್ಷೇತ್ರವಾಯಿತು. ಅವರ ವಿಶೇಷ ಪ್ರಯತ್ನಗಳಿಂದ ‘ಭಾರತೀಯ ಸಂಸ್ಕೃತಿ’ ಈ ವಿಷಯವನ್ನು ‘ಐಐಟಿ, ಮುಂಬಯಿ’ಯಲ್ಲಿ ಕಲಿಸಲು ಪ್ರಾರಂಭಿಸಲಾಯಿತು, ಹಾಗೆಯೇ ಈ ವಿಷಯದ ಕುರಿತು ತಾವೇ ಅಧ್ಯಾಪನವನ್ನು ಮಾಡಿ ಅವರು ಅಲ್ಲಿನ ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಒಲವನ್ನು ಮೂಡಿಸಿದರು. ಪೂ. ಓಝಾಜಿಯವರು ಪ್ರಾಧ್ಯಾಪಕರೆಂದು ಕಾರ್ಯನಿರತರಾಗಿರುವ ಕಾಲಾವಧಿಯಲ್ಲಿ ‘ಭಾರತೀಯ ಸಂಸ್ಕೃತಿ’ ಈ ವಿಷಯವನ್ನು ಕಲಿಯುವವರ ಸಂಖ್ಯೆಯು ಪ್ರತಿವರ್ಷ ಹೆಚ್ಚಾಗುತ್ತಲೇ ಹೋಯಿತು.

ಭಾರತೀಯ ಸಂಸ್ಕೃತೀಯ ಗಾಢ ಅಧ್ಯಯಕಾರರು ಮತ್ತು ಹಿರಿಯ ಸಂಶೋಧಕರು ಮತ್ತು ಜ್ಞಾನಮಾರ್ಗಕ್ಕನುಸಾರ ಸಾಧನೆಯನ್ನು ಮಾಡಿ ಭಾರತೀಯ ಸಂಸ್ಕೃತಿಯ  ಉತ್ಥಾನಕ್ಕಾಗಿ ಸಮರ್ಪಿತ ಭಾವದಿಂದ ಅಲೌಕಿಕ ಕಾರ್ಯವನ್ನು ಮಾಡುವ ಮಹಾರಾಷ್ಟ್ರದ ಠಾಣೆಯ ಪೂ. ಡಾ. ಶಿವಕುಮಾರ ಓಝಾ ಇವರು ಬರೆದ ಗ್ರಂಥಗಳಲ್ಲಿನ ಆಯ್ದ ಬರವಣಿಗೆಯನ್ನು ‘ಸನಾತನ ಪ್ರಭಾತ’ದಲ್ಲಿ ಪ್ರತಿವಾರ ಪ್ರಕಟಿಸಲಾಗುವುದು. ಪೂ. ಡಾ. ಓಝಾ ಇವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಮುಂತಾದ ವಿಷಯಗಳ ಕುರಿತು ೧೧ ಗ್ರಂಥಗಳನ್ನು ಪ್ರಕಾಶಿಸಿದ್ದಾರೆ. ‘ಭಾರತೀಯ ಸಂಸ್ಕೃತಿ ಮಹಾನ ಮತ್ತು ವಿಲಕ್ಷಣ’ ಈ ಹೆಸರಿನ ಅವರ ೬೬೦ ಪುಟಗಳ ಗ್ರಂಥವು ಸನಾತನ ವೈದಿಕ ಸಂಸ್ಕೃತಿಯ ಸಾರರೂಪಿ ಗ್ರಂಥವಾಗಿದೆ. ಅವರ ಎಲ್ಲ ಗ್ರಂಥಗಳು ಹಿಂದಿ ಭಾಷೆಯಲ್ಲಿವೆ. ಅವುಗಳನ್ನು ಕನ್ನಡ ಭಾಷೆಯಲ್ಲಿ ಭಾಷಾಂತರ ಮಾಡಿ ಇಲ್ಲಿ ಪ್ರಕಟಿಸಲಾಗುತ್ತಿದೆ. ‘ಪೂ. ಡಾ. ಶಿವಕುಮಾರ ಓಝಾ ಇವರು ಬರೆದ ಯಾವ ಗ್ರಂಥದಲ್ಲಿ ಯಾವ ವಿಷಯ ಇದೆ ?’, ಇದರ ಸಂಕ್ಷಿಪ್ತ ಮಾಹಿತಿಯನ್ನು ನಮ್ಮ ವಾಚಕರಿಗಾಗಿ ಇಲ್ಲಿ ನೀಡುತ್ತಿದ್ದೇವೆ.

