ಹಿಂದೂಗಳ ದುಃಸ್ಥಿತಿ ಮತ್ತು ಅದಕ್ಕಿರುವ ಏಕೈಕ ಪರಿಹಾರ ಎಂದರೆ ಸಾಧನೆಯನ್ನು ಮಾಡುವುದು !
ಹಿಂದಿನ ಕಾಲದಲ್ಲಿ, ಹಿಂದೂಗಳು ಧರ್ಮಾಚರಣಿ ಮತ್ತು ಧರ್ಮಾಭಿಮಾನಿಗಳಾಗಿದ್ದರು. ಆದ್ದರಿಂದ, ‘ಧರ್ಮೋ ರಕ್ಷತಿ ರಕ್ಷಿತಃ’ (ಮನುಸ್ಮೃತಿ, ಅಧ್ಯಾಯ ೮, ಶ್ಲೋಕ ೧೫) ಎಂದರೆ ‘ಧರ್ಮವನ್ನು ರಕ್ಷಿಸುವವನನ್ನು ಧರ್ಮ, ಅಂದರೆ ಈಶ್ವರನು ರಕ್ಷಿಸುತ್ತಾನೆ’, ಎನ್ನುವುದು ಅನ್ವಯವಾಗುತ್ತಿತ್ತು. ಪ್ರಸ್ತುತ ಕಾಲದಲ್ಲಿ ಹಿಂದೂಗಳು ಧರ್ಮಾಚರಣೆಯನ್ನು ಮಾಡುವುದಿಲ್ಲ ಮತ್ತು ಅವರಲ್ಲಿ ಧರ್ಮಾಭಿಮಾನ ಸಹ ಇಲ್ಲ. ಆದುದರಿಂದ, ‘ಮುಂಬರುವ ಆಪತ್ಕಾಲದಲ್ಲಿ ನಿಮ್ಮ ಮತ್ತು ನಿಮ್ಮ ಧರ್ಮದ ರಕ್ಷಣೆ ಮಾಡಲು ಸಾಧನೆ ಮಾಡಿರಿ’ ಎಂದು ಅವರಿಗೆ ಹೇಳಬೇಕಾಗುತ್ತಿದೆ.
– (ಪರಾತ್ಪರ ಗುರು) ಡಾ. ಆಠವಲೆ (೩೦.೧೨.೨೦೨೧)