ಶ್ರೀಸತ್‌ಶಕ್ತಿ(ಸೌ.) ಬಿಂದಾ ಸಿಂಗಬಾಳ ಇವರು ಸಾಧನೆಯ ವಿಷಯದಲ್ಲಿ ಮಾಡಿದ ಅಮೂಲ್ಯ ಮಾರ್ಗದರ್ಶನ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

೧. ‘ಭಗವಂತನೇ ಸೂಚಿಸುತ್ತಾನೆ, ಭಗವಂತನೇ ಮಾತನಾಡಿಸಿಕೊಳ್ಳುತ್ತಾನೆ ಮತ್ತು ಅವನೇ ಎಲ್ಲವನ್ನು ಮಾಡಿಸಿಕೊಳ್ಳುತ್ತಾನೆ, ಎನ್ನುವ ಭಾವವನ್ನು ನಮ್ಮ ಅಂತರಂಗದಲ್ಲಿ ಜಾಗೃತವಾಗಿಟ್ಟುಕೊಂಡರೆ ನಮ್ಮ ಕರ್ತೃತ್ವ ತಾನಾಗಿಯೇ ನಾಶವಾಗುತ್ತದೆ !

ನಾವು ಮನಸ್ಸಿನಿಂದ ಮತ್ತು ತಳಮಳದಿಂದ ಸೇವೆಯನ್ನು ಮಾಡಿದರೆ, ಗುರುಕೃಪೆಯಿಂದ ಭಗವಂತನು ನಮಗೆ ಸೇವೆಯ ವಿಷಯದಲ್ಲಿ ಅಂಶಗಳನ್ನು ಸೂಚಿಸುತ್ತಾನೆ. ನಮ್ಮಲ್ಲಿ ಭಾವ ಮತ್ತು ತಳಮಳವಿದ್ದರೆ, ಸಾಧಕರಿಗೆ ಮಾರ್ಗದರ್ಶನ ಮಾಡುವ ಅಂಶಗಳನ್ನು ಸಹ ಅವನೇ ನಮ್ಮಿಂದ ಸ್ವಯಂಸ್ಫೂರ್ತಿಯಿಂದ ಹೇಳಿಸಿಕೊಳ್ಳುತ್ತಾನೆ. ನಾವು ನಿರ್ಜೀವ ಕಲ್ಲುಗಳಾಗಿದ್ದೇವೆ, ನಮ್ಮದೆನ್ನುವುದು ಇಲ್ಲಿ ಏನೂ ಇಲ್ಲ. ಗುರುಕೃಪೆಯಿಂದ ಭಗವಂತನೇ ಸೂಚಿಸುತ್ತಾನೆ, ಅವನೇ ಮಾತನಾಡಿಸಿಕೊಳ್ಳುತ್ತಾನೆ ಮತ್ತು ಅವನೇ ಎಲ್ಲವನ್ನೂ ಮಾಡುತ್ತಿರುತ್ತಾನೆ ಎಂಬ ಭಾವವನ್ನು ನಾವು ನಮ್ಮ ಅಂತರಂಗದಲ್ಲಿ ಜಾಗೃತವಾಗಿಡಲು ಸತತವಾಗಿ ಪ್ರಯತ್ನಿಸುತ್ತಿರ ಬೇಕು. ಇದರಿಂದಲೇ ನಮ್ಮಲ್ಲಿರುವ ಕರ್ತೃತ್ವ ನಾಶವಾಗುತ್ತದೆ.

೨. ನಾವು ಸಾಧಕರಿಂದ ದೂರವಾದರೆ, ದೇವರಿಂದಲೂ ದೂರವಾಗುತ್ತೇವೆ !

