ಸಾಧನೆಯ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !
ಭಗವದ್ಗೀತೆ, ಜ್ಞಾನೇಶ್ವರಿ, ತುಕಾರಾಮ ಗಾಥಾ, ದಾಸಬೋಧ, ಏಕನಾಥಿ ಭಾಗವತ ಇವುಗಳಂತಹ ಗ್ರಂಥಗಳು ಇಂದಿಗೂ ಜನರ ನೆನಪಿನಲ್ಲಿವೆ. ಕೆಲವು ಶತಮಾನಗಳ ನಂತರ ಇಂದಿಗೂ ಅವುಗಳ ಅಧ್ಯಯನ ಮಾಡಲಾಗುತ್ತದೆ.
ಭಗವದ್ಗೀತೆ, ಜ್ಞಾನೇಶ್ವರಿ, ತುಕಾರಾಮ ಗಾಥಾ, ದಾಸಬೋಧ, ಏಕನಾಥಿ ಭಾಗವತ ಇವುಗಳಂತಹ ಗ್ರಂಥಗಳು ಇಂದಿಗೂ ಜನರ ನೆನಪಿನಲ್ಲಿವೆ. ಕೆಲವು ಶತಮಾನಗಳ ನಂತರ ಇಂದಿಗೂ ಅವುಗಳ ಅಧ್ಯಯನ ಮಾಡಲಾಗುತ್ತದೆ.
ಕೀರ್ತನಕಾರರು ಹಾಗೂ ಪ್ರವಚನಕಾರರು ತಾತ್ತ್ವಿಕ ಮಾಹಿತಿ ಹೇಳುತ್ತಾರೆ ಆದರೆ ನಿಜವಾದ ಗುರುಗಳು ಪ್ರಾಯೋಗಿಕ ಕೃತಿ ಮಾಡಿಸಿಕೊಂಡು ಶಿಷ್ಯನ ಪ್ರಗತಿ ಮಾಡಿಸಿಕೊಳ್ಳುತ್ತಾರೆ. – (ಪರಾತ್ಪರ ಗುರು) ಡಾ.ಆಠವಲೆ
ದೇವರು ಇತರ ಪ್ರಾಣಿಗಳಿಗೆ ಹೋಲಿಸಿದರೆ, ಮನುಷ್ಯನಿಗೆ ಸಾಧನೆಯ ಮೂಲಕ ಜನನ-ಮರಣದ ಚಕ್ರದಿಂದ ಮುಕ್ತನಾಗಲು ಕ್ರಿಯಮಾಣವನ್ನು ಕೊಟ್ಟಿದ್ದಾನೆ; ಆದರೆ ಅದನ್ನು ಬಳಸದ ಕಾರಣ ಅವರ ಜೀವನವು ಹುಳು-ಹುಪ್ಪಟೆಗಳಂತೆ ತಮ್ಮ ಸುಖಕ್ಕಾಗಿಯೇ ಜೀವಿಸುವಂತಾಗಿದೆ.
ಯೌವನ ಮತ್ತು ಗೃಹಸ್ಥಾವಸ್ಥೆಗಳು ಸಾಧನೆಗೆ ಪ್ರತಿಕೂಲವಾಗಿರುತ್ತವೆ; ಏಕೆಂದರೆ ಆಗ ವ್ಯಕ್ತಿಯು ವಿವಿಧ ಜವಾಬ್ದಾರಿಗಳ ಮಾಯೆಯಲ್ಲಿ ಸಿಲುಕುತ್ತಾನೆ. ವೃದ್ಧಾವಸ್ಥೆಯು ಸಾಧನೆಗೆ ಅತ್ಯಂತ ಪ್ರತಿಕೂಲವಾಗಿದೆ; ಏಕೆಂದರೆ ಆಗ ದೇಹ ಮತ್ತು ಮನಸ್ಸಿಗೆ ಸಾಧನೆ ಮಾಡುವ ಕ್ಷಮತೆ ಇರುವುದಿಲ್ಲ.
ರಾಜಕೀಯ ಪಕ್ಷದ ಕಾರ್ಯಕರ್ತರಿಗೆ ಸ್ವಾರ್ಥಕ್ಕಾಗಿ ಅವರ ಪಕ್ಷದ ಸರಕಾರ ಬೇಕಾಗಿರುತ್ತದೆ, ಆದರೆ ಸಾಧಕರಿಗೆ ಎಲ್ಲರಿಗೂ ಒಳಿತಾಗಲಿ, ಎಂದು ಈಶ್ವರೀ (ಧರ್ಮ)ರಾಜ್ಯ ಬೇಕಾಗಿದೆ.
