ವ್ಯಷ್ಟಿ ಸಾಧನೆಯು ಉತ್ತಮವಾಗಲು ಕುಲದೇವರ ಉಪಾಸನೆ ಉಪಯುಕ್ತ
‘ಪ್ರತಿಯೊಬ್ಬ ಮನುಷ್ಯನು ಪ್ರಾರಬ್ಧವನ್ನು ಭೋಗಿಸಲು ಜನಿಸುತ್ತಾನೆ. ಕೇವಲ ಕುಲದೇವತೆಯ ದರ್ಶನ, ಅವಳ ನಾಮಸ್ಮರಣೆ ಮಾಡುವುದು, ಕುಲಾಚಾರಗಳ ಪಾಲನೆ ಮುಂತಾದ ಉಪಾಸನೆಗಳಿಂದ ಈ ಪ್ರಾರಬ್ಧವನ್ನು ಭೋಗಿಸಲು ಬಲ ಸಿಗುತ್ತದೆ. ಅದಕ್ಕಾಗಿ ಕುಲದೇವತೆಯ ಉಪಾಸನೆಯಿಂದಲೇ ಸಾಧನೆಯನ್ನು ಪ್ರಾರಂಭಿಸಬೇಕು. ಇದು ಸಾಧನೆಯ ಪ್ರಾಥಮಿಕ ನಿಯಮವಾಗಿದೆ, ಇದು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ಕುಲದೇವತೆ ತಿಳಿದಿಲ್ಲದಿದ್ದರೆ ಅವರು ‘ಶ್ರೀ ಕುಲದೇವತಾಯೈ ನಮಃ’ ಎಂದು ಅವಳ ನಾಮಜಪ ಮಾಡಬೇಕು.
– (ಪರಾತ್ಪರ ಗುರು) ಡಾ. ಆಠವಲೆ (೭.೨.೨೦೨೨)
ಶ್ರೀಮದ್ಭಗವದ್ಗೀತೆಯ ‘ನ ಮೆ ಭಕ್ತಃ ಪ್ರಣಶ್ಯತಿ |’ ಎಂಬ ವಚನಕ್ಕನುಸಾರ, ದೇವರು ಭಕ್ತರನ್ನು ಮಾತ್ರ ರಕ್ಷಿಸುತ್ತಾನೆ. ಸಾಧನೆ ಅಥವಾ ಧರ್ಮಕ್ಕಾಗಿ ಏನೂ ಮಾಡದಿರುವವರನ್ನು ದೇವರು ರಕ್ಷಿಸುವುದಿಲ್ಲ; ಹಾಗಾದರೆ ಮತಾಂಧರು ದಾಳಿ ಮಾಡಿದಲ್ಲಿ ದೇವರಂತೆ ಇತರರೂ ಅಂತಹವರನ್ನು ರಕ್ಷಿಸುವ ಬಗ್ಗೆ ಏಕೆ ವಿಚಾರ ಮಾಡುವರು ?
– (ಪರಾತ್ಪರ ಗುರು) ಡಾ. ಆಠವಲೆ
ವ್ಯಕ್ತಿಯ ಜೀವನದಲ್ಲಿ ವಯಸ್ಸಿಗನುಗುಣವಾಗಿರುವ ಹಂತಗಳಿಂದ ಅವನ ಸಾಧನೆಯ ಮೇಲಾಗುವ ಪರಿಣಾಮ !
‘ಬಾಲ್ಯತನವು ಸಾಧನೆಗೆ ಅತ್ಯಂತ ಪೂರಕವಾಗಿದೆ; ಏಕೆಂದರೆ ಆಗ ಮಾಯೆಯ ಆಕರ್ಷಣೆ ಇರುವುದಿಲ್ಲ. ಯೌವನ ಮತ್ತು ಗೃಹಸ್ಥಾವಸ್ಥೆಗಳು ಸಾಧನೆಗೆ ಪ್ರತಿಕೂಲವಾಗಿರುತ್ತವೆ; ಏಕೆಂದರೆ ಆಗ ವ್ಯಕ್ತಿಯು ವಿವಿಧ ಜವಾಬ್ದಾರಿಗಳ ಮಾಯೆಯಲ್ಲಿ ಸಿಲುಕುತ್ತಾನೆ. ವೃದ್ಧಾವಸ್ಥೆಯು ಸಾಧನೆಗೆ ಅತ್ಯಂತ ಪ್ರತಿಕೂಲವಾಗಿದೆ; ಏಕೆಂದರೆ ಆಗ ದೇಹ ಮತ್ತು ಮನಸ್ಸಿಗೆ ಸಾಧನೆ ಮಾಡುವ ಕ್ಷಮತೆ ಇರುವುದಿಲ್ಲ.
– (ಪರಾತ್ಪರ ಗುರು) ಡಾ. ಆಠವಲೆ (೨೧.೧.೨೦೨೨)
‘ಬಾಲ್ಯತನವು ಸಾಧನೆಗೆ ಅತ್ಯಂತ ಪೂರಕವಾಗಿದೆ; ಏಕೆಂದರೆ ಆಗ ಮಾಯೆಯ ಆಕರ್ಷಣೆ ಇರುವುದಿಲ್ಲ. ಅದಕ್ಕಾಗಿಯೇ ದೈವೀ ಬಾಲಕರ ಪ್ರಗತಿಯು ಶೀಘ್ರವಾಗಿ ಆಗುತ್ತದೆ.
(ಪರಾತ್ಪರ ಗುರು) ಡಾ. ಆಠವಲೆ (೨೧.೧.೨೦೨೨)