ನಾವು ಸಾಧಕರ ದೋಷಗಳನ್ನು ನೋಡಬಾರದು. ನಿಜ ಹೇಳಬೇಕೆಂದರೆ ನಮ್ಮ ಪ್ರತಿಯೊಬ್ಬ ಸಾಧಕನೂ ಸದ್ಗುಣಗಳ ಗಣಿಯಾಗಿದ್ದಾನೆ. ನಾವು ಅವನ ದೋಷಗಳ ಎದುರು ಅವನ ಗುಣಗಳನ್ನು ಬರೆದರೆ, ಗುಣಗಳೇ ಹೆಚ್ಚಾಗುವವು. ನಾವು ಪ್ರತಿಯೊಬ್ಬರಿಂದಲೂ ಕಲಿಯಲು ಪ್ರಯತ್ನಿಸಬೇಕು. ಸಾಧಕರಿಂದ ತಪ್ಪುಗಳಾದರೆ, ಅವರಿಗೆ ಸಹಾಯವಾಗಬೇಕೆಂದು ನಾವು ಅವರ ತಪ್ಪುಗಳನ್ನು ಹೇಳಬೇಕು; ಆದರೆ ಸಾಧಕರ ಬಗ್ಗೆ ಪೂರ್ವಗ್ರಹವನ್ನು ಇಟ್ಟುಕೊಳ್ಳಬಾರದು. ಒಂದು ವೇಳೆ ನಾವು ಸಾಧಕರಿಂದ ದೂರವಾದರೆ, ದೇವರಿಂದಲೂ ದೂರವಾಗುವೆವು ಎನ್ನುವುದನ್ನು ಯಾವಾಗಲೂ ಗಮನದಲ್ಲಿಡಬೇಕು.

೩. ಸಾಧಕರಲ್ಲಿರುವ ಪೂರ್ವಗ್ರಹ ನಾಶವಾದರೆ ಆಗುವ ಲಾಭ

ಸಾಧಕರಲ್ಲಿನ ಪರಸ್ಪರರ ಪೂರ್ವಗ್ರಹಗಳು ನಾಶವಾದರೆ, ತಾನಾಗಿಯೇ ಆತ್ಮೀಯತೆ ಮೂಡುತ್ತದೆ. ಪರಸ್ಪರರ ಆಧಾರವೆನಿಸತೊಡಗುತ್ತದೆ. ಈಶ್ವರೀ ಕಾರ್ಯ ಶೀಘ್ರವಾಗಿ ಮತ್ತು ಪರಿಪೂರ್ಣವಾಗಿ ಆಗ ತೊಡಗುತ್ತದೆ. ಎಲ್ಲರಲ್ಲಿ ಏಕಾತ್ಮಕತೆ ನಿರ್ಮಾಣವಾಗುವುದರಿಂದ ನಮಗೆ ಭಗವಂತನ ಊರ್ಜೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ. ನಮ್ಮ ಗುರುಗಳು ಮೋಕ್ಷಗುರುಗಳಾಗಿರುವುದರಿಂದ ಅವರು ಸಾಧಕರನ್ನು ಜನ್ಮ-ಮರಣದ ಚಕ್ರದಿಂದ ಮುಕ್ತಗೊಳಿಸುವವರೇ ಇದ್ದಾರೆ. ನಾವು ನಮ್ಮ ಸಾಧನೆಯ ಪ್ರಯತ್ನವನ್ನು ಎಷ್ಟು ಶೀಘ್ರಗತಿಯಿಂದ ಮತ್ತು ತಳಮಳದಿಂದ ಮಾಡುತ್ತೇವೆ, ಎನ್ನುವುದರ ಮೇಲೆ ನಮ್ಮ ಆಧ್ಯಾತ್ಮಿಕ ಪ್ರಗತಿ ಅವಲಂಬಿಸಿರುತ್ತದೆ.

೪. ಶರಣಾಗಿ ಸೇವೆಯನ್ನು ಮಾಡಿದರೆ ಭಾವ ಮತ್ತು ಆನಂದದ ಉತ್ಪನ್ನವಾಗಿ ಚಿಂತೆ ದೂರವಾಗುವುದು !

