ಸಾಧನೆಯ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಕಾರ್ಯಪೂರ್ತಿಯ ಸಂದರ್ಭದಲ್ಲಿ ಪ್ರಯತ್ನ ಮತ್ತು ಯಜ್ಞಯಾಗ ಇವುಗಳ ಮಹತ್ವ

(ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ

‘ಪ್ರಯತ್ನಗಳಿಂದಾಗಿ ಯೋಗ (ಯಾವುದೋ ಒಂದು ಘಟನೆಯಕಾಲ) ವನ್ನು ಬದಲಾಯಿಸಬಹುದು. ಯಜ್ಞಯಾಗಗಳನ್ನು ಮಾಡಿದ ನಂತರವೂ ಯೋಗ (ಯಾವುದೋ ಒಂದು ಘಟನೆಯ ಘಟಿಸುವ ಕಾಲ) ವನ್ನು ಬದಲಾಯಿಸಬಹುದು.

– (ಪರಾತ್ಪರ ಗುರು) ಡಾ. ಆಠವಲೆ (೨.೨.೨೦೨೨)

ಇತರ ವಿಷಯಗಳಲ್ಲಿನ ಬರವಣಿಗೆಗಿಂತ ಆಧ್ಯಾತ್ಮಿಕ ವಿಷಯಗಳ ಮೇಲಿನ ಬರವಣಿಗೆ ಮಹತ್ವದ್ದು !

‘ಯಾವುದಾದರೊಂದು ಸಂಸ್ಥೆಯ ಅಧ್ಯಕ್ಷ, ಪದಾಧಿಕಾರಿಯಾಗಿರುವುದು ಅಥವಾ ದಿನಪತ್ರಿಕೆಯ ಸಂಪಾದಕರಾಗಿರುವುದು, ಇದನ್ನು ತುಂಬಾ ದೊಡ್ಡ ಗೌರವದ ವಿಷಯ ಎಂದು ತಿಳಿಯಲಾಗುತ್ತದೆ. ಇವೆರಡೂ ಹುದ್ದೆಗಳ ವಿಚಾರ ಮಾಡಿದರೆ, ಸಮಾಜದಲ್ಲಿ ಇದುವರೆಗೆ ಹಲವು ಸಂಸ್ಥೆಗಳ ಹೆಸರಾಂತ ಪದಾಧಿಕಾರಿ, ಹಾಗೆಯೇ ಹೆಸರಾಂತ ಸಂಪಾದಕರು ಆಗಿ ಹೋಗಿದ್ದಾರೆ. ಅನೇಕ ಪದಾಧಿಕಾರಿಗಳು ಅವರ ಸಂಸ್ಥೆಗಳ ಮೂಲಕ ಹಲವು ಸಮಾಜೋಪಯೋಗಿ ಕಾರ್ಯ ಮಾಡಿದ್ದಾರೆ. ಹಾಗೆಯೇ ಅನೇಕ ಸಂಪಾದಕರು ಅವರ ದಿನಪತ್ರಿಕೆಯ ಮೂಲಕ ಜನಪ್ರಬೋಧನೆಯ ಕಾರ್ಯ ಮಾಡಿದ್ದಾರೆ. ಹೀಗಿದ್ದರೂ, ಕೆಲವು ಅವಧಿಯ ನಂತರ ಜನರು ಅವರ ಕಾರ್ಯ, ಪ್ರಬೋಧನೆಯನ್ನು ಮರೆತಿದ್ದಾರೆ. ತದ್ವಿರುದ್ಧ ಭಗವದ್ಗೀತೆ, ಜ್ಞಾನೇಶ್ವರಿ, ತುಕಾರಾಮ ಗಾಥಾ, ದಾಸಬೋಧ, ಏಕನಾಥಿ ಭಾಗವತ ಇವುಗಳಂತಹ ಗ್ರಂಥಗಳು ಇಂದಿಗೂ ಜನರ ನೆನಪಿನಲ್ಲಿವೆ. ಕೆಲವು ಶತಮಾನಗಳ ನಂತರ ಇಂದಿಗೂ ಅವುಗಳ ಅಧ್ಯಯನ ಮಾಡಲಾಗುತ್ತದೆ. ಅಂದರೆ ಅಧ್ಯಾತ್ಮಕ್ಕೆ ಸಂಬಂಧಪಟ್ಟ ಅಂದರೆ ಸತ್ಯವನ್ನು ಹೇಳುವ ಕಾರ್ಯ, ಬರವಣಿಗೆ ಇವು ಚಿರಂತನವಾಗಿ ಉಳಿಯುವಂತಹದ್ದಾಗಿರುತ್ತವೆ. ಅದಕ್ಕಾಗಿ ನಾನೂ ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಅಧ್ಯಕ್ಷನಾಗಿದ್ದೆನು ಮತ್ತು ‘ಸನಾತನ ಪ್ರಭಾತ’ ಈ ನಿಯತಕಾಲಿಕೆಗಳ ಸಮೂಹ ಸಂಸ್ಥಾಪಕ-ಸಂಪಾದಕನೂ ಆಗಿದ್ದೆನು. ಪದಾಧಿಕಾರಿ, ಸಂಪಾದಕ ಇವುಗಳಂತಹ ಹುದ್ದೆಗಳ ತ್ಯಾಗ ಮಾಡಿ ಕೇವಲ ಚಿರಂತನವಾಗಿ ಉಳಿಯುವ ಅಧ್ಯಾತ್ಮದ ಮೇಲಿನ ಗ್ರಂಥಗಳ ಬರವಣಿಗೆಯನ್ನು ಮಾಡಲು ಪ್ರಾರಂಭಿಸಿದೆನು.

– (ಪರಾತ್ಪರ ಗುರು) ಡಾ. ಆಠವಲೆ (೨.೨.೨೦೨೨)