ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
ಕೀರ್ತನೆ ಹೇಳುವವರು ಹಾಗೂ ಪ್ರವಚನ ನೀಡುವವರು ತಾತ್ತ್ವಿಕ ಮಾಹಿತಿಯನ್ನು ಹೇಳುತ್ತಾರೆ. ನಿಜವಾದ ಗುರುಗಳು ಪ್ರಾಯೋಗಿಕ ಕೃತಿಯನ್ನು ಮಾಡಿಸಿಕೊಂಡು ಶಿಷ್ಯನ ಪ್ರಗತಿಯನ್ನು ಮಾಡುತ್ತಾರೆ.
ಕೀರ್ತನೆ ಹೇಳುವವರು ಹಾಗೂ ಪ್ರವಚನ ನೀಡುವವರು ತಾತ್ತ್ವಿಕ ಮಾಹಿತಿಯನ್ನು ಹೇಳುತ್ತಾರೆ. ನಿಜವಾದ ಗುರುಗಳು ಪ್ರಾಯೋಗಿಕ ಕೃತಿಯನ್ನು ಮಾಡಿಸಿಕೊಂಡು ಶಿಷ್ಯನ ಪ್ರಗತಿಯನ್ನು ಮಾಡುತ್ತಾರೆ.
ಹಿಂದಿನ ಯುಗಗಳಲ್ಲಿ ಸ್ವಭಾವದೋಷ ಕಡಿಮೆ ಇದ್ದಿದ್ದರಿಂದ ಯಾವುದೇ ಸಾಧನಾಮಾರ್ಗದಲ್ಲಿ ಸಾಧನೆಯನ್ನು ಮಾಡಿ ಸಾಧಕರು ಮುಂದೆ ಹೋಗುತ್ತಿದ್ದರು. ಆದರೆ ಕಲಿಯುಗದಲ್ಲಿ ಅನೇಕ ಸ್ವಭಾವದೋಷಗಳು ಇರುವುದರಿಂದ ಅದನ್ನು ಮೊದಲು ದೂರ ಮಾಡಬೇಕಾಗುತ್ತದೆ, ಅನಂತರವೇ ಸಾಧನೆ ಮಾಡಬಹುದು.
ಮನುಷ್ಯನು ಮೂಲದಲ್ಲಿಯೇ ಮತ್ತು ಸ್ವಭಾವದಿಂದಲೂ ಸ್ವಾರ್ಥಿ, ಲೋಭಿಯಾಗಿರುತ್ತಾನೆ. ಅವನ ನಡತೆಯ ಮೇಲೆ ರಾಜದಂಡದ ಅಂಕುಶ ಇಲ್ಲದಿದ್ದರೆ, ಅವನು ಯಾವುದೇ ಬಂಧನಗಳು ಇಲ್ಲದವನಾಗಲು ಸಮಯ ತಾಗುವುದಿಲ್ಲ.
ಕೀರ್ತನಕಾರರು ಮತ್ತು ಪ್ರವಚನಕಾರರು ಸೈದ್ಧಾಂತಿಕ ಮಾಹಿತಿಯನ್ನು ಹೇಳುತ್ತಾರೆ, ಆದರೆ ನಿಜವಾದ ಗುರುಗಳು ಪ್ರಾಯೋಗಿಕ ಕೃತಿಗಳನ್ನು ಮಾಡಿಸಿಕೊಂಡು ಶಿಷ್ಯನ ಪ್ರಗತಿ ಮಾಡುತ್ತಾರೆ !
ಮಕ್ಕಳಿಗೆ ಶಾಲೆಯಲ್ಲಿ ಹಿಂದೂ ಧರ್ಮ ಕಲಿಸದಿರುವುದರಿಂದ ಆದ ದುಷ್ಪರಿಣಾಮ ಇದುವರೆಗಿನ ೭೪ ವರ್ಷದವರೆಗೆ ಆಡಳಿತಗಾರರು ಮಕ್ಕಳಿಗೆ ಶಾಲೆಯಲ್ಲಿ ಹಿಂದೂ ಧರ್ಮವನ್ನು ಕಲಿಸದಿರುವುದರಿಂದ ಮಕ್ಕಳಿಗೆ ಹಿಂದೂ ಧರ್ಮದ ಮಹತ್ವವು ತಿಳಿದಿಲ್ಲ.
ಡಾ. ಸಚ್ಚಿದಾನಂದ ಶೇವಡೆ, ರಾಷ್ಟ್ರೀಯ ಪ್ರವಚನಕಾರರು ಹಾಗೂ ಸಾಹಿತ್ಯಕಾರರು, ಡೊಂಬಿವಲಿ, ಠಾಣೆ, ಮಹಾರಾಷ್ಟ್ರ
ಎಲ್ಲಿ ಸ್ವೇಚ್ಛೆಯಿಂದ ವರ್ತಿಸಲು ಉತ್ತೇಜಿಸಿ ಮಾನವನನ್ನು ಅಧೋಗತಿಗೆ ತಳ್ಳುವ ಬುದ್ಧಿಜೀವಿಗಳು ಮತ್ತು ಎಲ್ಲಿ ಮಾನವನಿಗೆ ಸ್ವೇಚ್ಛೆ ತ್ಯಾಗ ಕಲಿಸಿ ಈಶ್ವರಪ್ರಾಪ್ತಿ ಮಾಡಿಸುವ ಸಂತರು.
ಸಂಕಟಕಾಲದಲ್ಲಿ ಸಹಾಯಕ್ಕೆ ಬರಲೆಂದು ನಾವು ಬ್ಯಾಂಕ್‌ಗಳಲ್ಲಿ ಹಣವನ್ನಿಡುತ್ತೇವೆ. ಅದೇ ರೀತಿ ಸಂಕಟಕಾಲದಲ್ಲಿ ಸಹಾಯಕ್ಕೆ ಬರಲೆಂದು ಸಾಧನಾರೂಪಿ ಸಂಪತ್ತು ನಮ್ಮ ಬಳಿ ಇರುವುದು ಆವಶ್ಯಕವಾಗಿದೆ.
ಶರೀರ, ಮನಸ್ಸು ಹಾಗೂ ಬುದ್ಧಿಯಿಂದ ತಿಳಿಯುವಂತಹದ್ದು ವಿಶ್ವದಲ್ಲಿ ಶೇಕಡಾ ೧ ಲಕ್ಷಾಂಶದಷ್ಟೂ ಇಲ್ಲದಿರುವಾಗ ಅವರು ತಿಳಿಯುವಂತಹ ವಿಷಯಗಳನ್ನು ದೊಡ್ಡದು ಮಾಡುವವರ ಹೆಸರು ಇತಿಹಾಸದಲ್ಲಿ ಯಾವತ್ತಾದರೂ ನಮೂದಿಸಲ್ಪಡಬಹುದೇ ?
ಹಿಂದೂ ಧರ್ಮದ ಶ್ರೇಷ್ಠತೆ ದೇವರು ಎಲ್ಲೆಡೆ ಇದ್ದಾನೆ, ಪ್ರತಿಯೊಬ್ಬರಲ್ಲೂ ಇದ್ದಾನೆ, ಇದು ಹಿಂದೂ ಧರ್ಮದ ಶಿಕ್ಷಣವಾಗಿದೆ; ಹಾಗಾಗಿ ಹಿಂದೂಗಳಿಗೆ ಅನ್ಯ ಧರ್ಮೀಯರೊಂದಿಗೆ ದ್ವೇಷ ಸಾಧಿಸುವುದನ್ನು ಕಲಿಸಲಾಗುವುದಿಲ್ಲ.