ನಾವು ನಮ್ಮ ದೋಷ ಮತ್ತು ಅಹಂಗಳ ಬಗ್ಗೆ ಕೌಟುಂಬಿಕ ಮತ್ತು ವ್ಯಾವಹಾರಿಕ ಸಮಸ್ಯೆಗಳ ಬಗ್ಗೆ ಅತೀ ವಿಚಾರ ಮಾಡುತ್ತೇವೆ. ನಿಜ ಹೇಳಬೇಕೆಂದರೆ ಪರಾತ್ಪರ ಗುರುದೇವರು ಪ್ರತಿಯೊಂದು ಸಮಸ್ಯೆಗೆ ಉಪಾಯವನ್ನು ಹೇಳಿದ್ದಾರೆ. ನಾವು ಕೇವಲ ಆ ದೃಷ್ಟಿಯಿಂದ ಪ್ರಯತ್ನಿಸಿ ಶರಣಾಗಿ ಸೇವೆಯನ್ನು ಮಾಡಬೇಕು. ಹೀಗೆ ಪ್ರಯತ್ನಿಸಿದರೆ ನಮ್ಮಲ್ಲಿ ಭಾವ ಮತ್ತು ಆನಂದ ಉತ್ಪನ್ನವಾಗುವುದು. ಆ ಮೇಲೆ ನಮ್ಮಲ್ಲಿ ಯಾವುದೇ ಚಿಂತೆ ಉಳಿಯುವುದಿಲ್ಲ.

೫. ಸತತವಾಗಿ ಸಾಧನೆಯಲ್ಲಿರುವುದರ ಲಾಭ !

ಸಾಧನೆಯ ಜಮಾ-ಖರ್ಚಿನ ವಿಚಾರವನ್ನು ಸತತವಾಗಿ ಮಾಡಬೇಕು. ‘ನಾನು ಎಲ್ಲಿ ಕಡಿಮೆ ಬೀಳುತ್ತಿದ್ದೇನೆ, ಎನ್ನುವುದನ್ನು ಯಾವಾಗಲೂ ನೋಡುತ್ತಿರಬೇಕು. ದಿನದಲ್ಲಿನ ಕೆಲವು ಗಂಟೆಗಳ ಬಳಿಕ ನಾವು ನಮ್ಮ ಸಾಧನೆಯ ಜಮಾ-ಖರ್ಚನ್ನು ನೋಡಬೇಕು. ನಾವು ಛಲದಿಂದ ಮತ್ತು ಸತತವಾಗಿ ಪ್ರಯತ್ನಿಸಿದರೆ ದೇವರು ನಮ್ಮನ್ನು ದೋಷ ಮತ್ತು ಅಹಂಗಳಿಂದ ಬೇಗನೆ ಮುಕ್ತಗೊಳಿಸುತ್ತಾನೆ ಮತ್ತು ಅಧ್ಯಾತ್ಮದಲ್ಲಿ ಮುಂದೆ ಕರೆದೊಯ್ಯುತ್ತಾನೆ. ಸಾಧನೆಯಿಂದ ನಮ್ಮಲ್ಲಿ ಎಷ್ಟೊಂದು ಅಮೂಲಾಗ್ರ ಬದಲಾವಣೆಯಾಗುತ್ತದೆ ಎಂಬುದರ ಕಲ್ಪನೆಯನ್ನೂ ನಾವು ಮಾಡಲಾರೆವು. ದೇವರು ನಮಗೆ ಯಾವ ಸ್ತರಕ್ಕೆ ಹೋಗಿ ಸಹಾಯ ಮಾಡುತ್ತಾನೆ, ಎಂಬುದನ್ನು ನಮಗೆ ಹೇಳಲೂ ಆಗುವುದಿಲ್ಲ.