ಪೂ. ಡಾ. ಶಿವಕುಮಾರ ಓಝಾ

೧. ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’ ಈ ಗ್ರಂಥದಲ್ಲಿ ‘ಆಧುನಿಕ ಶಿಕ್ಷಣದಿಂದ ಮನುಷ್ಯನು ಭೌತಿಕ ಸುಖಗಳ ಕಡೆಗೆ ಆಸಕ್ತ ನಾದುದರಿಂದ ಯಾವ ಹಾನಿಯಾಯಿತು ? ‘ಶಿಕ್ಷಣ’ ಇದರ ಅರ್ಥ, ಆಂಗ್ಲ ಭಾಷೆಯಲ್ಲಿನ ಆಧುನಿಕ ಶಿಕ್ಷಣ ಮತ್ತು ಅದರಲ್ಲಿನ ದೋಷಗಳು, ಶಿಕ್ಷಣದಲ್ಲಿ ವಿವಿಧ ರೀತಿಯ ಶಾಸ್ತ್ರಗಳಿಗೆ ಸಾಕ್ಷಿ ಪುರಾವೆಗಳಿರುವುದು ಏಕೆ ಆವಶ್ಯಕವಾಗಿದೆ ? ಮತ್ತು ಅದರಿಂದಾಗುವ ಲಾಭಗಳು, ಶಿಕ್ಷಣದಲ್ಲಿ ಧರ್ಮವಿರುವುದು ಏಕೆ ಆವಶ್ಯಕವಾಗಿದೆ ? ಆಧುನಿಕ ಶಿಕ್ಷಣದಿಂದ ಯುವಕರ ವೈಚಾರಿಕ ಸ್ತರದಲ್ಲಾದ ಹಾನಿ’ ಹೀಗೆ ವಿವಿಧ ವಿಷಯಗಳ ಕುರಿತು ಚರ್ಚೆಯನ್ನು ಮಾಡಲಾಗಿದೆ.

೨. ‘ಭಾರತೀಯ ಸಂಸ್ಕೃತಿ ಸಮಝನಾ ಅನಿವಾರ್ಯ ಕ್ಯೂಂ ?’ ಈ ಗ್ರಂಥದಲ್ಲಿ ‘ಭಾರತೀಯ ಸಂಸ್ಕೃತಿ ಎಂದರೇನು ? ಭಾರತೀಯ ಸಂಸ್ಕೃತಿಯ ಕೇಂದ್ರಬಿಂದು ಯಾವುದು ? ಅದನ್ನು ತಿಳಿದು ಕೊಳ್ಳುವುದರಿಂದ ಯಾವ ಲಾಭಗಳಾಗುತ್ತವೆ ? ಭಾರತೀಯ ಸಂಸ್ಕೃತಿಯು ಸಂಸ್ಕೃತ ಭಾಷೆಗೆ ಹೆಚ್ಚು ಮಹತ್ವವನ್ನು ಏಕೆ ನೀಡಿದೆ ? ಭಾರತೀಯ ಸಂಸ್ಕೃತಿಯು ಧರ್ಮದ ಸ್ವರೂಪವನ್ನು ಯಾವ ರೀತಿ ತಿಳಿಸಿ ಹೇಳುತ್ತದೆ ? ಈ ಸಂಸ್ಕೃತಿಯ ಪಾಲನೆಯನ್ನು ಮಾಡುವುದರಿಂದ ಜೀವನದಲ್ಲಿನ ಧ್ಯೇಯವನ್ನು ಯಾವ ರೀತಿಯಲ್ಲಿ ಯೋಗ್ಯರೀತಿಯಲ್ಲಿ ಆಯ್ದುಕೊಳ್ಳಲು ಸಾಧ್ಯವಾಗುತ್ತದೆ ? ಕರ್ಮದ ವಿಜ್ಞಾನವು ಯಾವ ರೀತಿ ತಿಳಿಸಿ ಹೇಳುತ್ತದೆ ? ಅಂತಃ ಕರಣ ಶುದ್ಧಿಯ ಯಾವ ಉಪಾಯಗಳು ಸಂಸ್ಕೃತಿಯಲ್ಲಿವೆ ?’, ಇವುಗಳೊಂದಿಗೆ ಅನೇಕ ವಿಷಯಗಳ ಚರ್ಚೆಯನ್ನು ಮಾಡಲಾಗಿದ್ದು ‘ಭೌತಿಕವಾದಿ ಸಮಾಜದ ಸ್ಥಿತಿ ಮತ್ತು ಭಾರತೀಯ ಸಂಸ್ಕೃತಿ’ ಇವುಗಳಲ್ಲಿನ ಭೇದವನ್ನು ಸ್ಪಷ್ಟ ಮಾಡಿ ತೋರಿಸಲಾಗಿದೆ.