– (ಪರಾತ್ಪರ ಗುರು) ಡಾ. ಆಠವಲೆ
ವೈಚಾರಿಕ ಸ್ವಾತಂತ್ರ್ಯವೆಂದರೆ ಇನ್ನೊಬ್ಬರನ್ನು ನೋಯಿಸುವುದು ಅಥವಾ ಧರ್ಮದ ವಿರುದ್ಧ ಮಾತನಾಡುವ ಸ್ವಾತಂತ್ರ್ಯವಲ್ಲ, ಇದು ಸಹ ಸ್ವಾತಂತ್ರ್ಯದಿಂದ ಕಳೆದ ೭೪ ವರ್ಷಗಳ ಕಾಲ ಭಾರತದಲ್ಲಿ ಆಡಳಿತ ನಡೆಸಿದ ಒಂದೇ ಒಂದು ರಾಜಕೀಯ ಪಕ್ಷದ ಗಮನಕ್ಕೆ ಬಂದಿಲ್ಲ.
ಹಿಂದಿನ ಕಾಲದಲ್ಲಿ, ಹಿಂದೂಗಳು ಧರ್ಮಾಚರಣಿ ಮತ್ತು ಧರ್ಮಾಭಿಮಾನಿಗಳಾಗಿದ್ದರು. ಆದ್ದರಿಂದ, ‘ಧರ್ಮೋ ರಕ್ಷತಿ ರಕ್ಷಿತಃ’ ಎಂದರೆ ‘ಧರ್ಮವನ್ನು ರಕ್ಷಿಸುವವನನ್ನು ಧರ್ಮ, ಅಂದರೆ ಈಶ್ವರನು ರಕ್ಷಿಸುತ್ತಾನೆ’, ಎನ್ನುವುದು ಅನ್ವಯವಾಗುತ್ತಿತ್ತು. ಪ್ರಸ್ತುತ ಕಾಲದಲ್ಲಿ ಹಿಂದೂಗಳು ಧರ್ಮಾಚರಣೆಯನ್ನು ಮಾಡುವುದಿಲ್ಲ.
ಎಲ್ಲಿ ಬಂಗಾಲದಲ್ಲಿಯ ಸಾಮ್ಯವಾದಿಗಳು ಹಾಗೂ ಮುಸಲ್ಮಾನರನ್ನು ಓಲೈಸುವ ಇಂದಿನ ಹಿಂದೂಗಳು ಮತ್ತು ಎಲ್ಲಿ ಹಿಂದೂ ಧರ್ಮಕ್ಕೆ ಜಗತ್ತಿನಲ್ಲಿ ಸವೋಚ್ಚ ಸ್ಥಾನವನ್ನು ಲಭಿಸುವಂತೆ ಮಾಡಿದ ಬಂಗಾಲದವರೇ ಆಗಿದ್ದ ರಾಮಕೃಷ್ಣ ಪರಮಹಂಸರ ಶಿಷ್ಯ ಸ್ವಾಮಿ ವಿವೇಕಾನಂದರು.
ಒಬ್ಬರು ಸ್ನಾತಕೋತ್ತರ ಶಿಕ್ಷಣವನ್ನು ಪಡೆಯಲು ಬಯಸಿದರೆ, ಅವರು ಪ್ರಾಥಮಿಕ, ಮಾಧ್ಯಮಿಕ, ಮಹಾವಿದ್ಯಾಲಯ, ಹೀಗೆ ಎಲ್ಲಾ ಹಂತದ ಶಿಕ್ಷಣವನ್ನು ಹಂತಹಂತವಾಗಿ ಪಡೆಯಬೇಕಾಗುತ್ತದೆ. ಅದೇ ರೀತಿ ಸಮಷ್ಟಿ ಸಾಧನೆ ಮಾಡಲು ವ್ಯಷ್ಟಿ ಸಾಧನೆಯ ಅಡಿಪಾಯವನ್ನು ಗಟ್ಟಿ ಮಾಡುವುದು ಆವಶ್ಯಕವಾಗಿದೆ.
ಹಿಂದೂ ರಾಷ್ಟ್ರಕ್ಕಾಗಿ ಪರಾಕಾಷ್ಠೆಯ ಪ್ರಯತ್ನ ಮಾಡಿ ನಷ್ಟ ಮಾಡುವುದು ಸುಲಭ. ಆದರೆ ತಯಾರಿಸುವುದು ಕಠಿಣವಿರುತ್ತದೆ ಆದರೂ ನಮಗೆ ಪ್ರಯತ್ನದ ಪರಾಕಾಷ್ಠೆ ಮಾಡಿ ಸಾಧಕ ಹಾಗೂ ಹಿಂದೂ ರಾಷ್ಟ್ರವನ್ನು ರೂಪಿಸಲಿಕ್ಕಿದೆ.