೬. ಮನಸ್ಸಿನಲ್ಲಿರುವ ವಿಚಾರಗಳನ್ನು ಮುಕ್ತ ಮನಸ್ಸಿನಿಂದ ಹೇಳುವುದರ ಮಹತ್ವ

ಒಂದು ವೇಳೆ ನಾವು ವ್ಯಷ್ಟಿ ಸಾಧನೆಯ ವರದಿಯಲ್ಲಿ ಮನಸ್ಸಿನಲ್ಲಿ ಏನನ್ನೂ ಮುಚ್ಚಿಟ್ಟುಕೊಳ್ಳದೇ ಎಲ್ಲ ವಿಚಾರಗಳನ್ನು ಮುಕ್ತ ಮನಸ್ಸಿನಿಂದ ಹೇಳಿದರೆ, ನಾವು ಶೀಘ್ರಗತಿಯಿಂದ ಸಾಧನೆಯಲ್ಲಿ ಮುಂದೆ ಹೋಗುವೆವು. ಮನಸ್ಸಿನಲ್ಲಿ ಹೇಗಿದೆಯೋ, ಹಾಗೆ ಆತ್ಮನಿವೇದನೆಯನ್ನು ಮಾಡಲು ಬರಬೇಕು. ಇದರಿಂದ ನಮ್ಮ ಅಹಂ ಕಡಿಮೆಯಾಗಿ ಮನಸ್ಸು ನಿರ್ಮಲವಾಗುತ್ತ್ತಾ ಹೋಗುತ್ತದೆ. ಇಂತಹ ನಿರ್ಮಲ ಮನಸ್ಸಿನಲ್ಲಿಯೇ ಈಶ್ವರನಿಗೆ ವಾಸ ಮಾಡಲು ಇಷ್ಟವಾಗುತ್ತದೆ. ಇಂತಹ ನಿರ್ಮಲ ಮನಸ್ಸಿನಲ್ಲಿದ್ದು, ಅವನೇ ನಮ್ಮ ಪ್ರಗತಿಯನ್ನು ಶೀಘ್ರ ಗತಿಯಿಂದ ಮಾಡಿಸಿಕೊಳ್ಳುತ್ತಾನೆ.

೭. ಭಾವದ ಸಂದರ್ಭದಲ್ಲಿ ಆಶ್ರಮದಲ್ಲಿರುವ ಸಾಧಕರಿಗಾಗಿ ಮಾರ್ಗದರ್ಶನ !

ನಮ್ಮಲ್ಲಿ  ಪ್ರತಿಯೊಬ್ಬರಲ್ಲಿಯೂ ಭಾವವಿದೆ. ಆದ್ದರಿಂದಲೇ ನಮಗೆ ಆಶ್ರಮಕ್ಕೆ ಬರಲು ಸಾಧ್ಯವಾಗಿದೆ; ಆದರೆ ನಾವು ಅದೇ ಹಂತದಲ್ಲಿರಬಾರದು. ಗುರುಗಳ ಬಗ್ಗೆ ನಮಗಿರುವ ಭಾವವನ್ನು ಹೆಚ್ಚಿಸಲು ನಮ್ಮಿಂದ ಪ್ರಯತ್ನಗಳಾಗಬೇಕು. ಯಾವುದೇ ಗುಣ ನಮ್ಮಲ್ಲಿದ್ದರೂ, ಅದನ್ನು ಸತತವಾಗಿ ಹೆಚ್ಚಿಸಲು ನಮ್ಮಿಂದ ಪ್ರಯತ್ನಗಳಾಗಬೇಕು, ದೇವರಿಗೆ ಇದೇ ಅಪೇಕ್ಷಿತವಿದೆ.

೮. ಗುರುಗಳ ಆಶ್ರಮದ ಮಹತ್ವವನ್ನು ಮನಸ್ಸಿನ ಮೇಲೆ ಬಿಂಬಿಸಲು ಯಾವ ಪ್ರಯತ್ನಗಳನ್ನು ಮಾಡಬೇಕು ?

ಸಾಧನೆಯಲ್ಲಿ ಪ್ರತಿಯೊಂದು ಕ್ಷಣಕ್ಕೂ ಮಹತ್ವವಿದೆ. ನಾವು ಆಶ್ರಮದಲ್ಲಿರುವವರು ನಮ್ಮಲ್ಲಿ ಗುರುಗಳ ಬಗ್ಗೆ ಎಷ್ಟು ಕೃತಜ್ಞತಾಭಾವವಿದೆ ಎಂಬುದರ  ನಿರೀಕ್ಷಣೆಯನ್ನು ಮಾಡಬೇಕು. ನಮಗೆ ಆಶ್ರಮದಲ್ಲಿರಲು ಸಿಗುತ್ತಿದೆ, ಎಂಬುದನ್ನು ಯಾರೂ ಲಘುವಾಗಿ ಪರಿಗಣಿಸಬಾರದು ಮತ್ತು ಅದರ ಕಡೆಗೆ ಹಗುರವಾಗಿ ನೋಡಬಾರದು.