೩. ‘ಭಾರತೀಯ ಸಂಸ್ಕೃತಿ : ಕೇಂದ್ರಬಿಂದು ಎವಂ ತತ್ತ್ವ ಕ್ಯಾ ಹೈ ?’ ಈ ಗ್ರಂಥದಲ್ಲಿ ‘ಪೂಜೆ-ಪುನಸ್ಕಾರಗಳನ್ನು ಮಾಡುವುದು, ಧ್ಯಾನ, ಯೋಗ, ಪ್ರಾಣಾಯಾಮ, ಮಂತ್ರ-ಜಪ, ತಂತ್ರ, ಆಧ್ಯಾತ್ಮಿಕ ಪ್ರವಚನ ಇವೆಲ್ಲವೂ ನಿರ್ದಿಷ್ಟವಾಗಿ ಏತಕ್ಕಾಗಿವೆ ? ಇವೆಲ್ಲವುಗಳ ಕೇಂದ್ರಬಿಂದು ಯಾವುದು ? ಭಾರತೀಯ ಸಂಸ್ಕೃತಿ ಸರ್ವಶ್ರೇಷ್ಠವಾಗಿರುವುದರ ಹಿಂದಿನ ನಿರ್ದಿಷ್ಟ ಕಾರಣಗಳು, ಭಾರತೀಯ ಸಂಸ್ಕೃತಿಯು ಯಾವ ರೀತಿಯಲ್ಲಿ ಜೀವನದಲ್ಲಿ ಸ್ಥಿರತೆಯನ್ನು ನೀಡುತ್ತದೆ ? ಕೇವಲ ಭೌತಿಕ ಜ್ಞಾನವನ್ನು ಪ್ರಾಪ್ತಮಾಡಿಕೊಳ್ಳುವು ದರಿಂದ ಆಗುವ ಹಾನಿ’, ಇವುಗಳೊಂದಿಗೆ ಇತರ ವಿಷಯಗಳ ವಿಚಾರವನ್ನೂ ಮಾಡಲಾಗಿದೆ.

೪. ‘ಸಂಸ್ಕೃತ-ಹಿಂದಿ ಮಹತ್ವಪೂರ್ಣ ಕ್ಯೂಂ, ಪ್ರಚಾರ ಕೈಸೆ ಹೊ ?’ ಈ ಗ್ರಂಥದಲ್ಲಿ ‘ಸಂಸ್ಕೃತ ಭಾಷೆಯಲ್ಲಿನ ವಿಶೇಷ ಗುಣಗಳು, ಈ ಭಾಷೆಯಲ್ಲಿನ ಶಬ್ದಭಂಡಾರ; ಹಿಂದಿ, ಹಾಗೆಯೇ ಇತರ ಭಾಷೆಗಳ ಪ್ರಚಾರವನ್ನು ಹೆಚ್ಚಿಸಲು ವಿವಿಧ ಉಪಾಯಗಳು, ಶುದ್ಧ ಉಚ್ಚಾರದ ಮಹತ್ವ’, ಇವುಗಳೊಂದಿಗೆ ಇತರ ವಿಷಯಗಳ ಚರ್ಚೆಯನ್ನು ಮಾಡಲಾಗಿದೆ.

