ವಿಕಲಾಂಗರನ್ನು ‘ದಿವ್ಯಾಂಗ’ರೆಂದು ಹೇಳುವುದು ಆಧ್ಯಾತ್ಮಿಕ ದೃಷ್ಟಿಯಿಂದ ಅಯೋಗ್ಯ!

‘ಕೇಂದ್ರ ಸರಕಾರದ ಆದೇಶದಂತೆ ಎಲ್ಲಡೆ ವಿಕಲಾಂಗರನ್ನು ‘ದಿವ್ಯಾಂಗ’ರೆಂದು ಸಂಬೋಧಿಸುವ ಶಬ್ದ ಪ್ರಯೋಗವು ಪ್ರಚಲಿತವಾಗಿದೆ. ಆಧ್ಯಾತ್ಮಿಕ ದೃಷ್ಟಿಯಿಂದ ದಿವ್ಯಾಂಗದ ಅರ್ಥವನ್ನು ನೋಡಿದರೆ `ದಿವ್ಯ+ಅಂಗ = ದಿವ್ಯಾಂಗ’ವಾಗುತ್ತದೆ. ದಿವ್ಯವಾದ ಅಂದರೆ ದೈವೀ ಅಥವಾ ಸೂಕ್ಷ್ಮ (ಅಂದರೆ ಲೌಕಿಕದೃಷ್ಟಿಯಿಂದ ಕಣ್ಣಿಗೆ ಕಾಣಿಸದೆ ಇರುವುದು) ಎಂದಾಗಿದೆ. ಇದರಿಂದ ದಿವ್ಯಾಂಗ ಎಂಬ ಶಬ್ದದ ಅರ್ಥ ‘ದೈವೀ ಅಥವಾ ಕಣ್ಣಿಗೆ ಕಾಣಿಸದೆ ಇರುವ ಸೂಕ್ಷ್ಮ ಅಂಗ’ ಎಂದು ಸಹ ಆಗುತ್ತದೆ. ಆದ್ದರಿಂದ ವಿಕಲಾಂಗ ಅಥವಾ ವಿಕಲಾಂಗವೆಂಬ ಶಬ್ದಕ್ಕಾಗಿ ದಿವ್ಯಾಂಗವೆಂಬ ಶಬ್ದವನ್ನು ಬಳಸುವುದು ಆಧ್ಯಾತ್ಮಿಕ ದೃಷ್ಟಿಯಿಂದ ಅಯೋಗ್ಯವಾಗಿದೆ.’