ಸಂತ ಏಕನಾಥ ಮಹಾರಾಜರ ಗುರುಸೇವೆಯ ಆದರ್ಶ ಉದಾಹರಣೆಯಿಂದ ಸಾಧಕರಿಗೆ ಶ್ರೀ ಸತ್‌ಶಕ್ತಿ(ಸೌ.) ಬಿಂದಾ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ !

‘ಸಂತ ಏಕನಾಥ ಮಹಾರಾಜರು ಶ್ರೀ ಜನಾರ್ದನಸ್ವಾಮಿಯವರ ಶಿಷ್ಯರಾಗಿದ್ದರು. ಅವರು ತಮ್ಮ ಗುರುಗಳ ಪ್ರತಿಯೊಂದು ಸೇವೆಯನ್ನು ಅತ್ಯಂತ ತಳಮಳದಿಂದ ಮಾಡುತ್ತಿದ್ದರು. ಒಮ್ಮೆ ಜನಾರ್ದನಸ್ವಾಮಿಗಳು ಅವರಿಗೆ ಜಮಾ-ಖರ್ಚಿನ ಸೇವೆಯನ್ನು ಮಾಡಲು ಹೇಳಿದರು. ಏಕನಾಥರಿಗೆ ಲೆಕ್ಕವನ್ನು ಮಾಡುವಾಗ ಒಂದು ಪೈಸೆಯ ಲೆಕ್ಕ ಸಿಗಲಿಲ್ಲ. ಅವರು ಎಲ್ಲ ವಹಿಗಳನ್ನು ಪರಿಶೀಲಿಸಿ ನೋಡಿದರು. ಅವರು ಆ ಸೇವೆಯಲ್ಲಿ ಎಷ್ಟು ಮಗ್ನರಾದರೆಂದರೆ, ರಾತ್ರಿಯಾಗಿರುವುದೂ ಅವರ ಗಮನಕ್ಕೆ ಬರಲಿಲ್ಲ. ಗಂಟಲು ಒಣಗಿದರೂ, ನಿದ್ದೆ ಬಂದು ಲೆಕ್ಕ ಪೂರ್ಣವಾಗದೇ ಹಾಗೆಯೇ ಉಳಿಯಬಹುದೆಂದು ಅವರು ನೀರನ್ನೂ ಕೂಡ ಕುಡಿಯಲಿಲ್ಲ. ಅವರು ಸೇವೆಯನ್ನು ಅರ್ಧಕ್ಕೆ ನಿಲ್ಲಿಸಲಿಲ್ಲ. ಅವರ ಸಂಪೂರ್ಣ ಚಿತ್ತದಲ್ಲಿ ಲೆಕ್ಕವೇ ತುಂಬಿತ್ತು.

ಬೆಳಗ್ಗೆ ಗುರುಗಳು ಬಂದು ನೋಡಿದಾಗ, ಏಕನಾಥರು ಇನ್ನೂ ಲೆಕ್ಕವನ್ನೇ ಮಾಡುತ್ತಿದ್ದರು. ಗುರುಗಳು ಅವರ ಹಿಂದೆ ನಿಂತು ಎಲ್ಲವನ್ನು ನೋಡುತ್ತಿದ್ದರು. ಅಷ್ಟರಲ್ಲಿ ಏಕನಾಥರಿಗೆ ಆ ಒಂದು ಪೈಸೆಯ ಲೆಕ್ಕ ಸಿಕ್ಕಿತು. ಅವರಿಗೆ ಅತ್ಯಾನಂದವಾಯಿತು. ಗುರುಗಳು ಮುಂದೆ ಬಂದು ಅವರಿಗೆ, ನಿನಗೆ ಏಕೆ ಇಷ್ಟು ಆನಂದವಾಗುತ್ತಿದೆ ? ಎಂದು ಕೇಳಿದರು. ಗುರುಗಳನ್ನು ನೋಡಿ ಏಕನಾಥರು ಅವರಿಗೆ ತಕ್ಷಣವೇ ನಮಸ್ಕರಿಸಿದರು ಮತ್ತು ಎಲ್ಲ ಲೆಕ್ಕವನ್ನು ಹೇಳಿದರು.