ಪೂ. ಡಾ. ಓಝಾರವರ ಈ ಗ್ರಂಥಗಳೆಂದರೆ ಧರ್ಮ, ಸಂಸ್ಕೃತಿ ಮತ್ತು ಅಧ್ಯಾತ್ಮದ ಅಧ್ಯಯನಕಾರರಿಗಾಗಿ ದೇವರು ನೀಡಿದ ಒಂದು ಅಮೂಲ್ಯ ಕೊಡುಗೆಯಾಗಿದೆ ಮತ್ತು ಹಿಂದೂ ಸಮಾಜಕ್ಕಾಗಿ ಅವು ಒಂದು ಅಮೂಲ್ಯ ಸಂಪತ್ತಾಗಿವೆ. ಈ ಗ್ರಂಥ ಗಳಲ್ಲಿನ ಜ್ಞಾನವೆಂದರೆ ಹಿಂದೂ ಧರ್ಮದಲ್ಲಿನ ಎಲ್ಲ ವಾಙ್ಮಯಗಳ ಸಾರವಾಗಿದೆ. ಆದುದರಿಂದ ಈ ಗ್ರಂಥಗಳಿಗೆ ಆಧಾರ ಗ್ರಂಥ ಳೆನ್ನುವುದೇ ಯೋಗ್ಯವಾಗಬಹುದು. ಶಾಸ್ತ್ರೀಯ ಸಾಕ್ಷಿಪುರಾವೆಗಳೊಂದಿಗೆ ನಿರ್ಮಾಣವಾದ ಈ ಜ್ಞಾನವನ್ನು ‘ಸನಾತನ ಪ್ರಭಾತ’ದಲ್ಲಿ ಅಂಶರೂಪದಲ್ಲಿ ಪ್ರಕಟಗೊಳ್ಳಲಿದ್ದರೂ ಪೂ. ಡಾ. ಓಝಾ ಇವರ ಗ್ರಂಥಗಳಲ್ಲಿನ ಈ ಜ್ಞಾನವನ್ನು ವಿವರವಾಗಿ ಅಧ್ಯಯನ ಮಾಡುವ ಅವಕಾಶವು ವಾಚಕರಿಗಿದೆ. ವಾಚಕರು ಈ ಅವಕಾಶದ ಲಾಭ ಪಡೆಯಬೇಕು.

ಪೂ. ಡಾ. ಓಝಾ ಇವರ ಗ್ರಂಥಗಳ ‘ಆನ್‌ಲೈನ್ ಖರೀದಿಗಾಗಿ ಭೇಟಿ ನೀಡಿ : SanatanShop.com

ವಾಚಕರಿಗೆ ವಿನಂತಿ !

ಕೇವಲ ಹಿಂದೂ ಸಮಾಜ ಮಾತ್ರವಲ್ಲ, ಜಗತ್ತಿನಾದ್ಯಂತದ ಎಲ್ಲರಿಗೂ ಅಧ್ಯಾತ್ಮದ ಶಿಕ್ಷಣವನ್ನು ನೀಡಲು ಪೂ. ಡಾ. ಓಝಾ ಇವರು ಬರೆದ ಗ್ರಂಥಗಳು ವಿವಿಧ ಭಾಷೆಗಳಲ್ಲಿ ಲಭ್ಯವಾಗುವುದು ಆವಶ್ಯಕವಾಗಿದೆ. ಪೂ. ಡಾ. ಓಝಾಜಿಯವರ ಗ್ರಂಥಗಳು ಸದ್ಯ ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ ಮಾತ್ರ ಲಭ್ಯವಾಗಿವೆ. ಇದರ ಹೊರತು ಇತರ ಭಾಷೆಗಳಲ್ಲಿ ಅವುಗಳನ್ನು ಭಾಷಾಂತರಿಸಲು ಇಚ್ಛಿಸುವ ವಾಚಕರು ಕೆಳಗಿನ ಸಂಚಾರವಾಣಿ ಅಥವಾ ವಿಳಾಸವನ್ನು ಸಂಪರ್ಕಿಸಬೇಕು.

ಸೌ. ಭಾಗ್ಯಶ್ರೀ ಸಾವಂತ : ಸಂಚಾರವಾಣಿ ಕ್ರ. 7058885610

ಗಣಕೀಯ ವಿಳಾಸ : [email protected]

ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ‘ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ.

ಪಿನ್403401