ಸಾವಿರಾರು ರೂಪಾಯಿಗಳ ಲೆಕ್ಕದಲ್ಲಿ ಒಂದು ಪೈಸೆಯ ತಪ್ಪು ! ಮತ್ತು ಅದನ್ನು ಕಂಡು ಹಿಡಿಯಲು ಅವರು ರಾತ್ರಿಯಿಡೀ ಜಾಗರಣೆ ಮಾಡಿದರು. ಯಾವ ಪರಿಯ ಗುರುಸೇವೆಯ ತಳಮಳ ! ಗುರುಗಳು ಖಂಡಿತವಾಗಿಯೂ ಅವರ ಸೇವೆಯಿಂದ ಪ್ರಸನ್ನರಾದರು. ಆಗ ಗುರುಗಳು ಏನು ಹೇಳಿರಬಹುದು ? ಅವರು ಏಕನಾಥರಿಗೆ, ‘ಈಗ ನಿನ್ನ ಚಿತ್ತ ಹೇಗೆ ಒಂದು ಪೈಸೆಯಲ್ಲಿ ಏಕಾಗ್ರವಾಗಿತ್ತೋ, ಹಾಗೆ ಭಗವಂತನ ಚರಣಗಳಲ್ಲಿ ಏಕಾಗ್ರವಾದರೆ, ನೀನು ಆತ್ಮಹಿತದ ಲಾಭವನ್ನು ಪಡೆದುಕೊಳ್ಳುವೆ ಎಂದು ಮಾರ್ಗದರ್ಶನ ಮಾಡಿದರು.

ಆ ಕ್ಷಣವೇ ಏಕನಾಥರು ಪ್ರಪಂಚದ ತ್ಯಾಗವನ್ನು ಮಾಡಿದರು. ಕೈಯಲ್ಲಿದ್ದ ಲೇಖನಿಯನ್ನು ಗುರುಚರಣಗಳಲ್ಲಿ ಅರ್ಪಿಸಿದರು. ಅಖಂಡ ಭಗವದ್ಭಕ್ತಿ ಮಾಡಿದರು. ‘ಗುರುಗಳೆಂದರೆ ತ್ರೈಲೋಕ್ಯದ ಒಡೆಯರಾಗಿದ್ದಾರೆ. ಅವರಿಂದ ಎಲ್ಲವೂ ಉತ್ಪನ್ನವಾಗಿದೆ, ಎನ್ನುವುದನ್ನು ತಿಳಿದು ಅವರು ಕೇವಲ ಗುರುಸೇವೆಯಲ್ಲಿಯೇ ಮಗ್ನರಾದರು. ಅವರು ಮುಂದೆ ಕೇವಲ ರಾಮನಾಮದ ವ್ಯಾಪಾರ ಮಾಡುವುದು ಎಂದು ನಿರ್ಧರಿಸಿದರು. ಗುರುಗಳು ನೀಡಿದ ನಾಮ, ಅವರು ಹೇಳಿದ ಸಾಧನೆ ಇತರರಿಗೆ ಹೇಳುತ್ತಿದ್ದರು. ಇದರಿಂದಲೇ ಅವರು ಸಂತರಾದರು.

ಇದು ಗುರುಸೇವೆಯನ್ನು ಹೇಗೆ ಮಾಡಬೇಕು ? ಎಂಬುದರ ಆದರ್ಶ ಉದಾಹರಣೆಯಾಗಿದೆ. ಇದರಿಂದ ಕಲಿತು ನಾವೂ ನಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು ಗುರುಸೇವೆಯನ್ನು ಮಾಡೋಣ. ಶ್ರೀವಿಷ್ಣುಸ್ವರೂಪ ಗುರುದೇವರು ಕೂಡ ನಮಗೆ ಸಮಷ್ಟಿ ಸೇವೆ ಹೇಳಿದ್ದಾರೆ. ಆ ಸಮಷ್ಟಿ ಸೇವೆಯಿಂದ ನಮ್ಮ ಎಲ್ಲ ಸಂಚಿತ ಮತ್ತು ಪ್ರಾರಬ್ಧ ಕಡಿಮೆಯಾಗುತ್ತಿರುತ್ತದೆ. ಹಾಗೆಯೇ ಸೇವೆಯ ಮೂಲಕ ಪುಣ್ಯಬಲ ಮತ್ತು ಸಾಧನೆಯ ಬಲ ಹೆಚ್ಚುತ್ತಿರುತ್ತದೆ. ಗುರುಗಳಿಗೆ ಅಪೇಕ್ಷಿತವಿರುವ ಸಾಧನೆಯನ್ನು ಮಾಡೋಣ ಮತ್ತು ಅವರ ಚರಣಗಳಲ್ಲಿ ಲೀನರಾಗೋಣ !

ಅಂಕ ‘ಬ್ರಹ್ಮನನ್ನು ಅನುಭವಿಸುವುದು ನಮ್ಮ ಸಾಧನೆಯಾಗಿದೆ ! – ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಲೆಕ್ಕಪತ್ರದ ಸೇವೆಯನ್ನು ಮಾಡುವ ಸಾಧಕರಿಗೆ ಮಾರ್ಗದರ್ಶನ ಮಾಡುವಾಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು, ‘ಲೆಕ್ಕಪತ್ರ ಸೇವೆ ಎಂದರೆ ಭಗವಂತನ ಭಾವವಿಶ್ವವನ್ನು ‘ಅಂಕಗಳ ಮೂಲಕ ಅನುಭವಿಸುವುದು. ಅಂಕ ಬ್ರಹ್ಮನನ್ನು,  ಅಂದರೆ ಈಶ್ವರನನ್ನು ಅನುಭವಿಸುವುದು ನಮ್ಮ ಸಾಧನೆಯಾಗಿದೆ. ಇದನ್ನು ಅನುಭವಿಸಲು ನಾವು ಪ್ರಯತ್ನಿಸಬೇಕು. ಈ ಸೇವೆಯ ಮಾಧ್ಯಮದಿಂದ ಅನೇಕ ಗುಣಗಳನ್ನು ವೃದ್ಧಿಸಲು ನಮಗೆ ಅವಕಾಶವಿದೆ. ಸಮಯ ಪಾಲನೆ, ಏಕಾಗ್ರತೆಯಂತಹ ಗುಣಗಳನ್ನು ವೃದ್ಧಿಸಿ, ನಮಗೆ ಸೇವೆಯನ್ನು ಪರಿಪೂರ್ಣತೆಯ ಕಡೆಗೆ ಕೊಂಡೊಯ್ಯಬೇಕಾಗಿದೆ. ನಾವು ಮಾಡಿದ ಸೇವೆಯಲ್ಲಿ ಜವಾಬ್ದಾರಿ ಸಾಧಕರಿಗೆ ಒಂದೂ ಸಂದೇಹಕ್ಕೆ ಆಸ್ಪದವಿರಬಾರದು, ಇಷ್ಟು ಪರಿಪೂರ್ಣತೆಯಿಂದ ಮತ್ತು  ತನ್ಮಯತೆಯಿಂದ ನಾವು ಸೇವೆಯನ್ನು ಮಾಡಬೇಕು. ಗುರುಸೇವೆಯೊಂದಿಗೆ ನಾವು ನಮ್ಮ ಸಾಧನೆಯಲ್ಲಿಯೂ ಪರಿಪೂರ್ಣತೆಯನ್ನು  ತರಬೇಕಾಗಿದೆ.